SUDDILIVE || SHIKARIPURA
ದುರ್ಗಿಗುಡಿಯಲ್ಲಿ ಈ ಬಾರಿ ಬೆಳಗ್ಗೆನೆ ತೇರು ಎಳೆದ ಭಕ್ತ ಸಮೂಹ-This time, a group of devotees pulled a chariot in the morning at Durgigudi
ಹೋಳಿ ಹುಣ್ಣಿಮೆಗೆ ದುರ್ಗಿಗುಡಿಯ ರಥೋತ್ಸವನಡೆದಿದೆ. ಗ್ರಹಣದ ಹಿನ್ನಲೆಯಲ್ಲಿ ಮಧ್ಯಾಹ್ನ ನಡೆಯಬೇಕಿದ್ದ ರಥೋತ್ಸವ ಈ ಬಾರಿ ಬೆಳಿಗ್ಗೆ ನಡೆದಿದೆ.
ಹೋಳಿ ಹುಣ್ಣಿಮೆಯಂದು ದುರ್ಗಿಗುಡಿ ದುರ್ಗಮ್ಮನ ಮತ್ತು ಮರಿಯಮ್ಮನ ತೇರು ಎಳೆಯಲಾಗಿದೆ. ಹೃದಯ ಭಾಗದ ದುರ್ಗಿಗುಡಿಯಲ್ಲಿ ಮಂಗಳವಾರ ಸಮಸ್ತ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತ್ತಿದೆ.
ದುರ್ಗಪರಮೇಶ್ವರಿ ಸೇವಾ ಸಮಿತಿ ನೇತೃತ್ವದಲ್ಲಿ ಭಕ್ತರು ತೇರನ್ನು ಎಳೆಯಲಾಗಿದ್ದು, ಶಿವಮೊಗ್ಗ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದೆ. ತೇರು ಎಳೆಯಲು ವಿವಿಧ ಭಾಗಗಳ ಭಕ್ತರು ಆಗಮಿಸಿದ್ದರು. ದುರ್ಗಿಗುಡಿಯಲ್ಲಿ ತೇರನೆಳೆದು ನಂತರ ದೇವಿಯ ಗುಡಿ ಎದುರು ನಿಲ್ಲಿಸಿದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ದೇಶಾದ್ಯಂತ ಹೋಳಿ ಹುಣ್ಣಿಮೆಯಂದು ಹೋಳಿ ಆಚರಿಸಿದರೆ ಶಿವಮೊಗ್ಗದಲ್ಲಿ ದುರ್ಗಿಗುಡಿಯ ದುರ್ಗಮ್ಮ ದೇವರ ತೇರು ಎಳೆದ ಮರುದಿನ ಹೋಳಿ ಆಚರಿಸುವುದು ಸಂಪ್ರದಾಯ. ಹಾಗಾಗಿ ಶಿವಮೊಗ್ಗದಲ್ಲಿ ಶನಿವಾರ ಹೋಳಿ ಆಚರಣೆ ನಡೆಯಲಿದೆ. ಕಳೆದ ಬಾರಿ ಮಧ್ಯಹ್ನ 2-30 ಕ್ಕೆ ದೇವಿಯ ತೇರು ಎಳೆಯಲಾಗಿತ್ತು. ಈ ಬಾರಿ ಗ್ರಹಣ ಹಿನ್ಬಲೆಯಲ್ಪಿ ಬೆಳಿಗ್ಗೆ ಸುಮಾರು 9 ಗಂಟೆಗೆ ತೇರು ಎಳೆಯಲಾಗಿದೆ. ಶುಭಂ ಹೋಟೆಲ್ ಬಳಿ ದೇವಿಗಳಿಗೆ ಪೂಜೆಗೆ ತೆರಳಲಾಗುತ್ತಿದೆ.
This time, a group of devotees pulled a chariot in the morning at Durgigudi
