SUDDILIVE || SHIVAMOGGA
ರೋಸ್ಟರ್ ಬಿಂದುಗಳನ್ನ ಸರಿಪಡಿಸಿ 56,432 ಹುದ್ದೆ ಭರ್ತಿ ಮಾಡುವಂತೆ ಡಿಎಸ್ಎಸ್ ಆಗ್ರಹ-DSS demands to correct roster points and fill 56,432 posts
ರೋಸ್ಟರ್ ಬಿಂದುಗಳಲ್ಲಿ ದೋಷಗಳನ್ನ ಸರಿಪಡಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಿ 56,432 ಹುದ್ದೆಗಳನ್ನ ತುಂಬಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುರುಮೂರ್ತಿ ಬಣ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ ಎಸ್ ಗುರುಮೂರ್ತಿ ಅವರು, ಭಾರತದಲ್ಲಿ ಶ್ರೇಷಿಕೃತ ಜಾತಿ ಇದೆ. ಮೀಸಲಾತಿ ಪಟ್ಟಿಯಲ್ಲಿರುವ ಕೆಲ ಜಾತಿಗಳು ಮೀಸಲಾತಿಗೆ ಬರುತ್ತಿರಲಿಲ್ಲ. ಹಾಗಾಗಿ ಇದನ್ನಗಮನದಲ್ಲಿಟ್ಟುಕೊಂಡು ಹೋರಾಟ ನಡೆಸಿಕೊಂಡು ಬಂದೆವು.ನ್ಯಾಯಮೂರ್ತಿ ಎಜೆ ಸದಾಶಿವ ಅವರನ್ನ ಸರ್ಕಾರ ನೇಮಿಸಿತ್ತು. 2005 ರಿಂದ ಅಧ್ಯಾಯನ ನಡೆಸಿದ ಸಮಿತಿ 2012 ರಲ್ಲಿ ಸರ್ಕಾರಕ್ಕೆ ನೀಡಿತು.
2022 ರಲ್ಲಿ ಬೊಮ್ಮಾಯಿ ಸರ್ಕಾರ ಸದಾಶಿವ ಆಯೋಗವನ್ನ ತಪ್ಪಿಸಿ ಉಪಸಮಿತಿ ರಚಿಸಿ 18% ರಿಂದ 24% ಕ್ಕೆ ಹೆಚ್ಚಿಸಿತು. ಆದರೆ ಕಾನ್ಸಟ್ಯೂಟಷನ್ 9 ಶೆಡ್ಯೂಲಿಗೆ ಸೇರಿಸಲಿಲ್ಲ. ಹಾಗಾಗಿ ಅದು ಬಿದ್ದುಹೋಗಿದೆ. ಬಿಜೆಪಿ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಒಳ ಮೀಸಲಾತಿ ಜಾರಿಗೊಫಿಸದೆ ಇದ್ದರೆ ವಿಧಾನ ಸೌಧ ಮುತ್ತಿಗೆ ಮಾಡುವುದಾಗಿ ಹೇಳಿಕೊಂಡಿದೆ.
ಆದರೆ ಅಧಿಕಾರದಲ್ಲಿದ್ದಾಗ 9th ಶೆಡ್ಯೂಲ್ ಜಾರಿಗೊಳಿಸಲಿಲ್ಲ. ಪಾದಯಾತ್ರೆ ಮಾಡಲು ಬಿಜೆಪಿಗೆ ನೈತಿಕತೆಯಿಲ್ಲ. ಕೊರಚ ಕೊರಮ ಮತ್ತಿತರು ಬೆಂಗಳೂರಿನಲ್ಲಿ ಪ್ರತಿಭಟಿಸಿ ಒಳ ಮೀಸಲಾತಿ ಬೇಡ ಎನ್ನುತ್ತಿದ್ದಾರೆ ಮತ್ತೊಂದು ಗುಂಪು ಜಾರಿ ಮಾಡಿ ಎನ್ನುತ್ತಿದ್ದಾರೆ. ಹಾಗಾಗಿ ರೋಸ್ಟರ್ ಬಿಂದುಗಳನ್ನ ಸರಿಪಡಿಸಿ 56,432 ಹುದ್ದೆಯನ್ನ ತುಂಬಿ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ ಎಂದರು.
ಹೊಲಯ ಸಮುದಾಯಕ್ಕೆ 1% ಸರ್ಪಕ್ಷ ಎಂಪಿಗಳನ್ನ ಸಿದ್ದರಾಮಯ್ಯನವರು ಪ್ರಧಾನಿ ಬಳಿ ಕರೆದುಕೊಂಡು ಹೋಗಿ ನೈಂಥ್ ಶೆಡ್ಯೂಲ್ ಗೆ ತರಬೇಕು. ಸಮುದಾಯದಗಳ ನಡುವೆ ಸಂಘರ್ಷಕ್ಕೆ ಕಾರಣ ಬಿಜೆಪಿಯಾಗಿದೆ. ಒಂದು ವೇಳೆ ಸರಿಪಡಿಸದಿದ್ದರೆ ಡಿಎಸ್ಎಸ್ ಪ್ರತಿಭಟನೆ ನಡೆಸಲಾಗುವುದು. ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ ರೋಸ್ಟರ್ ಬಿಂದುಗಳನ್ನ ಸರಿಪಡಿಸಬೇಕೆಂದು ಆಗ್ರಹಿಸಿದರು.
ಜಗದೀಶ್ ಚರ್ಚುಗುಂಡಿ, ಹನುಮಂತಪ್ಪ, ಚಂದ್ರಪ್ಪ ಜೋಗಿ ತಾಲೂಕು ಸಂಚಾಲಕರು ರಾಜಶೇಖರ್ ಶ್ರೀನಿವಾಸ್ ಗಣೇಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
DSS demands to correct roster points and fill 56,432 posts
