SUDDILIVE || SHIVAMOGGA
ಸುರೇಶ ಮತ್ತು ಸತೀಶ ನಡುವೆ ನಡೆದ ತೀಸ್ರಾದಿಂದ ಕಾರು ಜಖಂ-Car damaged in a fight between Suresh and Satish
ಸುರೇಶ್ ಮತ್ತು ಸತೀಶ್ ನಡುವಿನ ಕಚ್ಚಾಟದಲ್ಲಿ ಶರಾವತಿ ನಗರದ ಹಂದಿಜೋಗಿ ಕ್ಯಾಂಪ್ ನಲ್ಲಿ ಹೊಸ ಕಾರು ಜಖಂಗೊಂಡಿದೆ ಎಂದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಹಾನಿಗೊಳಿಸಿದ ಇಬ್ಬರು ಕಿಡಿಗೇಡಿಗಳನ್ನ ಪೊಲೀಸ್ ಬಂಧಿಸಿದ್ದಾರೆ.
ಮಾ.03 ರಂದು ರಾತ್ರಿ 11.40 ಕ್ಕೆ ಶರಾವತಿಯ ಹಂದಿಜೋಗಿ ಕ್ಯಾಂಪ್ ನಲ್ಲಿ ವಾಸವಾಗಿದ್ದ ಸುರೇಶ ಆರ್ ಬಿನ್ ರಾಮಣ್ಣ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನ ರಾತ್ರಿ ಮುಸುಕುಧಾರಿ ಅಪರಿಚಿತರು ಬಂದು ಕಾರು ನಂ KA 14 MC 0553 ರ ಮುಂಭಾಗದ ಗ್ಲಾಸ್, ಬಲಬದಿಯ 2 ಗ್ಲಾಸ್, ಹಿಂದಿನ ಗ್ಲಾಸ್ ಗಳನ್ನು ಒಡೆದು ಸುಮಾರು 2 ರಿಂದ 2.5 ಲಕ್ಷ ರೂ ಮೊತ್ತದ ನಷ್ಟ ಮಾಡಿದ್ದರು. ಈ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
2 ಜನ ಅಪರಿಚಿತರ ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣಾ ಪಿ.ಐ ಶ್ರೀ ಸತ್ಯನಾರಾಯಣ, ಹೆಚ್.ಸಿ 433 ಸಂದೀಪ್, ಪಿ.ಸಿ 1070 ಗಣೇಶ್, ಪಿ.ಸಿ 1224 ಗುರುನಾಯ್ಕ,ಪಿ.ಸಿ 1110 ಮನೋಹರ್ ರವರ ವಿಷೇಶ ತಂಡ ರಚನೆ ಮಾಡಿ ಆರೋಪಿ ಪತ್ತೆಗಾಗಿ ನೇಮಿಸಿದ್ದು, ಸದರಿ ತಂಡ ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ C.C ಕ್ಯಾಮರಾಗಳನ್ನು ಪರಿಶೀಲನೆ ಮಾಡಿ ಪ್ರಕರಣದ ಹಿನ್ನೆಲೆ ತಿಳಿದು ಆರೋಪಿ ಚಹರೆ ಗುರುತಿನ ಮೇಲೆ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿರುತ್ತದೆ.
1) ಶ್ರೀ ಶರತ್ ಕೆ ತಂದೆ ಕೃಷ್ಣಪ್ಪ, ವಾಸ ಚಾನಲ್ ಏರಿಯಾ 6 ನೇ ಕ್ರಾಸ್ ವಿನೋಬನಗರ, ಶಿವಮೊಗ್ಗ
2) ಪ್ರಶಾಂತ್ ಎ ತಂದೆ ಅಶೋಕ ವಾಸ 2 ನೇ ಕ್ರಾಸ್ ಮೇದಾರ ಕೇರಿ ವಿನೋಬನಗರ ಶಿವಮೊಗ್ಗ
3) ಸತೀಶ ಡಿ ಬಿನ್ ದುರ್ಗಪ್ಪ ಡಿ ವಾಸ, ವೀಣಾ ಶಾರದಾ ಶಾಲೆ ಹಿಂಭಾಗ 2 ನೇ ಕ್ರಾಸ್, ‘ಬಿ’ ಬ್ಲಾಕ್ ಶರಾವತಿ ನಗರ, ಶಿವಮೊಗ್ಗ
ಆರೋಪಿ ವಿಚಾರಣೆ ನಡೆಸಿದಾಗ, ಕಾರಿನಮಾಲೀಕ ಸುರೇಶ್ ಖರೀದಿ ಮಾಡಬೇಕಾಗಿದ್ದ ಮನೆಯನ್ನು 3 ನೇ ಆರೋಪಿ ಸತೀಶನು ಖರೀದಿ ಮಾಡಿದ್ದಾನೆ. ಮನೆ ಖರೀದಿ ಮಾಡಿದ ವಿಷಯದಲ್ಲಿ ಆರೋಪಿ ಸತೀಶನಿಗೂ, ಸುರೇಶ್ ನಿಗೆ ಜಗಳವಾಗುತ್ತಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು, ಪ್ರತಿಕೇಸು ದಾಖಲಾಗಿರುತ್ತದೆ. ಈ ವಿಷಯವನ್ನು ಸತೀಶ ತನ್ನ ಸ್ನೇಹಿತ ಶರತ್, ಪ್ರಶಾಂತ್ ಬಳಿ ಹೇಳಿಕೊಳ್ಳುತ್ತಿದ್ದನು ಈ ಹಿನ್ನಲೆಯಲ್ಲಿ ಶರತ್, ಪ್ರಶಾಂತ್, ಸತೀಶ ಸೇರಿ ಸುರೇಶನಿಗೆ ಸಂಬಂಧಿಸಿದ ಕಾರಿನ ಗ್ಲಾಸ್ ಅನ್ನು ಕುಡಿದ ಮತ್ತಿನಲ್ಲಿ ಒಡೆದು ಸುಮಾರು 2.5 ಲಕ್ಷ ರೂ ಮೊತ್ತದ ನಷ್ಟ ಮಾಡಿರುತ್ತಾರೆ ಎಂಬ ವಿಷಯ ತನಿಖೆಯಲ್ಲಿ ತಿಳಿದಿರುತ್ತದೆ.
Car damaged in a fight between Suresh and Satish

