SUDDILIVE || SHIVAMOGGA
ಹರಿಗೆಯಲ್ಲಿ ಮನೆಗೆ ನುಗ್ಗಿ ದಾಂಧಲೆ, ದೂರು ಪ್ರತಿದೂರು ದಾಖಲು- House broken into and vandalized in Harige, complaint and counter-complaint filed
ಶಿವಮೊಗ್ಗದ ಹೊರವಲಯದಲ್ಲಿರುವ ಹಾಥಿ ನಗರದಲ್ಲಿ ನಾಯಿಗೆ ಊಟ ಹಾಕುವ ವಿಚಾರದಲ್ಲಿ ಗಲಾಟೆಯಾಗಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ನಾಯಿಗೆ ಅನ್ನ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ. ರಾಕೇಶ್ ಮತ್ತು ಸುನಿಲ್ ಜೋರಾಗಿ ಹಾರನ್ ಹೊಡೆದಿದ್ದಾರೆ ಜೋರಾಗಿ ಹಾರನ್ ಯಾಕೆ ಒಡೆಯುತ್ತೀರಿ ಎಂದು ಕೇಳಿದಕ್ಕೆ ಮನೆಗೆ ನುಗ್ಗಿ ದಾಂದಲೆಯಾಗಿದೆ ಎಂದು ಕುಮಾರಿ ಎಂಬುವರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುನಿಲ್, ರಾಕೇಶ್, ಸುನಿಲ್, ಚೇತು, ಅಭಿ, ರಂಜನ್, ವಿಕ್ಕಿ, ನಾಗರಾಜ, ಕಿರಣ್, ಚಿನ್ನು ಚೇತನ್, ಆಂತೋನಿ ಅವಿನಾಶ್, ಮೊದಲಾದವರ ವಿರುದ್ಧ ದೂರು ದಾಖಲಾಗಿದೆ. ದೂರುದಾರರಾದ ಕುಮಾರಿಯವರ ಮಗಳು ನಾಯಿಗೆ ಊಟ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ ರಾಕೇಶ್ ಸುನಿಲ್ ಜೋರಾಗಿ ಹಾರ ಹಾಕಿದ್ದು, ಇದರಿಂದ ಕುಮಾರಿ ಅವರ ಮಗಳು ಜೋರಾಗಿ ಕಿರುಚಿಕೊಂಡಿದ್ದಾಳೆ.
ಇದನ್ನು ಕೇಳಿಸಿಕೊಂಡು ಮನೆಯಿಂದ ಹೊರಗಡೆ ಬಂದ ಕುಮಾರವರ ಪ್ರತಿ ಗಣೇಶ್ ಹಾಗೂ ಪುತ್ರ ಚಿರಾಗ್ ಯಾಕೆ ಜೋರಾಗಿ ಹಾರನ ಹೊಡೆಯುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಸುನಿಲ್ ಬೈಕಿನಿಂದ ಇಳಿದು ಗಣೇಶ ಅವರ ಕೊಳಪಟ್ಟಿ ಹಿಡಿದು ಗಲಾಟೆ ಮಾಡಿದ್ದಾರೆ. ಮನೆಗೆ ನುಗ್ಗಿ ಪಾಟು, ಹೊಸದಾಗಿ ಖರೀದಿಸಿದ ಆಕ್ಸೆಸ್ 125 ದ್ವಿಚಕ್ರ ವಾಹನವನ್ನ ಜಖಂಗೊಳಿಸಿರುವುದಾಗಿ ದೂರು ದಾಖಲಿಸಿದ್ದಾರೆ.
ಪ್ರತಿ ದೂರಾಗಿ ಸುನಿಲ್ ಅವರು ಸಹ ಕುಮಾರಿ ಗಣೇಶ್ ನಾಗರಾಜ್ ಚಿರಾಗ್ ನಾಲ್ವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹಾಥಿ ನಗರದ ರಾಕೇಶ್ ಸ್ನೇಹಿತನಾಗಿದ್ದು ಅವರೊಂದಿಗೆ ಅವರ ಮನೆಗೆ ಹೋಗುತ್ತಿರುವ ಸಮಯದಲ್ಲಿ ಈ ನಾಲ್ವರು ರಾಕೇಶ್ ಅವರ ಮೊಬೈಲನ್ನು ಕಳಿಸಿ ಕೊಂಡು ಜಗಳವಾಡುತ್ತಿದ್ದರು ಜಗಳವನ್ನು ಬಿಡಿಸಲು ಹೋದಾಗ ಈ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂದು ಸುನಿಲ್ ರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
House broken into and vandalized in Harige, complaint and counter-complaint filed
