ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡಿದ ಆರೋಪಿಗಳನ್ನ ಅರೆಸ್ಟ್ ಮಾಡಿದ ಸೆನ್ ಪೊಲೀಸರು-Cen police arrest accused who made woman's private video viral

 SUDDILIVE || SHIVAMOGGA

ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡಿದ ಆರೋಪಿಗಳನ್ನ ಅರೆಸ್ಟ್ ಮಾಡಿದ ಸೆನ್ ಪೊಲೀಸರು-Cen police arrest accused who made woman's private video viral      

Cen, police


ಮಹಿಳೆಯೊಬ್ಬರ ಖಾಸಗಿ ವಿಡಿಯೋಗಳನ್ನ ಫೇಸ್ಬುಕ್ ನಲ್ಲಿ ಹರಿಬಿಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಸೆನ್ ಪೊಲೀಸರು ಬಂಧಿಸಿದ್ದಾರೆ. 

 ಮಹಿಳೆಯೊಬ್ಬರ ಖಾಸಗಿ ವೀಡಿಯೋವೊಂದನ್ನ ಅಪರಿಚಿತರು ಫೇಸ್ಬುಕ್ ನಕಲಿ ಖಾತೆಯಲ್ಲಿ upload ಮಾಡಿದ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿತ್ತು

ಪ್ರಕರಣದಲ್ಲಿ ಆರೋಪಿ ಬಗ್ಗೆ  ಎಸ್ಪಿ ನಿಖೀಲ್ ಬಿ ಅಡಿಷನಲ್ ಎಸ್ಪಿ ಕಾರಿಯಪ್ಪ ಎ ಜಿ, ಹಾಗೂ  ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಸೆನ್ ಪೊಲೀಸ್ ಠಾಣೆಯ ಪಿಐ  ಮಂಜುನಾಥ್ ರವರ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿದೆ.  ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಇಬ್ಬರನ್ನ ಬಂಧಿಸಿದ್ದಾರೆ. 


ಎ1. ಸೀಮ ಜೂಲಿಯನ್ ಸೆರಾವೋ ಕೋಂ ದಿ|| ಅರುಣ್ ಕುಮಾರ್ ಕರ‍್ವಾಲೋ 45 ವರ್ಷ, ಕ್ರಿಶ್ಚಿಯನ್ ಜಾತಿ, ಬ್ಯೂಟೀಷಿಯನ್ ಕೆಲಸ ವಾಸ:- ಗಣಪತಿ ದೇವಸ್ಥಾನದ ಹತ್ತಿರ, ಹೊಸನಗರ ತಾಲ್ಲೂಕ್. ಶಿವಮೊಗ್ಗ

 ಎ2. ಸಿ ಜೆ ನಿಶಾಂತ್ ಬಿನ್ ಹೆಚ್ ವಿ ಜಯಪ್ರಕಾಶ್, 29 ವರ್ಷ, ಆರ್ಯವೈಶ್ಯ ಜಾತಿ, ವ್ಯವಹಾರ ವೃತ್ತಿ, ವಾಸ:- ಮನೆ ನಂ:-30011, ಟಾಟ ನ್ಯೂ ಹೆವನ್ ಅಪಾರ್ಟ್ಮೆಂಟ್, ಹುಸ್ಕೂರು ಮುಖ್ಯ ರಸ್ತೆ, ದಾಸನಪುರ, ಬೆಂಗಳೂರು ರವರನ್ನು

ದಸ್ತಗಿರಿಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿರುತ್ತೆ. ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ಕ್ರಮವಹಿಸಲಾಗಿದ್ದು,ತನಿಖೆ ಮುಂದುವರೆದಿರುತ್ತದೆ.

ಸೂಚನೆ

ಯಾವುದೇ ವ್ಯಕ್ತಿಯ ಮಾನಕ್ಕೆ ಕುಂದುತರುವ  ಫೋಟೋ, ವೀಡಿಯೋ ಹಾಗೂ ಸಾಹಿತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

Cen police arrest accused who made woman's private video viral 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close