ಮರದಿಂದ ಬಿದ್ದು ಯುವಕ ಸಾವು-Young man dies after falling from tree

SHIVAMOGGA || ANANDAPURA

ಮರದಿಂದ ಬಿದ್ದು ಯುವಕ ಸಾವು-Young man dies after falling from tree



ಜಾನುವಾರುಗಳಿಗೆ ಮೇವು ತರಲು ಕಾಡಿಗೆ ಹೋಗಿದ್ದ ಯುವಕನೊಬ್ಬ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಆನಂದಪುರ ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹೇಮಂತ್ (27) ಮೃತಪಟ್ಟ ದುರ್ದೈವಿ. 

ಫೆಬ್ರವರಿ 14ರ ಶನಿವಾರದಂದು ಹೇಮಂತ್ ಎಂದಿನಂತೆ ದನಕರುಗಳಿಗೆ ಮೇವು ಮತ್ತು ಸೊಪ್ಪು ತರಲು ಬಾಳೆಗುಂಡಿ ಕಾಡಿಗೆ ತೆರಳಿದ್ದರು. ಮರ ಹತ್ತಿ ಸೊಪ್ಪು ಕಡಿಯುತ್ತಿದ್ದ ಸಂದರ್ಭದಲ್ಲಿ ಕಡಿದ ಮರದ ರೆಂಬೆಯೊಂದು ಆಕಸ್ಮಿಕವಾಗಿ ಅವರ ಮರ್ಮಾಂಗಕ್ಕೆ ತಗುಲಿದೆ. ಏಟಿನ ರಭಸಕ್ಕೆ ಆಯತಪ್ಪಿದ ಹೇಮಂತ್ ಮರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಇದನ್ನು ಗಮನಿಸಿ ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅವರನ್ನು ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

Young man dies after falling from tree

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close