SUDDILIVE || SHIVAMOGGA
ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ವತಿಯಿಂದ ಸಂಸದರಿಗೆ ಅಭಿನಂದನೆ-Congratulations to the MP from the District Sangolli Rayanna Kurubara Vedike
ಶಿವಮೊಗ್ಗ ಜಿಲ್ಲೆಯ ನಾಗರೀಕರಿಗೆ ಮಾರಿಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರರವರಿಗೆ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಅಭಿನಂದನೆಗಳನ್ನ ಸಲ್ಲಿದೆ.
ಶಿವಮೊಗ್ಗ, ಸಾಗರ, ಮತ್ತು ಸಿರಸಿ ಯಲ್ಲಿ ನಡೆದ ಮಾರಿಹಬ್ಬಕ್ಕೆ ಸಾರ್ವಜನಿಕರಿಗೆ ಓಡಾಡಲು ಬೆಂಗಳೂರಿ ನಿಂದ ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಲೋಕಸಭಾ ಸದಸ್ಯರಾದ ಶ್ರೀಯುತ ಬಿ.ವೈ. ರಾಘವೇಂದ್ರ ರವರಿಗೆ ಜಿಲ್ಲಾ ಸಂಗೊಳ್ಳಿರಾಯಣ್ಣ ಕುರುಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ ಮತ್ತು ಈ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸಿ.ಹೆಚ್. ಮಾಲತೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದ ಸುತ್ತಮುತ್ತಲಿನ ಪ್ರದೇಶಗಳಿಂದ ಹಬ್ಬಗಳಿಗೆ ಹೋಗಿಬರಲು ಅನುಕೂಲವಾಗುವಂತೆ ಬೆಂಗಳೂರಿ ನಿಂದ ವಿಶೇಷ ರೈಲು ಸಂಚಾರವನ್ನು ಕಲ್ಪಿಸಿ, ಸುಮಾರು 1 ಲಕ್ಷ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರಯಾಣಿಕರು ಸುಗಮವಾಗಿ ಪ್ರಯಾಣಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರ ನೀಡುತ್ತೀರೆಂದು ಈ ಎಲ್ಲಾ ಪ್ರಯಾಣಿಕರ ಪರವಾಗಿ ನಾವು ಇವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
Congratulations to the MP from the District Sangolli Rayanna Kurubara Vedike
