ಮಾ. 13 ರಿಂದ ಸಾಹಿತ್ಯ ಗ್ರಾಮದಲ್ಲಿ ಶಿವಮೊಗ್ಗ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ- Shivamogga District 20th Kannada Sahitya Sammelana to be held at Sahitya Gram from Mar. 13

SUDDILIVE || SHIVAMOGGA

ಮಾ. 13 ರಿಂದ ಸಾಹಿತ್ಯ ಗ್ರಾಮದಲ್ಲಿ ಶಿವಮೊಗ್ಗ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ- Shivamogga District 20th Kannada Sahitya Sammelana to be held at Sahitya Gram from Mar. 13     


       

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಮಾರ್ಚ್ 13, 14 ರ ಶುಕ್ರವಾರ, ಶನಿವಾರ ಎರಡು ದಿನಗಳ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದ್ದು, ಹಿರಿಯ ಸಾಹಿತಿ ವಿಜಯಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.

ಪಿ. ಲಂಕೇಶ್ ಅವರ ಹೆಸರಿನ ಮಹಾವೇದಿಕೆಯಲ್ಲಿ ಶಾಂತವೇರಿ ಗೋಪಾಲಗೌಡರು, ಕಡಿದಾಳು ಮಂಜಪ್ಪ, ವಸುದೇವ ಭೂಪಾಳಂ ಅವರ ಹೆಸರನ್ನು ಮಹಾದ್ವಾರಗಳಿಗೆ ಹೆಸರಿಸಲಾಗಿದೆ.

ಮಾರ್ಚ್ 13 ರಂದು ಶುಕ್ರವಾರ ಬೆಳಗ್ಗೆ 9:30 ಕ್ಕೆ ಧ್ವಜಾರೋಹಣದ ಮೂಲಕ ಸಮ್ಮೇಳನ ಆರಂಭವಾಗಲಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹನುಮಾನಾಯ್ಕ ಅವರು ರಾಷ್ಟ್ರಧ್ವಜ, ವಾರ್ತಾಧಿಕಾರಿ ಆರ್. ಮಾರುತಿ ಅವರು ನಾಡಧ್ವಜ, ಡಿ.ಮಂಜುನಾಥ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. 

ನಂತರ ಸಮ್ಮೇಳನದ ಸರ್ವಾಧ್ಯಕ್ಷರ ಜೊತೆಯಲ್ಲಿ ಗೋಪಾಳದ ಆನೆ ವೃತ್ತದಿಂದ ಕನ್ನಡ ಜಾಗೃತಿ ನಡಿಗೆ ಆರಂಭವಾಗಲಿದ್ದು, ಸೂಡಾ ಅಧ್ಯಕ್ಷರಾದ ಎಚ್. ಎಸ್. ಸುಂದರೇಶ್ ಚಾಲನೆ ನೀಡಲಿದ್ದಾರೆ. ನಗರದ ವಿವಿಧ ಗಣ್ಯರು ಭಾಗವಹಿಸಲಿದ್ದಾರ.

ಬೆಳಗ್ಗೆ 11:30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಜ್ಯೋತಿ ಬೆಳಗಲು ಖ್ಯಾತ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಆಗಮಿಸಲಿದ್ದಾರೆ. ಖ್ಯಾತ ಕವಿಗಳಾದ ಸುಬ್ಬು ಹೊಲೆಯಾರ್ ವಿವಿಧ ಲೇಖಕರು ಬರೆದ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾದ  ಡಾ. ಜೆ. ಕೆ. ರಮೇಶ್ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಮಾಜಿ ಉಪಮುಖ್ಯ ಮಂತ್ರಿ ಕೆ. ಎಸ್. ಈಶ್ವರಪ್ಪ ನವರು ಪುಸ್ತಕ ಪ್ರದರ್ಶನ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನ ಉದ್ಘಾಟಿಸಲು ಡಿ.ಸಿ. ಸಿ. ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥಗೌಡರು ಆಗಮಿಸಲಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕ ನಾಗರಾಜ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಉದ್ಯಮಿಗಳಾದ ಎಸ್. ರುದ್ರೇಗೌಡ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರದ ಮಹಾದೇವಪ್ಪ, ಡಾ. ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ, ಎಂ. ಶ್ರೀಕಾಂತ್, ನಾಗರಾಜ್ ಗೌಡರು, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ. ನಿಖಿಲ್, ಸಿ. ಇ. ಓ., ಎನ್. ಹೇಮಂತ್, ಆಯುಕ್ತರಾದ ಮಾಯಣ್ಣಗೌಡರು, ಕೆ.ಎಂ.ಎಫ್. ಅಧ್ಯಕ್ಷರಾದ ವಿದ್ಯಾಧರ, ಉಪನ್ಯಾಸಕ ಡಾ. ಕುಂಸಿ ಉಮೇಶ್ ಭಾಗವಹಿಸಲಿದ್ದಾರೆ.

ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ಡಾ. ಜಾನಕಿ ಎಚ್. ಪಿ. ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಡಿ. ಬಿ. ರಜಿಯಾ, ಡಾ. ರತ್ನಾಕರ ಕುನುಗೋಡು ಮುಖ್ಯ ಅತಿಥಿಗಳಾಗಿ ಮೂವತ್ತೆರಡು ಕವಿಗಳು ಭಾಗವಹಿಸಲಿದ್ದಾರೆ. 

 ‌ಸಮ್ಮೇಳನಾಧ್ಯಕ್ಷರಾದ ವಿಜಯಶ್ರೀ ಅವರ ಬದುಕು ಬರಹ ಗೋಷ್ಠಿ ಅಧ್ಯಕ್ಷತೆಯನ್ನು ಪ್ರೊ. ಜೆ. ಎಲ್. ಪದ್ಮನಾಭ ವಹಿಸಲಿದ್ದಾರೆ. ಪತ್ರಕರ್ತರು, ಸಾಹಿತಿಗಳಾದ ಭಾಗ್ಯ ಕೃಷ್ಣಮೂರ್ತಿ ಅವರು ಸಾಹಿತ್ಯ ಸಾಂಸ್ಕೃತಿಕ ಕೊಡುಗೆ ಕುರಿತು, ಡಾ. ಎಸ್. ಎಂ. ಮುತ್ತಯ್ಯ ಅವರು ಕಾದಂಬರಿಗಳ ಅವಲೋಕನ, ಡಾ. ಶುಭಾ ಮರವಂತೆ ಅವರು ಕಥೆ, ಕವನ, ರೂಪಕ ಜೀವನ ಕಥನಗಳ ಅವಲೋಕನ ಮಾಡಲಿದ್ದಾರೆ. 

ಪ್ರಕೃತಿ ಒಡಲ ಚಿಂತನೆ ಗೋಷ್ಠಿಯಲ್ಲಿ ಬರಿದಾಗುತ್ತಿರುವ ನದಿ ಒಡಲು ವಿಚಾರವಾಗಿ ಕೆ. ವಿ. ವಸಂತ ಕುಮಾರ್, ಪ್ರಕೃತಿ ಉಳಿಸಲು ನಾನೇನು ಮಾಡಲಿ ವಿಚಾರವಾಗಿ ಡಾ|| ವಿ. ಎಲ್. ಎಸ್. ಕುಮಾರ್, ಹೊಸಕ್ಷೇತ್ರ, ಹೊಸಜಿಲ್ಲೆ, ಮೇಲೆನಾಡ ಒಡಲಚಿಂತೆ ವಿಚಾರವಾಗಿ ಬಿ. ಆರ್. ಜಯಂತ್ ಮಾತನಾಡಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಎದುರಿನ ಸವಾಲುಗಳು ವಿಚಾರವಾಗಿ ಗೋಷ್ಠಿ ನಡೆಯಲಿದೆ. ಉತ್ತರ ಕನ್ನಡ ಜಿಲ್ಲಾ 25 ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ರೋಹಿದಾಸ್ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ. ಪ್ರಕಾಶ್ ಮೂರ್ತಿ, ಬಿ. ಎನ್. ವಾಸರೆ, ಕೆ. ಪಿ. ಶ್ರೀಪಾಲ್, ಬಿ. ಚಂದ್ರೇಗೌಡರು, ಡಾ. ಎಚ್. ಟಿ. ಕೃಷ್ಣಮೂರ್ತಿ, ಹೊನ್ನಾಳಿ ಚಂದ್ರಶೇಖರ, ಅಕ್ಷತಾ ಹುಂಚದಕಟ್ಟೆ ಭಾಗವಹಿಸಲಿದ್ದಾರೆ.   

ಸರ್ಕಾರಿ ನೌಕರರ ಸಂಘದ ನಾಟಕ ತಂಡದಿಂದ ಪಿ. ಲಂಕೇಶ್ ಅವರ ಸಂಕ್ರಾಂತಿ ನಾಟಕ ಪ್ರದರ್ಶನ ನಡೆಯಲಿದೆ.ಮಾರ್ಚ್ 14 ರಂದು ಶನಿವಾರ ಬೆಳಗ್ಗೆ 09:30 ಕ್ಕೆ ಅಪರ ಜಿಲ್ಲಾಧಿಕಾರಿಗಳಾದ ವಿ. ಅಭಿಷೇಕ್ ರಾಷ್ಟ್ರಧ್ವಜ, ಉಪ ವಿಭಾಗಾಧಿಕಾರಿಗಳಾದ ಎಸ್. ಸತ್ಯನಾರಾಯಣ ಅವರು ನಾಡಧ್ವಜ, ಡಿ. ಮಂಜುನಾಥ ಪರಿಷತ್ತು ಧ್ವಜಾರೋಹಣ ಮಾಡಲಿದ್ದಾರೆ.

ಗಣ್ಯ ಸಾಹಿತಿಗಳ ವಿಚಾರ ಸ್ಮರಣೆ ಮಾತು ಮಂಥನದಲ್ಲಿ ವಿಚಾರ ಕ್ರಾಂತಿಗೆ ಆಹ್ವಾನ 50 ವಿಚಾರವಾಗಿ ಪ್ರೊ. ಕೆ. ಸಿ. ಶಿವಾರೆಡ್ಡಿ, ಡಾ. ಜಿ. ಎಸ್. ಶಿವರುದ್ರಪ್ಪ-100 ವಿಚಾರವಾಗಿ ಡಾ. ಪ್ರಶಾಂತ ನಾಯಕ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು 100 ವಿಚಾರವಾಗಿ ಡಾ. ಜೆ. ಕೆ. ರಮೇಶ್, ದಲಿತ ಚಳುವಳಿ, ಸಾಹಿತ್ಯ_50 ವಿಚಾರವಾಗಿ ಡಾ. ಜಿ. ಎನ್. ಧನಂಜಯ ಮೂರ್ತಿ ಮಾತನಾಡಲಿದ್ದಾರೆ. 

ಕನ್ನಡ ಶಾಲೆಗಳು ಈ ಹೊತ್ತಿನ ಸವಾಲುಗಳು ಗೋಷ್ಠಿ ಯ ಅಧ್ಯಕ್ಷತೆ ಖ್ಯಾತ ಚಿತ್ರ ಕಲಾವಿದರು, ಬರಹಗಾರರಾದ ಎಂ. ಎಸ್. ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.ಡಿ.ಪಿ.ಐ. ಎಸ್. ಆರ್. ಮಂಜುನಾಥ ಆಶಯ ಮಾತನಾಡುವರು, ಬಿ.ಇ.ಓ. ರಮೇಶ್, ಮಹಾಬಲೇಶ್ವರ ಹೆಗಡೆ, ಅಶ್ವಿನ್ ಕುಮಾರ್, ಭಾವನಗೌಡ, ಯೋಗೀಶ್ ಗಾಯತ್ರಿ, ರಾಮಾಚಾರ್ ಸ್ಪಂದನೆ ನೀಡಲಿದ್ದಾರೆ. ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ನಮ್ಮೊಂದಿಗಿರಲಿದ್ದಾರೆ.

ಕಥೆ ಕೇಳೋಣ ಬನ್ನಿ ಗೋಷ್ಠಿಯಲ್ಲಿ ಕಥೆಗಾರ ಕಂ. ನಾಡಿಗ ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಟು ಜನ ಕಥೆಗಾರರು ಕಥೆ ಹೇಳಲಿದ್ದಾರೆ. 

ಕನ್ನಡ ಬಳಕೆ ಸಾರ್ವಜನಿಕ ನಿರ್ಲಕ್ಷ್ಯ ವಿಚಾರವಾಗಿ ಗೋಷ್ಠಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್ ಅಧ್ಯಕ್ಷತೆ ವಹಿಸುವರು. ಮಾನ್ಯ ಸಂತೋಷ್ ಎಂ. ಎಸ್. ಅವರು ನ್ಯಾಯಾಲಯ, ತುಕಾರಾಮ್ ಜಿ. ಸಾರ್ವಜನಿಕರ, ಡಾ|| ಟಿ. ಡಿ. ತಿಮ್ಮಪ್ಪ ವೈದ್ಯಕೀಯ, ಎ.ಎಂ. ಸುರೇಶ್ ವಾಣಿಜ್ಯೋದ್ಯಮ, ಡಿ. ಎಸ್. ಚಂದ್ರಶೇಖರ ಅವರು ಕೈಗಾರಿಕೋದ್ಯಮ, ಎಚ್. ಆರ್. ಬಸವರಾಜಪ್ಪ ಅವರು ರೈತರನ್ನು ವಂಚಿಸುವ ವ್ಯವಸ್ಥೆ, ಎಂ. ಗಂಗಾಧರಪ್ಪ ಬ್ಯಾಂಕಿಂಗ್ ಕ್ಷೇತ್ರ ಕುರಿತು ಮಾತು ಮಂಥನ ನಡೆಯಲಿದೆ.

ಸಂಜೆ 6 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ. ಎಸ್. ಪಿ. ಪದ್ಮಪ್ರಸಾದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ನವರು, ಸಮ್ಮೇಳನಾಧ್ಯಕ್ಷರಾದ ವಿಜಯಶ್ರೀ, ಸಂಸದರಾದ ಬಿ. ವೈ. ರಾಘವೇಂದ್ರ, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಬಿ. ಕೆ. ಸಂಗಮೇಶ್ವರ, ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಬಿ. ವೈ. ವಿಜಯೇಂದ್ರ, ಎಸ್. ಎಲ್. ಭೋಜೇಗೌಡರು, ಡಾ|| ಧನಂಜಯ ಸರ್ಜಿ, ಬಲ್ಕೀಶ್ ಬಾನು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಆಡಳಿತಾಧಿಕಾರಿಗಳಾದ ಕೆ. ಎ. ದಯಾನಂದ ಅವರ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

 ದಾನಿಗಳಿಗೆ, ನಾಡು ನುಡಿ ಸೇವೆಗಾಗಿ ಶ್ರಮಿಸುತ್ತಿರುವ ಗಣ್ಯರಿಗೆ ಅಭಿನಂದನೆ ಕಾರ್ಯಕ್ರಮ ನಂತರ  ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ  ಕೆ.ಎಸ್. ಹುಚ್ಚರಾಯಪ್ಪ, ಡಿ.ಗಣೇಶ್, ಎಂ.ಎಂ.ಸ್ವಾಮಿ, ಆರ್. ರತ್ನಯ್ಯ, ರಾಮಾಚಾರ್, ಎಸ್. ಷಣ್ಮುಖಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ಭೈರಾಪುರ ಶಿವಪ್ಪಗೌಡರು, ಕೆ. ಎಸ್. ಅನುರಾಧ, ನಳಿನಾಕ್ಷಿ, ಜೆ. ಕುಬೇರಪ್ಪ ಉಪಸ್ಥಿತರಿದ್ದರು.

Shivamogga District 20th Kannada Sahitya Sammelana to be held at Sahitya Gram from Mar. 13

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close