ಕುತೂಹಲ ಮೂಡಿಸಿದ ಎಆರ್ ನಡೆ- An intriguing AR move

 SUDDILIVE || SHIVAMOGGA

ಕುತೂಹಲ ಮೂಡಿಸಿದ ಎಆರ್ ನಡೆ-  An intriguing AR move  

Interguing, AR


ಹಾರನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರ ರಾಜೀನಾಮೆ ನೀಡಿ 21 ದಿನಗಳು ಕಳೆದರೂ ಸಹಕಾರ ಇಲಾಖೆಯ ಎಆರ್ ಶ್ರೀನಿವಾಸರವರು ಹಾಗೆ ಉಳಿಸಿಕೊಂಡಿರುವ ಬಗ್ಗೆ ಅನುಮಾನಗಳು ಮೂಡಿಸಿವೆ. 

ಹಾರನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ನಿರ್ದೇಶಕರ ಆಡಳಿತಮಂಡಳಿ ಸುಮಾರು ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿತ್ತು. ಸಂಘದ ಧನದಾಹಿ ಅಧ್ಯಕ್ಷ ಹನುಮಂತಪ್ಪನವರ ಉಪಟಳದಿಂದ 8 ಜನ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ. 

ರಾಜೀನಾಮೆ ನೀಡಿ ಕಳೆದ 21 ದಿನಗಳು ಕಳೆದರೂ ಎಆರ್ ಶ್ರೀನಿವಾಸ ಅವರು ಒಂದೋ ರಾಜೀನಾಮೆ ಪತ್ರವನ್ನ ಸ್ವೀಕರಿಸಬೇಕಿತ್ತು. ಅಥವಾ ಕೈಬಿಡಬೇಕಿತ್ತು. ಆದರೆ ಈ ಎರಡೂ ಮಾಡದ ಎಆರ್ ಅವರ ನಡೆ ಅನುಮಾನ ಮೂಡಿಸಿದೆ. ಸಂಘದ 12 ಜನ ನಿರ್ದೇಶಕರಲ್ಲಿ 8 ಜನ ನಿರ್ದೇಶಕರ ರಾಜೀನಾಮೆ ಹಾಗೆ ಉಳಿಸಿಕೊಂಡಿರುವ ಹಿಂದೆ ಎಆರ್ ಅವರ ರಾಜಕಾರಣದ ಬಗ್ಗೆ ಅನುಮಾನ ಹುಟ್ಟಿಸಿದೆ.

ಸಹಕಾರ ಕಾನೂನು ಪ್ರಕಾರ 15 ದಿನಗಳ ಒಳಗೆ ನಿರ್ದೇಶಕರ ರಾಜೀನಾಮೆ ಸ್ವೀಕರಿಸಬೇಕೆಂಬ ಕಾನೂನು ಇದ್ದರೂ ಎಆರ್ ಅವರು ರಾಜೀನಾಮೆ ಸ್ವೀಕರಿಸದೆ ಇರುವುದು ಸಹಕಾರ ಇಲಾಖೆಯ ಕಾರ್ಯವೈಖರಿಯನ್ನ ಪ್ರಶ್ನಿಸಿದೆ. ಡಿಆರ್ ಮತ್ತು ಸಂಬಂಧಪಟ್ಟ ಸಹಕಾರ ಇಲಾಖೆ ಅಧಿಕಾರಿ ಸೂಕ್ತಕ್ರಮ ವಹಿಸಬೇಕೆಂದು ಉಳಿದ ನಾಲ್ಕು ಜನ ನಿರ್ದೇಶಕರು ಆಗ್ರಹಿಸಿದ್ದಾರೆ.

ಸಹಕಾರ ಇಲಾಖೆ ಈ ರೀತಿ ನಡೆದರೆ ರೈತರ ಸಮಸ್ಯೆಗಳನ್ನ‌ ಬಗೆಹರಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಲಿದೆ ಎಂಬುದು ನಿರ್ದೇಶಕರ ಆರೋಪವಾಗಿದೆ. 

An intriguing AR move  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close