ಹೊಂಚು ಹಾಕಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಡಲು ಮುಂದಾಗಿದ್ದ ಆರೋಪಿಗಳಿಗೆ ಶಿಕ್ಷೆ-The accused who set fire by pouring petrol in an ambush were sentenced

 SUDDILIVE || SHIVAMOGGA

ಹೊಂಚು ಹಾಕಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಡಲು ಮುಂದಾಗಿದ್ದ ಆರೋಪಿಗಳಿಗೆ ಶಿಕ್ಷೆ-The accused who set fire by pouring petrol in an ambush were sentenced.

Accused, ambush


ಹೊಂಚು ಹಾಕಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಜೀವಂತವಾಗಿ ಸುಟ್ಟುಹಾಕಲು ಮುಂದಾಗಿದ್ದ ಬೆಳಲಕಟ್ಟೆಯ ಇಬ್ವರು ಆರೋಪಿಗಳಿಗೆ ಮಾನ್ಯ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಥು ನೀಡಿದೆ

ಶಿವಮೊಗ್ಗದ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಮತ್ತು ಆರೋಪಿತರಾದ ಕುಮಾರ್ 57 ವರ್ಷ, ಕಾರ್ತಿಕ್ 28 ವರ್ಷ, ರವರಿಗೆ ಈ ಹಿಂದೆ ಜಮೀನಿನ ವಿಚಾರದಲ್ಲಿ ಗಲಾಟೆಗಳಾಗುತ್ತಿದ್ದು, ದಿ:3-12-23 ರಂದು ಆರೋಪಿತರು ಮಹೇಶಪ್ಪನನ್ನು ಸಾಯಿಸುವ ಉದ್ದೇಶದಿಂದ, ಮತ್ತೋಡು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿ, ಮಹೇಶಪ್ಪನು ಸ್ಕೂಟಿಯಲ್ಲಿ ಬರುವಾಗ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುತ್ತಾರೆ. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ: 383/2023 ಕಲಂ:120(ಬಿ), 341, 435, 302 ಸಹಿತ 34 ಐಪಿಸಿ ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಸತ್ಯ ನಾರಾಯಣ ವೈ. ಪಿಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

 ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಮಮತಾ ಬಿ.ಎಸ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ ರವರು ಜೀವಾವಧಿ ಶಿಕ್ಷೆ & ಒಟ್ಟು 57,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತಾರೆ.

The accused who set fire by pouring petrol in an ambush were sentenced.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close