ಬಹುದಿನದ ಬೇಡಿಕೆಗೆ ಸ್ಪಂದಿಸಿದ ಶಾಸಕಿ ಶಾರದಾ ಪೂರ್‍ಯನಾಯ್ಕ್- MLA Sharada Poornaik responds to long-standing demand

SUDDILIVE || SHIVAMOGGA

ಬಹುದಿನದ ಬೇಡಿಕೆಗೆ ಸ್ಪಂದಿಸಿದ ಶಾಸಕಿ ಶಾರದಾ ಪೂರ್‍ಯನಾಯ್ಕ್- MLA Sharada Poornaik responds to long-standing demand

MLA, Pooryanaik

ಪುರದಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರು- ಶೆಟ್ಟಿಹಳ್ಳಿ- ಚಿತ್ರಶೆಟ್ಟಿಹಳ್ಳಿ ಮುಖ್ಯರಸ್ತೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಗುದ್ದಲಿ ಪೂಜೆ ನೆರವೇರಿಸಿದರು.

ರೂ,೧.೨೫ ಕೋಟಿ ವೆಚ್ಚದಲ್ಲಿ  ನಡೆಯುವ ಬೇಳೂರು - ಶೆಟ್ಟಿಹಳ್ಳಿ -ಚಿತ್ರಶೆಟ್ಟಿಹಳ್ಳಿ ರಸ್ತೆಯ ಕಾಮಗಾರಿಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು,ಬೇಳೂರು ಮತ್ತು ಶೆಟ್ಟಿಹಳ್ಳಿ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಗೆ ಈಗ ಕಾಲ ಕೂಡಿ ಬಂದಿದೆ.ಹಲವಾರು ಅಡೆತಡೆಗಳನ್ನು ನಿವಾರಿಸಿಕೊಂಡು ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

ಬೇಳೂರು ಮತ್ತು ಶೆಟ್ಟಿಹಳ್ಳಿ ಮುಖ್ಯ ರಸ್ತೆ ಬಹಳ ಹಾಳಾಗಿತ್ತು.ಓಡಾಡುವುದು ದುಸ್ತರವಾಗಿತ್ತು.ಹೀಗಾಗಿ ಈ ಭಾಗದ ಜನರು ಬಹಳ ಸಮಯದಿಂದ ರಸ್ತೆ ಕಾಮಗಾರಿ ಮಾಡಿಕೊಡುವಂತೆ ಮನವಿ ನೀಡಿದ್ದರು.ಈ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ  ಆದ್ಯತೆ ಮೇಲೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ ಅವರು,ಮುಂದಿನ ದಿನಗಳಲ್ಲಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಡಾಂಬರೀಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರದಾಳು ಗ್ರಾ.ಪಂ ಸದಸ್ಯರಾದ ಪ್ರದೀಪ್ ಎಸ್,ಹೆಬ್ಬೂರು ಮಾತನಾಡಿ,ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದು,ಬಹಳ ಸಂತೋಷವಾಗಿದೆ ಎಂದರು.

ಬೇಳೂರು ಭಾಗದ ಜನರು ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು.ಶಾಸಕರು ಸ್ಥಳೀಯ ಜನರ ಮನವಿಯನ್ನು ಆದ್ಯತೆ ಮೇಲೆ ತೆಗೆದುಕೊಂಡು ರೂ,೧.೨೫ ಕೋಟಿ ವೆಚ್ಚದಲ್ಲಿ ರಸ್ತೆ  ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಶಾಸಕರು ಮುಂದಿನ ದಿನದಲ್ಲಿ ಸಚಿವರಾಗಿ ಬಂದು ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರದಾಳು ಗ್ರಾ.ಪಂ ಅಧ್ಯಕ್ಷರಾದ ಗಿರೀಶ್ ಎಸ್.ಆರ್,ಉಪಾಧ್ಯಕ್ಷರಾದ ಭಾರತಿ ನಾಗರಾಜ್,ಸದಸ್ಯರಾದ ಮಾನಸ ಹೆಬ್ಬೂರು ಸೇರಿದಂತೆ ಸ್ಥಳೀಯರು ಇದ್ದರು.

MLA Sharada Poornaik responds to long-standing demand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close