SUDDILIVE || SHIVAMOGGA
ಆರ್ ಎಸ್ಐಗಳ ಪಾರ್ಥೀವ ಶರೀರಕ್ಕೆ ಎಸ್ಪಿ ನಿಖಿಲ್ ಗೌರವ ವಂದನೆ- SP Nikhil pays tribute to the mortal remains of the RSIs
ರಸ್ತೆ ಅಪಘಾತದಲ್ಲಿ ಮೂವರು ಆರ್ ಎಸ್ ಐ ಗಳಿಗೆ ನಿಧನರಾಗಿದ್ದು ಇವರಲ್ಲಿ ಸಚಿನ್ ವಿ ಅವರು ತೀರ್ಥಹಳ್ಳಿಯ ಕುಡುಮಲ್ಲಿಗೆ ನಿವಾಸಿಗಳಾಗಿದ್ದಾರೆ. ಇವರ ಗ್ರಾಮಕ್ಕೆ ಎಸ್ಪಿ ನಿಖಿಲ್ ಅವರು ತೆರಳಿ ಮೃತರ ಪಾರ್ಥೀವ ಶರೀರಕ್ಕೆ ಗೌರವ ವಂದನೆಗಳನ್ನು ಸಲ್ಲಿಸಿದ್ದಾರೆ.
ದಿನಾಂಕಃ 15-03-2026 ರಂದು ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನ ಅಧಿಕಾರಿಗಳಾದ ಅಮರೇಶ್ ಬಿ. (ಆರ್.ಎಸ್.ಐ), ಮಂಜುನಾಥ್ ದಾರಿಮನಿ, (ಆರ್.ಎಸ್.ಐ) ಮತ್ತು ಸಚಿನ್ ವಿ. (ಆರ್.ಎಸ್.ಐ) ರವರು ಮೃತರಾಗಿದ್ದರು.
ಈ ದಿನ ದಿನಾಂಕಃ 16-03-2026 ರಂದು ಬೆಳಗ್ಗೆ ನಿಖಿಲ್ ಬಿ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ದಿವಂಗತ ಸಚಿನ್ ವಿ. (ಆರ್.ಎಸ್.ಐ) ರವರ ಸ್ವಗ್ರಾಮವಾದ ಶಿವಮೊಗ್ಗ ಜಿಲ್ಲೆಯ ಕುಡುವಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಪಾರ್ಥೀವ ಶರೀರಕ್ಕೆ ಗೌರವ ವಂದನೆಗಳನ್ನು ಸಲ್ಲಿಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವಾನಗಳನ್ನು ತಿಳಿಸಿದರು.
ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಅಪಘಾತದಲ್ಲಿ ಮೃತರಾದ ಮೂವರು ಆರ್.ಎಸ್.ಐ ರವರುಗಳಿಗೆ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
SP Nikhil pays tribute to the mortal remains of the RSIs
