SUDDILIVE || SHIVAMOGGA
ಟ್ರಾನ್ಸ್ ಫಾರ್ಮ್ ಬದಲಿಸಲು ಮೆಸ್ಕಾಂ ಮೀನಾಮೇಶ, ಗ್ರಾಮಸ್ಥರ ಆಕ್ರೋಶ- MESCOM seeks to replace transformer, villagers outraged
ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಹಾಳಾಗಿದ್ದು, ಹಾಳಾದ ಟ್ರಾನ್ಸ್ ಫಾರ್ಮರ್ ನ್ನೆ ಮೆಸ್ಕಾಂ ಮುಂದುವರೆಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಹಾಳಾಗಿ 15 ದಿನಗಳು ಕಳೆದಿವೆ. ಆದರೆ ಮೆಸ್ಕಾಂ ಕಾನೂನು ಪ್ರಕಾರ ಹಾಳಾದ ಟ್ರಾನ್ಸ್ ಫಾರ್ಮರ್ ನ್ನ 24 ಗಂಟೆಯ ಒಳಗೆ ಬದಲಿಸ ಬೇಕೆಂಬ ನಿಯಮವಿದ್ದರೂ. ನಾವಾಗೆ ಮೆಸ್ಕಾಂ ಕಚೇರಿಗೆ ಹೋಗುವ ತನಕ ಯಾವ ಅಧಿಕಾರಿಯಾಗಲಿ ಸಿಬ್ಬಂದಿಗಳಾಗಲಿ ಇತ್ತ ತಲೆಹಾಕಿ ಮಲಗಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ಸಿಬ್ಬಂದಿಗಳು ಸ್ಪಾಟ್ ಗೆ ಬಂದು ಟ್ರಾನ್ಸ್ ಫಾರ್ಮರ್ ಹಾಳಗಿದ್ದರೆ ಇಂಡೆಂಟ್ ಹಾಕಬೇಕು. ಆದರೆ ಯಾರೂ ಬಂದಿಲ್ಲ. ನಾಲ್ಕೈದು ದಿನಗಳ ಹಿಂದೆ ಗ್ರಾಮಸ್ಥರೆ ಕಚೇರಿಗೆ ಹೋಗಿ ಇಂಡೆಂಟ್ ಹಾಕಿಸಲಾಗಿದೆ. ನಿನ್ನೆ ಬರಬೇಕಿದ್ದ ಟ್ರಾನ್ಸ್ ಫಾರ್ಮರ್ ಇಂದು ಬಂದಿದೆ.
ಬಂದ ಟ್ರಾನ್ಸ್ ಫಾರ್ಮರ್ ನ್ನ ಲೈನ್ ಮ್ಯಾನ್ ಗಳೆ ಹಳೆ ಟಿಸಿ ಕಳುಹಿಸಿಕೊಡಾಗಿದೆ. ಆಯಿಲ್ ಹಾಕದೆ ಕಳುಹಿಸಲಾಗಿದೆ ಎಂದು ಟಿಸಿ ಕೂರಿಸಲು ಬರೊಲ್ಲ ಎನ್ನುತ್ತಿದ್ದಾರೆ ಎಂದು ಗ್ರಾಸ್ಥರು ದೂರಿದ್ದಾರೆ. ಬೇಸಿಗೆಯಲ್ಲಿ ಮಳೆಗೆ ಮಿಂಚು ಸಿಡಿಲಿಗೆ ಟ್ರಾನ್ಸ್ ಫಾರ್ಮರ್ ಹಾಳಾಗುವುದು ಸಹಜ. ತಕ್ಕನ ಹಾಗೆ ಟ್ರಾನ್ಸ್ ಫಾರ್ಮರ್ ನ್ನ ದೋಷ ನಿವಾರಿಸಬೇಕು.
ಇಲ್ಲವಾದಲ್ಲಿ ಬೇಸಿಗೆ ಬೆಳೆ ರೈತರಿಗೆ ಕೈತಪ್ಪುವ ಆತಂಕವಿದೆ ಜಿಲ್ಲಾಡಳಿತ ಗಮನ ಹರಿಸಲಿದೆ ಎಂಬುದನ್ನಕಾದು ನೋಡಬೇಕಿದೆ.
MESCOM seeks to replace transformer, villagers outraged
