SUDDILIVE || SHIVAMOGGA
ಕಾರು ಟಚ್ ಮಾಡಿದ್ದಕ್ಕೆ ಏರ್ ಪೋರ್ಟ್ ಬಳಿ ಯುವಕನ ಹಲ್ಲೆ- Young man attacked near airport for touching car
ಕಾರು ಟಚ್ ಮಾಡಿಕೊಂಡು ಬಂದವನನ್ನ ನಗರದ ಏರ್ ಪೋರ್ಟ್ ಬಳಿ ಹಲ್ಲೆ ನಡೆಸಲಾಗಿದ್ದು, ಹಲ್ಲೆ ನಡೆಸಿದವನನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನ ಪ್ರಸನ್ನ(42) ಎಂದು ಗುರುತಿಸಲಾಗಿದೆ. ತರೀಕೆರೆಯಿಂದ ಕಾರಿನಲ್ಲಿ ಬಿಆರ್ ಪಿ ಮಾರ್ಗವಾಗಿ ಶಿವಮೊಗ್ಗದ ಕಡೆ ಹೊರಟಿದ್ದ ಪ್ರಸನ್ನ ಎಂಬುವರು ಕಾಚಿನಕಟ್ಟೆಯ ಬಳಿ ಮತ್ತೊಂದು ಕಾರಿಗೆ ಟಚ್ ಮಾಡಿದ್ದಾರೆ.
ಟಚ್ ಮಾಡಿ ಕಾರನ್ನ ನಿಲ್ಲಿಸದೆ ಮುಂದೆ ಸಾಗಿದ್ದಾರೆ. ಕಾರು ಟಚ್ ಮಾಡಿ ನಿಲ್ಲಿಸದ ಕಾರಣ ಆತನನ್ನ ಕೆಲ ಯುವಕರಗುಂಪು ಚೇಸ್ ಮಾಡಿಕೊಂಡು ಬಂದಿದೆ. ಬಂದು ಏರ್ ಪೋರ್ಟ್ ಬಳಿ ಅಡ್ಡಹಾಕಿ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಸ್ಯಾಂಟ್ರೋ ಕಾರನ್ನ ಚಲಸಯಿಸಿಕೊಂಡು ಬರುತ್ತಿದ್ದ ಪ್ರಸನ್ನ ಅವರನ್ನ ಅಡ್ಡಹಾಕಿ ಹಲ್ಲೆ ನಡೆಸಲಾಗಿದ್ದು ಅವರ ಮೂಗಿನಲ್ಲಿ ರಕ್ತ ಚಿಮ್ಮಿದೆ. ಖಾಸಗಿ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿದೆ. ತುಂಗ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಲ್ವರು ಮುಸ್ಲೀಂ ಯುವಕರ ವಿರುದ್ಧ ಎಫ್ಐಆರ್ ಆಗಿದೆ. ಘಟನೆ ನಿನ್ನೆ ರಾತ್ರಿ ಸುಮಾರು 10 ಗಂಟೆಯ ಸಮಯಕ್ಕೆ ನಡೆದಿದೆ.
Young man attacked near airport for touching car

