SUDDILIVE || SHIVAMOGGA
ಶಿವಮೊಗ್ಗಕ್ಕೆ ಏನೂ ಕೊಡದಂತೆ ತೀರ್ಮಾನಿಸಿರುವುದು ಸಿದ್ದರಾಮಯ್ಯನವರ ದಾಖಲೆಯ ಪರಮಾವಧಿ-ಶಾಸಕ ಚೆನ್ನಿ- The decision not to give anything to Shivamogga is the pinnacle of Siddaramaiah's record - MLA Chenni
ಸಿದ್ದರಾಮಯ್ಯ 17 ನೇ ಬಜೆಟ್ ಮಂಡಿಸಿ ದಾಖಲೆ ಬಜೆಟ್ ಮಂಡಿಸಿದ್ದಾರೆ. ಆದರೆ ಈ ದಾಖಲೆ ಬಜೆಟ್ ಗೆ ಬಿಜೆಪಿ ಸಹಮತವಿಲ್ಲ ಎಂದು ಶಾಸಕ ಚೆನ್ನಿಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ಮೂರು ವರ್ಷದಲ್ಲಿ ಅಭಿವೃದ್ಧಿಗೆ ಬಜೆಟ್ ನಲ್ಲಿ ಯಾವುದೇ ಅನುದಾನವಿಲ್ಲ. ಶಿವಮೊಗ್ಗಕ್ಕೆ ಏನೂ ಕೊಡದಂತೆ ತೀರ್ಮಾನಿಸಿರುವುದು ದಾಖಲೆಯ ಪರಮಾವಧಿ. 2025 ರವರೆಗೆ ಅನುದಾನನೀಡಿದ ಸಿಎಂ ಇದ್ದಾರೆ ಎಂದರೆ ಅದು ಬಿಎಸ್ ವೈ ಎಂದರು.
ಅಭಿವೃದ್ಧಿ ಶೂನ್ಯ ಬಜೆಟ್ ಆಗಿದೆ. 8.61 ಲಕ್ಷ ಕೋಟಿಗೆ ಏರಿದೆ. ಸಾಲ ಮಾಡಿದ್ದನ್ನ ಶಿವಮೊಗ್ಗಕ್ಕೆ ಹಂಚಬೇಕಿತ್ತು.1.58 ಲಕ್ಷ ಕೋಟಿ ಮಂಡನೆಗೆ ಹೆಚ್ಚುವರಿ ಸಾಲ ಮಾಡಲಾಗಿದೆ. 4.48 ಲಕ್ಷ ಕೋಟಿ ಬಜೆಟ್ ಮಂಡನೆಯ ನಡುವೆ ಸಾಲ ದುಪ್ಪಟ್ಟು ಮಾಡಲಾಗಿದೆ. ದ್ವೇಷ ಭಾಷಣ ನಿಯಂತ್ರಿಸಲು ವಿಶೇಷ ಕಾರಗಯ ಪಡೆ ನಿರ್ಮಿಸಲಾಗಿದೆ. ಸತ್ಯ ಸಂಗತಿ ಮುಚ್ಚಲು ಮಂಗಳೂರು ಉಡುಪಿ ಶಿವಮೊಗ್ಗವಾಗಿದೆ.
ವಿಮಾನ ಹಾರಾಟ ತರಬೇತಿ, ಬಿಸಿಎಂ ಹಾಸ್ಟೆಲ್, ಭದ್ರಾವತಿ ಒಳಚರಂಡಿ, ಸೊರಬ ಮತ್ತು ಭದ್ರಾವತಿಯ ಕೆರೆಗಳಿಗೆ ಬಗ್ಗೆ ಹಣ ಮೀಸಲು ಇಡಲಾಗಿದೆ. ಇದು ಸರಿಯಲ್ಲ. ಜಿಲ್ಲೆ ಅನೇಕ ಕೊಡಿಗೆ ಕೊಟ್ಟ ಜಿಲ್ಲೆ ಅದನ್ನೇ ಶಿವಮೊಗ್ಗವನ್ನಸೈಡ್ ಲೈನ್ ಮಾಡಿರುವುದು ಅಕ್ಷಮ್ಯ ಅಪರಾಧವೆಂದರು.
ಆಗಬೇಕಾದ ಕೆಲಸವಿದೆ ಜಿಲ್ಲಾ ಆಸ್ಪತ್ರೆ, ಮೆಗ್ಗಾನ್ ಮೇಲ್ದರ್ಜೆಗೆ ಅಎರಿಸಲಾಗಿಪದೆ. ಪೊಲೀಸ್ ಕಮಿಷನರೇಟ್ ಬೇಡಿಕೆ ಇಡಲಾಗಿತ್ತು. ಇವು ಯಾವುದೂ ಬಜೆಟ್ ನಲ್ಲಿ ಘೋಷಣೆಯಾಗಿಲ್ಲ. ಇದು ಬೇಕು ಎಂದು ಅನಿಸದೆ ದ್ವೇಷ ಭಾಷಣ ಕಾಯ್ದೆ ಬೇಕಾಗಿತ್ತು. ಸದನದಲ್ಲಿ ಪಾಸ್ ಮಾಡಲಾಯಿತು. ಜಿಲ್ಲಾ ಆಡಳಿತ ಭವನ, ಕೊಳಗೇರಿ ಪ್ರದೇಶ ಅಭಿವೃದ್ಧಿ, ನೆಹರೂ ಕ್ರೀಡಾಂಗಣದಲ್ಲಿ ಅಭಿವೃದ್ಧಿಗೆ, ಉದ್ಯೋಗಸ್ಥರ ಹಾಸ್ಟೆಲ್, ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣ
ಕೈಗಾರಿಕಾ ಕಾರಿಡಾರ್, ನೈಟ್ ಲ್ಯಾಂಡಿಂಗ್ ಮಾತ್ತು ಕಾರ್ಗೋ ಗೆ ಹಣ, ಅಡಿಕೆ ಬೆಳಗಾರರ ಚುಕ್ಕಿ ರೋಗ ಸಂಷ್ಕರಣೆಗೆ ಹೋದ ಬಾರಿ ಹಣ ಬಿಡುಗಡೆಯ ಭರವಸೆ ಮಾಡಿದ್ದರೂ ಮಾಡಲಿಲ್ಲ. ಹೊಸ ಬಸ್ ಡಿಪೋ, ನಗರ ಸಾರಿಗೆ ಸಂಬಂಧಿಸಿದಂತೆ 20 ಬಸ್ ಗಳ ಬೇಡಿಕೆ ಸೇರಿ 18 ವಿಷಯಗಳ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ 17 ನೇ ಬಜೆಟ್ ಮಂಡನೆ ಶಿವಮೊಗ್ಗಕ್ಕೆ ಏನೂ ಕೊಡದಂತೆ ನೋಡಿಕೊಂಡಿರುವುದಕ್ಕೆ ಪ್ರಶಸ್ತಿ ಕೊಡಬೇಕು. ಅಲ್ಪಸಂಖ್ಯಾತರ ತುಷ್ಠೀಕರಣ ನೀತಿ ಮುಂದುವರೆದಿದೆ. ಆಜಾದ್ ಮತ್ತು ಉರ್ದು ಶಾಲೆಗೆ 600 ಕೋಟಿ ಕೊಡುವ ಸರ್ಕಾರ ಹಿಂದೂ ದೇವಸ್ಥಾನಕ್ಕೆ ಅನುದಾನ ನೀಡದೆ ಅಲ್ಪಸಂಖ್ಯಾತರ ಓಲೈಕೆ ಮಾಡಿದ್ದಾರೆ. ಸಮುದಾಯದ ವಿದ್ಯಾಭ್ಯಾಸಕ್ಕೆ ಹಣವಿಟ್ಟಂತೆ ಬೇರೆಯ ವಿಷಯಗಳನ್ನೂ ಸಮನಾಗಿ ನೋಡದ ಕೆಲಸವನ್ನ ಸಿಎಂ ಮಾಡಿಲ್ಲ ಎಂದು ದೂರಿದರು.
ಮುಸ್ಲೀಂ ಅಭಿವೃದ್ಧಿ ನಿಗಮಕ್ಕೆ 1500 ಕೋಟಿ ಕೊಟ್ಟು ಹಿಂದೂ ಗಳ ಅಭಿವೃದ್ಧಿ ಮಾಡದೆ ಇರುವ ಬಗ್ಗೆ ಶಾಸಕರು ಅಸಮಾಧಾನ ಮಾಡಿದರು. ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನ ದೂರುವ ಕೆಲಸ ಮಾಡಿರುವ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರುವ ಬಗ್ಗೆ ಹೇಳಬೇಕು. ವಿಜಯಪುರ ಉತ್ಸವಕ್ಕೆ, ಕೃಷ್ಣ ಮೇಲ್ದಂಡೆ ಯೋಜನೆಗೆ, ಯುವನಿಧಿಗೆ ಹಣವನ್ನಬಜೆಟ್ ನಲ್ಲಿ ಘೋಷಿಸಿಲ್ಲ ಎಂದು ದೂರಿದರು.
ಬೆಳಗಾವಿ ಅಧಿವೇಶನದಲ್ಲಿ 8 ದಿನ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ದರೂ ಹಣ ಬಿಡುಗಡೆ ಮಾಡಿಲ್ಲ. 11 ಪಾಲಿಕೆಗೆ ಅಭಿವೃದ್ದಿಗೆ ಹಣ ನೀಡಲಿಲ್ಲ. ನಿರ್ಮಲಾ ತುಂಗ ಅಭಿಯಾನದ ಬಗ್ಗೆ ಹೋರಾಟ ಸಮಿತಿ ತಮ್ಮನ್ನ ಭೇಟಿ ಮಾಡಿ ಸ್ವಚ್ಛತ ಬಗ್ಗೆ ಹೇಳಿದರೂ ಹಣ ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.
2025 ರ ವರೆಗೆ 6.25 ಲಕ್ಷ ಸಾವಿರ ಕೋಟಿ, 3.69ಲಕ್ಷ ಕೋಟಿ ಇನ್ ಕಂ ಟ್ಯಾಕ್ಸ್ ಹಣವನ್ನಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದು ಹಣವನ್ನ ಕೊಟ್ಟಿರುವುದನ್ನಸರ್ಕಾರ ಹೇಳಬೇಕು. ಕೇಂದ್ರ ಸರ್ಕಾರ ಕೊಟ್ಟಿರುವುದನ್ನ ರಾಜ್ಯ ಒಪ್ಪಿಕೊಳ್ಳಬೇಕು.
The decision not to give anything to Shivamogga is the pinnacle of Siddaramaiah's record - MLA Chenni
