SUDDILIVE || SHIVAMOGGA
ಹೊಳೆಹೊನ್ನೂರು-ರಸ್ತೆ ಅಪಘಾತ ಓರ್ವ ಸಾವು-One dead in Holehonnur road accident
ಬೈಕ್ ನಲ್ಲಿ ಹೋಗುವಾಗ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಪರಿಣಾಮ ಅಪರಿಚಿತವಾಹನ ಹರಿದು ಬೈಕ್ ಸವಾರ ಸಾವುಕಂಡಿದ್ದಾನೆ.
ಪಟ್ಟಣದ ಚನ್ನಗಿರಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಸ್ತಗಿರ್ (೩೨) ಎಂಬುವರು ಸಾವನ್ನಪ್ಪಿದ್ದಾರೆ.
ನೃಪತುಂಗ ವೃತ್ತದ ಕಡೆಯಿಂದ ದಸ್ತಗಿರ್ ಅವರು ಮನೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಎದುರು ಹೋಗುತ್ತಿರುವ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದು ಬಲಭಾಗಕ್ಕೆ ಬಿಳುವ ವೇಳೆಗೆ ಪಕ್ಕದಲ್ಲಿ ಹೋದ ಅಪರಿಚಿತ ವಾಹನಕ್ಕೆ ತಲೆ ಬಡಿದಿದೆ. ಆಗ ಸ್ಥಳದಲ್ಲಿ ಬಿದ್ದು ತಲೆಗೆ ಬಲವಾದ ಪೆಟ್ಟಾಗಿದ್ದು ಸ್ಥಳದಲ್ಲೆ ತೀವ್ರ ರಸ್ತಸ್ರಾವ ಆಗಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಹಸುನೀಗಿದ್ದಾರೆ. ಮೃತ ದುರ್ದೈವಿ ದಸ್ತಗಿರ್ ಅವರಿಗೆ ಪತ್ನಿ, ಪುತ್ರ ಇದ್ದಾರೆ.
One dead in Holehonnur road accident

