ಗಾಂಜಾ ಇಲ್ಲ ಎಂದಿದ್ದಕ್ಕೆ ನಡೀತಾ ಹಲ್ಲೆ?Couple attacked by strangers in Gadikoppa

SUDDILIVE || SHIVAMOGGA

ಗಾಂಜಾ ಇಲ್ಲ ಎಂದಿದ್ದಕ್ಕೆ ನಡೀತಾ ಹಲ್ಲೆ?Couple attacked by strangers in Gadikoppa      

Couple, attack

ಶಿವಮೊಗ್ಗದ ಗಾಡಿಕೊಪ್ಪದಲ್ಲಿ  ದಂಪತಿಗಳ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವರನ್ನ ಅಂಬೇಡ್ಕರ್ ನಗರದ ನಿವಾಸಿ ರಾಜು (೪೫)ಹಾಗೂ ಚುಮ್ಮ(೩೫) ಎಂದು ಗುರುತಿಸಲಾಗಿದೆ. 

ಘಟನೆಯಲ್ಲಿ ದಂಪತಿಗೆ ತಲೆ ಮತ್ತು ಕೈಗೆ ಗಾಯಗೊಂದಿದ್ದಾರೆ. ಅಪರಿಚಿತ ಯುವಕನಿಂದ ಹಲ್ಲೆ ಎಂದು ಹೇಳಲಾಗುತ್ತಿದೆ. ಕುಡಿದ ಮತ್ತಿನಲ್ಲಿದ್ದ ದಂಪತಿಗಳನ್ನ ಥಳಿಸಲಾಗಿದೆ. ಗಾಯಾಳುಗಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದಾರೆ. ದಾಳಿ ಮಾಡಿ ಅಪರಿಚಿತ ಯುವಕರು ಪರಾರಿಯಾಗಿದ್ದಾರೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಈ ಕುರಿತು ಹಲ್ಲೆಗೊಳಗಾದ ರಾಜು ಪ್ರತಿಕ್ರಿಯಿಸಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಟಿಪ್ಪು ನಗರದ ಯುವಕನಾಗಿದ್ದು ಆತ ನಮ್ಮ ಬಳಿ ಗಾಂಜಾ ಕೇಳಿದ್ದಾನೆ. ಗಾಂಜಾ ಇಲ್ಲ ಎಂದಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾನೆ. 

Couple attacked by strangers in Gadikoppa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close