ಸಿಗಂದೂರು ಸೇತುವೆ ಬಂದ್ ಮಾಡಿ ಪ್ರತಿಭಟನೆ-Sigandur bridge closed in protest

 SUDDILIVE || SHIVAMOGGA 

ಸಿಗಂದೂರು ಸೇತುವೆ ಬಂದ್ ಮಾಡಿ ಪ್ರತಿಭಟನೆ-Sigandur bridge closed in protest     

Siganduru, protest

ಭೂಮಿಯ ಹಕ್ಕಿಗಾಗಿ ಮುಳುಗಡೆ ಸಂತ್ರಸ್ಥರಿಂದ  ರೈತರ ಹೋರಾಟ ಮುಂದುವರಿದಿದೆ. ನೂತನ ಸಿಗಂದೂರು ಸೇತುವೆ ಬಂದ್ ಮಾಡಿ, ರೈತರ ಪ್ರತಿಭಟನೆ ನಡೆಸಿದ್ದಾರೆ.

ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀನಾಶ್ರೀನಿವಾಸ ಅವರ ನೇತೃತ್ವದಲ್ಲಿ ಸಾವಿರಾರು ರೈತರಿಂದ ಪ್ರತಿಭಟನೆ ನಡೆದಿದೆ. ನೂತನ ಸಿಗಂದೂರು ಸೇತುವೆ ಬಂದ್ ಮಾಡಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆಗಿಂತ ನಮಗೆ ಭೂಮಿ ಹಕ್ಕು ನಮಗೆ ಮುಖ್ಯ ಎಂದು ಆಗ್ರಹಿಸಲಾಗಿದ್ದು,  ರೈತರ ಪ್ರತಿಭಟನೆಯಿಂದ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಆಗಿದೆ.

ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೊಡ್ಲು- ಕಳಸವಳ್ಳಿ ನಡುವಿನ ಸೇತುವೆ ಪ್ರತಿಭಟನೆಯಿಂದ ರಸ್ತೆ ಸಂಚಾರ ತೊಂದರೆಯುಂಟಾಗಿದೆ. ಭೂಮಿ ಹಕ್ಕು ನೀಡುವಂತೆ ಪ್ರತಿಭಟನೆನಿರತ ರೈತರ ಒತ್ತಾಯಿಸಿದ್ದಾರೆ. ಕೆಪಿಸಿ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿದ್ದಾರೆ. 

ಕೆಪಿಸಿ ಬಳಸದೇ ಇರುವ ಭೂಮಿ ವಾಪಸ್ ನೀಡಲು ಆಗ್ರಹಿಸಲಾಗಿದೆ. ಕಾಲಮಿತಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಸೇತುವೆ ಬಳಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ರೈತ ಗೀತೆ ಹಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಹನೆ ವ್ಯಕ್ತಪಡಿಸಲಾಗಿದೆ. 

ಸ್ಥಳೀಯ ಶಾಸಕರು, ಸಂಸದರು ಹಾಗೂ ಲೋಕಸಭಾ ಸದಸ್ಯರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಲಾಗಿದೆ, ಅರಣ್ಯ ಇಲಾಖೆಯ ತಮ್ಮನ್ನು ಒಕ್ಕಲೆಬ್ಬಿಸಬಾರದೆಂದು  ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

Sigandur bridge closed in protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close