SUDDILIVE || SHIRALKOPPA
ಶಿರಾಳಕೊಪ್ಪದಲ್ಲಿ ಪತ್ತೆಯಾಗಿದ್ದು ಬರೋಬ್ಬರಿ 100 ಕೆಜಿ ಗೋಮಾಂಸ-Nearly 100 kg of beef found in Shiralakoppa
ಶಿರಾಳಕೊಪ್ಪದಲ್ಲಿ ಗೋ ಕಸಾಯಿಕಾನೆಯ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಗೋಹತ್ಯೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಗೋವುಗಳನ್ನ ತಂದು ಕಸಾಯಿಕಾನೆಯಲ್ಲಿ ಗೋವಿನ ವಧೆ ನಡೆಸಿ ಅದರ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇರೆಗೆ ಪಿಎಸ್ಐ ಪ್ರಶಾಂತ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 100 ಕೆಜಿ ಗೋಮಾಂಸ ಪತ್ತೆಯಾಗಿದೆ.
ಶಿರಾಳಕೊಪ್ಪದ ಹಳ್ಳೂರು ವೃತ್ತದ ಬಳಿ ಮನೆಯೊಂದರಲ್ಲಿ ಗೋವುಗಳ ಮಾಂಸ ಮಾರಾಟ ಮಾಡಲಾಗುತ್ತಿದ್ದು ಅಲ್ಲಿ ಶಿರಾಳಕೊಪ್ಪ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 4 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು ಬೆಳಿಗ್ಗೆ ದಾಳಿ ನಡೆಸಲಾಗಿತ್ತು.
Nearly 100 kg of beef found in Shiralakoppa

