ಗಾಂಜಾ ನಶೆಯಲ್ಲಿ ನಡೆಯಿತಾ ರಸ್ತೆ ಅಪಘಾತ?Road accident caused by marijuana intoxication

 SUDDILIVE || BHADRAVATHI

ಗಾಂಜಾ ನಶೆಯಲ್ಲಿ ನಡೆಯಿತಾ ರಸ್ತೆ ಅಪಘಾತ?Road accident caused by marijuana intoxication   

Road, accident

ಇದೊಂದು ನೋಡಲು ರಸ್ತೆ ಅಪಘಾತ ಎನಿಸಿದರೂ ಮಾದಕ ವಸ್ತು ಗಾಂಜಾ ಸೇವನೆಯಿಂದ ಬರ್ತ್ ಡೇ ಗೆ ಗಿಫ್ಟ್ ಕೊಡಿಸಿದ ಬೈಕ್ ನಿಂದ ಯುವಕ ಅಪಘಾತಕ್ಕೆ ಒಳಗಾದ್ನಾ ಎಂಬ ಶಂಕೆ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಗಾಂಜಾ ಸೇವನೆಯೋ ಅಥವಾ ಮದ್ಯ ಸೇವನೆಯಿಂದ ನಡೆದಿದೆಯಾ ಎಂಬ ಸತ್ಯಾಂಶ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಭದ್ರಾವತಿಯ ಹೊಸಮನೆ ನಿವಾಸಿ 25 ವರ್ಷದ ಯುವಕನಿಗೆ ಓಡಾಡಲು ಕಳೆದ ವರ್ಷ ಹುಟ್ಟು ಹಬ್ಬಕ್ಕೆ  ಕೆಟಿಎಂ ಬೈಕ್ ಕೊಡಿಸಲಾಗಿತ್ತು. ಬೈಕ್ ನಲ್ಲಿ ಬರುವಾಗ ಭದ್ರಾವತಿಯ ಕವಲಗುಂದಿ ಬಳಿ ಹೊಸದಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು ಕಾಮಗಾರಿ ಚಾಲ್ತಿಯಲ್ಲಿದೆ. 

ನಿನ್ನೆ ರಾತ್ರಿ 10-45 ರ ಸುಮಾರಿಗೆ ಬೈಕ್ ನಲ್ಲಿ ಚಲಿಸುತ್ತಿದ್ದ ಯುವಕ ಸೇತುವೆಗೆ ಅಗೆಯಲಾದ ಗುಂಡಿಗೆ ಬಿದ್ದು ಮೈಕೈ ಗಾಯಮಾಡಿಕೊಂಡಿದ್ದಾನೆ. ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಸಾಗಿಸಲಾಗಿದೆ. ಇದು ಮೇಲ್ನೋಟಕ್ಕೆ ರಸ್ತೆ ಅಪಘಾತವಷ್ಟೆ ಆದರೆ ಯುವಕ ಗಾಂಜಾ ನಶೆಯಲ್ಲಿದ್ದ ಎಂಬುದು ಸ್ಥಳೀಯರ ವಾದವಾಗಿದೆ. 

ನಶೆಯಲ್ಲಿದ್ದ ಎಂಬ ಕಾರಣಕ್ಕೆ ಅದು ಗಾಂಜಾನೆನೋ ಅಥವಾ ಮದ್ಯ ಸೇವನೆಯಿಂದ ನಡೆದ ಘಟನೆನೊ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಒಂದು ವೇಳೆ ಇದು ಗಾಂಜಾ ಸೇವನೆಯಿಂದ ನಡೆದಿದ್ದೇ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಪೊಲೀಸ್ ಇಲಾಖೆಯ ವ್ಯಾಪ್ತಿಯನ್ನ‌ ಮೀರಿ ಹೋಗಿದೆಯಾ ಎಂಬ ಶಂಕೆ ಹೆಚ್ಚಾಗಿದೆ. 

ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಹತ್ಯೆ, ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಹಲ್ಲೆ, ಹೀಗೆ ವಿಧವಿಧವಾದ ಕ್ರೈಂಗಳು ಗಾಂಜಾ ನಶೆಯಲ್ಲಿ ನಡೆದಿರುವುದು ಕಣ್ಣುಮುಂದೆ ಜೀವಂತವಾಗಿರುವುದು ಕಂಡು ಬಂದಿದೆ. ಈ ಮಧ್ಯೆ 25 ವರ್ಷದ ಯುವಕನ ರಸ್ತೆ ಅಪಘಾತವೂ ಗಾಂಜಾ ನಶೆಯಲ್ಲಿ ರಸ್ತೆ ಅಪಘಾತ ನಡೆಯದಿರಲಿ ಎಂಬುದನ್ನ ಆಶಿಸೋಣ

Road accident caused by marijuana intoxication

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close