SUDDILIVE || SHIVAMOGGA
ಕಡೂರು ಟು ಆಗುಂಬೆ-ಆತ್ಮಹತ್ಯೆಗೆ ಹೊರಟಿದ್ದ ವೃದ್ಧರನ್ನ ಬಜಾವ್ ಮಾಡಿದ 112 ಪೊಲೀಸರು- Kadur to Agumbe - 112 police chased an elderly man who was about to commit suicide
ಆಗುಂಬೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತನ ಬಳಿ ಹೇಳಿಕೊಂಡಿದ್ದ 65 ವರ್ಷದ ವೃದ್ಧನನ್ನು112 ಪೊಲೀಸರು ರಕ್ಷಿಸಿದ್ದಾರೆ. ಜೀವನದಲ್ಲಿ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದ ಕಡೂರು ತಾಲೂಕಿನ ನಿವಾಸಿಯನ್ನ ಪೊಲೀಸರಿಂದ ರಕ್ಷಣೆಗೊಳಗಾಗಿ ಅವರ ಮಗನೊಂದಿಗೆ ಕಳುಹಿಸಿಕೊಟ್ಟ ರೋಚಕ ಕಹಾನಿಯಿದು.
ಕಡೂರು ತಾಲೂಕಿನ ದೋಗಿಹಳ್ಳಿಯ ಚಂದ್ರಪ್ಪ (65) ಮನನೊಂದು ಆಗುಂಬೆಗೆ ಬಂದು ಅತ್ಮಹತ್ಯೆಗೆ ನಿರ್ಧರಿಸಿದ್ದರು. ಕಡೂರಿನ ದೋಗಿಹಳ್ಳಿಯಿಂದ ವೃದ್ಧ ಚಂದ್ರಪ್ಪ ಮಗ ವಿಶ್ವನಾಥರಿಗೂ ತಿಳಿಸದೆ ಮಧ್ಯಾಹ್ನ 1-15 ಕ್ಕೆ ಶಿವಮೊಗ್ಗಕ್ಕೆ ಬಂದಿಳಿದಿದ್ದರು.
ಚಂದ್ರಪ್ಪರವರು ತಾನು ಹೀಗೆ ಮನನೊಂದಿರುವೆ ಆಗುಂಬೆಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನನ್ನ ಕೊನೆಯದಾಗಿ ಮಾತನಾಡಿಸಿಕೊಂಡು ಹೋಗುವೆ ಸಿಗ್ತ್ಯಾ ಎಂದು ಶಿವಮೊಗ್ಗದಲ್ಲಿ ಪರಿಚಯವಿದ್ದ ಸ್ನೇಹಿತನಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಕೇಳಿದ್ದಾರೆ. ಇಲ್ಲ ನಾನು ದಾವಣಗೆರೆಯಲ್ಲಿದ್ದೇನೆ ಎಂದು ತಿಳಿಸಿರುವ ಚಂದ್ರಪ್ಪನವರ ಸ್ನೇಹಿತ ತಂದೆಯ ನಿರ್ಧಾರವನ್ನ ಮಗ ವಿಶ್ವನಾಥ್ ಗೆ ರವಾನಿಸಿದ್ದಾರೆ.
ಸರಿಯೆಂದು ಆತ್ಮಹತ್ಯೆಗೆ ನಿರ್ಧರಿಸಿದ್ದ ಚಂದ್ರಪ್ಪ ಅವರು ತಮ್ಮ ಪ್ರಯಾಣವನ್ನ ತೀರ್ಥಹಳ್ಳಿ ಮೂಲಕ ಆಗುಂಬೆಗೆ ಖಾಸಗಿ ಬಸ್ ನಲ್ಲಿ ಮುಂದುವರೆಸಿದ್ದಾರೆ. ಸಂಜೆ 4.20 ರ ಹೊತ್ತಿಗೆ ಇಆರ್ ಎಸ್ 112 ತೀರ್ಥಹಳ್ಳಿಗೆ ಅವರ ಮಗ ವಿಶ್ವನಾಥ್ ತನ್ನ ತಂದೆ ಹೀಗೆ ಹೇಳಿ ಹೋಗುತ್ತಿರುವುದರ ಬಗ್ಗೆ ವಿವರಣೆ ನೀಡಿ ಫೊಟೊ ಹಾಕಿದ್ದಾರೆ.
3-30 ರ ಹೊತ್ತಿಗೆ ಚಂದ್ರಪ್ಪನವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇಷ್ಟುಹೊತ್ತಿಗೆ ಇಆರ್ ಎಸ್ 112 ಪೊಲೀಸ್ ಕರ್ತವ್ಯದಲ್ಲಿದ್ದ ಲೋಕೆಶ್ ಎಂಇ ಮತ್ತು ಜಾಫರ್ ಎಂಬುವರು ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ ಗಳನ್ನ ತಪಾಸಣೆ ಮಾಡಿದ್ದಾರೆ. ಲೋಕೇಶ್ ಅವರು ಮಾಡಿದ ಒಂದೇ ಒಂದು ಕರೆಗೆ ಸ್ವಿಚ್ ಆಫ್ ಆಗಿದ್ದ ಚಂದ್ರಪ್ಪನವರ ಮೊಬೈಲ್ ರಿಂಗಣಿಸಲು ಆರಂಭಿಸಿದೆ. ಕರೆ ಸ್ವೀಕರಿಸಿದ ಚಂದ್ರಪ್ಪನವರ ಮನವೊಲಿಸಿದ ಜಾಫರ್ ಮತ್ತು ಲೋಕೇಶ್ ಠಾಣೆಗೆ ಕರೆ ತಂದಿದ್ದಾರೆ.
ಠಾಣೆಗೆ ಮಗ ವಿಶ್ವನಾಥ್ ರನ್ನ ಕರೆಯಿಸಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಬಡಪಾಯಿಯ ಜೀವವನ್ನ ಇಆರ್ ಎಸ್ ನ ಜಾಫರ್ ಮತ್ತು ಲೋಕೇಶ್ ಬಜಾವ್ ಮಾಡಿದ್ದಾರೆ. ಈ ವಿಶ್ವನಾಥ್ ಅವರು ಸಹ ಲಿಂಗದಹಳ್ಳಿಯಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಘಟನೆ ನಿನ್ನೆ ನಡೆದಿದೆ.
Kadur to Agumbe - 112 police chased an elderly man who was about to commit suicide

