SUDDILIVE || SHIVAMOGGA
ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಕಳ್ಳರು ಅಂದರ್-The thieves who stole from the temple are Andar
ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪಿಯನ್ನ ಭದ್ರಾವತಿ ಪೊಲೀಸರು ಬಂಧಿಸಿ ಅವರಿಂದ ಕದ್ದ ಮಾಲನ್ನ ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕು ಪಂಡರಹಳ್ಳಿ ಕ್ಯಾಂಪ್ ನ ನಿವಾಸಿ ಟಿ. ಬೈಲಪ್ಪರವರು ನೀಡಿದ ದೂರಿನಲ್ಲಿ ದಿನಾಂಕ;-08.03.2026 ರಂದು ಅವರ ಗ್ರಾಮದಲ್ಲಿನ ಮಾರಿಕಾಂಬ ದೇವಸ್ತಾನದ ಬಾಗಿಲಿನ ಬೀಗ ಮುರಿದು ಗರ್ಭಗುಡಿಯಲ್ಲಿದ್ದ ದೇವಿಯ ಬೆಳ್ಳಿಯ ಮುಖವಾಡ ಮತ್ತು ಬಂಗಾರದ ತಾಳಿಯ ಆಭರಣ ವಸ್ತಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಮಾಲು ಹಾಗೂ ಅರೋಪಿತರ ಪತ್ತೆಗಾಗಿ ನಿಖಿಲ್.ಬಿ ಐಪಿಎಸ್,ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಕಾರಿಯಪ್ಪ ಎ ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ರಮೇಶ್ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ ಪ್ರಕಾಶ್ ರಾಥೋಡ್ ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶಿವಪ್ರಸಾದ್ ಎಂ, ಪೊಲೀಸ್ ಇನ್ಸ್ ಪೆಕ್ಟರ್ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್ಐ ಶ್ರಿಮತಿ ಶಾಂತಲಾ ಹಾಗೂ ಸಿಬ್ಬಂದಿಗಳಾದ ಹೆಚ್ಸಿ 71 ಅಣ್ಣಪ್ಪ, ಹೆಚ್ಸಿ 72 ಪ್ರಸನ್ನ, ಹೆಚ್ಸಿ462 ಪ್ರಕಾಶ ನಾಯ್ಕ ಹೆಚ್ ಸಿ 258 ಶ್ರೀಮತಿ ಸವಿತಾ, ಪಿಸಿ 1125 ವಿಶ್ವನಾಥ, ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ತನಿಖ ತಂಡವು ದಿನಾಂಕ :-09.03.2026 ರಂದು ಆರೋಪಿ ಉಮೇಶ, 45 ವರ್ಷ ವಾಸ ಮಾವಿನಕಟ್ಟೆ ಗ್ರಾಮ ಚನ್ನಗಿರಿ ತಾಲ್ಲುಕ್ ದಾವಣಗೆರೆ ಜಿಲ್ಲೆ. ರವರನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಹೊಳೆಹೊನ್ನೂರು ಪೊಲೀಸ್ ಠಾಣೆ ಹಾಗು ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯ ಗುನ್ನೆ ನಂ 50/2026 ಕಲಂ 331(3) 331(4) 305(ಎ) ಬಿಎನ್ ಎಸ್ ಪ್ರಕರಣದಲ್ಲಿ ಒಟ್ಟು ಎರಡು ಪ್ರಕರಣದಲ್ಲಿ ಶ್ರೀ ಮಾರಿಕಾಂಬ ದೇವಿಯ ಎರಡು ಮುಖವಾಡಗಳು, ನಾಲ್ಕು ಬೆಳ್ಳಿಯ ಕೈಗಳು ಮತ್ತು ಸೋಟದ ಪಟ್ಟಿ ಮತ್ತು ಬಂಗಾರದ ತಾಳಿ ಮುಗುತಿ ಗುಂಡುಗಳು ಹಾಗು ಕುಂಸಿ ಠಾಣೆ ವ್ಯಾಪ್ತಿಯ ದುರ್ಗಾಂಭಿಕ ದೇವಿಯ ಮುಖವಾಡ ಪಾದುಕೆ ಮತ್ತು ಚಾಮರ ಒಟ್ಟು 3 ಕೆಜಿ 764 ಗ್ರಾಂ ಬೆಳ್ಳಿಯ ಆಭರಣ ಹಾಗೂ 08 ಗ್ರಾಂ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಸೇರಿ ಒಟ್ಟು ಅಂದಾಜು ಬೆಲೆ 10,49,060/ರೂ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
