ಒಳಮೀಸಲಾತಿ ಜಾರಿಗೆ ಶಿಕಾರಿಪುರದಲ್ಲಿ ಬೃಹತ್ ಪ್ರತಿಭಟನೆ-Massive protest in Shikaripura against implementation of internal reservation

 

SUDDILIVE || SHIKARIPURA

ಒಳಮೀಸಲಾತಿ ಜಾರಿಗೆ ಶಿಕಾರಿಪುರದಲ್ಲಿ ಬೃಹತ್ ಪ್ರತಿಭಟನೆ-Massive protest in Shikaripura against implementation of internal reservation        

Massive, protest


ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ಶಿಕಾರಿಪುರದ ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿಯ ವರೆಗೆ ಮಾದಿಗ ಸಮಾಜ ಬೃಹತ್ ಪ್ರತಿಭಟನೆ ನಡೆಸಿದೆ. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲೂಕು ಕಚೇರಿಯ ವರೆಗೆ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿ ಮೊದಲು ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿ ಗೆ ತಲುಪಿ ತಹಶೀಲ್ದಾರ್ ಅವರ ಮೂಲಕ ಸಿಎಂಗೆ ಮನವಿ ಅರ್ಪಿಸಲಾಯಿತು. ಬೇಡಿಕೆ ಈಡೇರಿಸುವಂತೆ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಟೈಯರ್ ಗೆ ಬೆಂಕಿ ಹಚ್ಚಲು ಹೋದಾಗ ಪೊಲೀಸರು ತಡೆದು ಬೆಂಕಿಯನ್ನು ನಂದಿಸಿದ್ದಾರೆ.

ನ್ಯಾಯ ಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರ ವರದಿ ಪ್ರಕಾರ ಒಳ ಮೀಸಲಾತಿ ಜಾರಿಗೊಳಿಸಿ ಅದರ ಅನ್ವಯ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿಯಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಿ ಪ್ರತಿಯೊಂದು ಉಪಜಾತಿಗೂ ಶಿಕ್ಷಣ ಉದ್ಯೋಗ ರಾಜಕೀಯದಲ್ಲಿ ಸಮಾನ ಪಾಲು ಸಿಗುವಂತಾಗಬೇಕು.

ಅಶಕ್ತ ಮತ್ತು ತುಳಿತಕ್ಕೊಳ್ಳಗಾದ ಸಮುದಾಯಗಳ ಅಭಿವೃದ್ಧಿಗಾಗಿ ತಾವು ಈ ನಿಟ್ಟಿನಲ್ಲಿ ಶೀಘ್ರವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕರ್ನಾಟಕ ಮಾದರ ಮಹಾಸಭಾ ಶಿಕಾರಿಪುರ ತಾಲೂಕು ಘಟಕ ಸಹಶಿಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.ಷಡಾಕ್ಷರಿ ಸ್ವಾಮಿಜಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು. 

ಈ‌ಕುರಿತು ಮಾತನಾಡಿದ ಮಾದಿಗ ದಂಡೋರದ ತಾಲೂಕು ಅಧ್ಯಕ್ಷ ಬಸವರಾಜ್ ಮೊಗಳಗೇರ, ಶೇ.15 ರಷ್ಟು ಮೀಸಲಾತಿಯಲ್ಲಿ ಅಸ್ಪೃಶ್ಯ ಜಾತಿಯವರಿಗೆ ಸಿಂಹಪಾಲಿನ ಮೀಸಲಾತಿ ಬೇಕು.  ಎಸ್ ಸಿ ಅವರಿಗೆ 6% ಎಸ್ಟಿ ಗೆ 6% ಸ್ಪೃಶ್ಯ ಜಾತಿಗೆ 3% ನೀಡಲಾಗಿದೆ. ಸ್ವಾತಂತ್ರ್ಯ ಸಿಕ್ಕು ತುಳಿತಕ್ಕೊಳಗಾದವರು ಎಸ್ ಸಿ ಮತ್ತು ಎಸ್ಟಿಯಾಗಿದೆ. ಹಾಗಾಗಿ ನಮಗೆ ಹೆಚ್ಚಿನ ಮೀಸಲಾತಿ ಬೇಕು ಎಂದರು. 

 Massive protest in Shikaripura against implementation of internal reservation


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close