ಎಳನೀರು ಕುಡಿದು ತೋಟದ ಮಾಲೀಕನ ಮೇಲೆ ಹಲ್ಲೆ, ಆಸ್ಪತ್ರೆಯ ಗ್ಲಾಸು ಪೀಸ್ ಪೀಸ್-Farm owner attacked after drinking coconut water, hospital glass broken

 SUDDILIVE || BHADRAVATHI

ಎಳನೀರು ಕುಡಿದು ತೋಟದ ಮಾಲೀಕನ ಮೇಲೆ ಹಲ್ಲೆ, ಆಸ್ಪತ್ರೆಯ ಗ್ಲಾಸು ಪೀಸ್ ಪೀಸ್-Farm owner attacked after drinking coconut water, hospital glass broken    

Farm, water


ಮದ್ಯ ಸೇವಿಸಲು ಹೋದ ಯುವಕರು ತೋಟದ ಮಾಲೀಕರ ಜೊತೆ ಜಗಳವಾಡಿ ಅವರನ್ನೇ ಥಳಿಸಿದ ಘಟನೆ ಭದ್ರಾವತಿಯ ರತ್ನಾಪುರ ಗ್ರಾಮದಲ್ಲಿ ನಡೆದಿದೆ. 

ಉದ್ದವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭದ್ರಾವತಿಯಿಂದ ಚಲಿಸಿದಾಗ ಸಿಗುವ ರತ್ನಾಕರ ಗ್ರಾಮದಲ್ಲಿ ಮದ್ಯ ಸೇವಿಸಲು ತೆರಳುದ ಯುವಕರ ಗುಂಪು ಕೃಷ್ಣಪ್ಪನವರ ತೋಟದಲ್ಲಿ ಮದ್ಯ ಸೇವಿಸಿದೆ. ಮದ್ಯ ಸೇವಿಸಿ ಎಳನೀರು ಕದ್ದು ಕುಡಿಯುತ್ತಿದ್ದಾಗ ತೋಟದ ಮಾಲೀಕರಿಗೆ ಗೊತ್ತಾಗಿ ಸ್ಥಳಕ್ಕೆ ಧಾವಿಸಿದ್ದಾರೆ. 


ತೋಟದ ಮಾಲೀಕ ಕೃಷ್ಣಪ್ಪನವರ ಜೊತೆಗೆ ಯುವಕರ ತಂಡ ಜಗಳಕ್ಕಿಳಿದಿದ್ದು ಮಾಲೀಕನನ್ನೇ ಥಳಿಸಿದ್ದಾರೆ.‌ಮಾಲೀಕ ಕೃಷ್ಣಪ್ಪ ಅವರ ಮಗಸೇರಿ ಐದು ಜನರನ್ನ ಯುವಕರ ತಂಡ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಕೃಷ್ಣಪ್ಪ ಮತ್ತಿತರರು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಸಾರ್ವಜನಿಕರ ಆಸ್ಪತ್ರೆಗೂ ಯುವಕರ ತಂಡ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಆಸ್ಪತ್ರೆಯ ತುರ್ತುವಿಭಾಗದ ಬಾಗಿಲಿನ ಗ್ಲಾಸು, ಒಂದು ಕಿಟಕಿ ಗ್ಲಾಸನ್ನ ಒಡೆಯಲಾಗಿದೆ. ಈ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಪ್ತಿಯಲ್ಲಿ ಘಟನೆ ನಡೆದಿದೆ. ಎರಡೂ ಕಡೆ ದೂರು ಪ್ರತಿದೂರು ದಾಖಲಾಗುವ ಸಾಧ್ಯತೆಯಿದೆ. 

Farm owner attacked after drinking coconut water, hospital glass broken 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close