ನಾರಿ ಶಕ್ತಿ ವಂದನಾ ಅಧಿನಿಯಮ ಕಾಯ್ದೆಯಿಂದ ಮಹಿಳೆಯರಿಗೆ ಅನುಕೂಲ-ಸಂಸದ ಬಿವೈಆರ್- Nari Shakti Vandana Act will benefit women - MP BYR

 SUDDILIVE || SHIVAMOGGA

ನಾರಿ ಶಕ್ತಿ ವಂದನಾ ಅಧಿನಿಯಮ ಕಾಯ್ದೆಯಿಂದ ಮಹಿಳೆಯರಿಗೆ ಅನುಕೂಲ-ಸಂಸದ ಬಿವೈಆರ್-   Nari Shakti Vandana Act will benefit women - MP BYR  

Nari, shakthi

ಮಹಿಳಾ‌ಮೀಸಲಾತಿಯನ್ನ ದೇಶದಲ್ಲಿ ಜಾರಿಗೆ ತರುವ ಮೂಲಕ ಶತಮಾನದ ಐತಿಹಾಸಿಕ ಮತ್ತು ಮಹತ್ವವಾದ ಮೈಲಿಗಲ್ಲಿಗೆ ಪ್ರಧಾನ ಮೋದಿ ಸಾಕ್ಷಿಯಾಗಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011 ರ ಜನಗಣತಿ ಆಧಾರದ ಮೇರೆಗೆ ಮಹಿಳ ಮೀಸಲಾತಿಯ ಕಾನೂನನ್ನ 2029 ರ ಚುನಾವಣೆಗೆ ಜಾರಿಗೆ ತರಲಾಗುತ್ತಿದೆ. ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಜಾರಿಗೊಳ್ಳಲಾಗುತ್ತಿದೆ. ನಾರಿ ಶಕ್ತಿ ವಂದನ ಅಧಿನಿಯಮ ಕೇವಲ ಕಾಯ್ದೆ ಅಲ್ಲ ದೇಶದ ತಾಯಿಯಂದರಿಗೆ ಪುತ್ರಿಯರಿಗೆ ಎನ್ ಡಿಎ ಸರ್ಕಾರ ಕೊಡುವ ಗೌರವ ಎಂದರು.

ದೇಶದ ನಾರಿ ಶಕ್ತಿ ದಶಕಗಳ ಕಾಲ 2034 ಕ್ಕೆ ಜಾರಿಯಾಗುವ ನಿರೀಕ್ಷೆಯಿತ್ತು. 2029 ರಲ್ಲೇ ಕೇಂದ್ರ ಸರ್ಕಾರ ಜಾರಿಗೊಳ್ಳಲಿದೆ ಕರಡು ಪ್ರತಿ ತಯಾರಿಸಲಾಗಿದೆ.  543 ರಿಂದ 850 ಕ್ಕೆ ಏರಿಕೆಯಾಗಲಿದೆ. 270 ಸ್ಥಾನ ಮಹಿಳೆಯರ ಪಾಲಾಗಲಿದೆ. ರಾಜ್ಯದಲ್ಲಿ ಲೋಕಸಭ ಕ್ಷೇತ್ರ 28 ಇದೆ ಎಷ್ಟಾಗಲಿದೆ ಕಾದು ನೋಡಬೇಕಿದೆ. 14 ಸ್ಥಾನಗಳು ಹೆಚ್ಚಾಗುವ ನಿರೀಕ್ಷೆಯಿದೆ. ಎಲ್ಲಾ ರಾಜ್ಯದಲ್ಲಿ 50% ಹೆಚ್ಚಿಗೆ ಆಗಲಿದೆ  ಎಂದರು‌ 

ನಾಳೆಯಿಂದ ನಡೆಯುವ ಮೂರು ದಿನದ ಅಧಿವೇಶನದಲ್ಲಿ ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ಕ್ಷೇತ್ರದ ತಾಯಿ ಮತ್ತು ಸಹೋದರಿಗೆ ಅಭಿನಂದಿಸುವುದಾಗಿ ಹೇಳಿದರು. ಇಷ್ಟುವರ್ಷ ರಾಜಕೀಯ ಪಕ್ಷಗಳು ಮತಬ್ಯಾಂಕ್ ನ್ನಾಗಿ ಮಹಿಳೆಯರನ್ನ‌ ಬಳಸಿಕೊಂಡಿವೆ. ವಿಪಕ್ಷಗಳು ಮಹಿಳ ವಿಚಾರದಲ್ಲಿ ರಾಜಕೀಯ ಮಾಡದೆ ಬೆಂಬಲಿಸುವಂತೆ ಕೋರಿದರು. 

ಕಾಂಗ್ರೆಸ್ ಮೊದಲಿನಿಂದ ಮೀಸಲಾತಿಗೆ ವಿರೋಧವಿದೆ. ರಾಹುಲ್ ಗಾಂಧಿಯವರು ಮಹಿಳ ಮೀಸಲಾತಿ ಜಾರಿಯಾದಾಗ ಇವತ್ತೆ ಜಾರಿಯಾಗಬೇಕೆಂದು ಟೇಬಲ್ ಕುಟ್ಟಿ ಮಾತನಾಡಿದ್ದರು. ಈಗ ಅವರ ಧ್ವನಿ ಬದಲಾಗಿದೆ. ಕಾಂಗ್ರೆಸ್ ಗೊಂದಲದಲ್ಲಿದೆ ಎನ್ ಡಿಎ ನಿರ್ಧಾರದಲ್ಲಿ ಗೊಂದಲವಿಲ್ಲ. 

ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಮೇ.1 ರಿಂದ ಬಂದ್ ಆಗಲಿದೆ. ಬೀದರ್ ನಲ್ಲಿ ಇಂಡಿಗೋ ಏರ್ ಲೈನ್ ಗೆ ಬಿಎಸ್ ವೈ ಸಿಎಂ ಇದ್ದಾಗ ಮುಙದುವರೆಸಲಾಹಿತ್ತು. ಅದರೀತಿ ಇನ್ಫ್ರಾಸ್ಟ್ರಕ್ಚರ್ ಮಿನಿಸ್ಟರ್ ಎಂಬಿ ಪಾಟೀಲ್ ಗೆ ಮನವಿ ಮಾಡಿರುವೆ. ನೈಟ್ ಲ್ಯಾಂಡಿಂಗ್ ವಿಳಂಬವಾಗಿದೆ. ಹಾಗಾಗಿ ಬಂದ್ ಆಗಲಿದೆ ಎಂಬ ಸುದ್ದಿಯಿದೆ ನೋಡೋಣ ಏನಾಗಲಿದೆ ಎಂದರು. 

Nari Shakti Vandana Act will benefit women - MP BYR  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close