SUDDILIVE || SHIVAMOGGA
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ-ಮೂರನೇ ಆರೋಪಿಗೆ ಶಿಕ್ಷೆ ಪ್ರಕಟ-Shivamogga Trial blast case: Sentence announced for third accused
ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಅರಫತ್ ಅಲಿಗೆ 6 ವರ್ಷ ಶಿಕ್ಷೆ ಯನ್ನ ಎನ್ಐಎ ಕೋರ್ಟ್ ಆದೇಶಿಸಿದೆ. ಅರಫತ್ ಪ್ರಕರಣದ ಮೂರನೇ ಆರೋಪಿಯಾಗಿದ್ದನು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಹಮ್ಮದ್ ಜಬಿಯುಲ್ಲಾ, ನದೀಂ ಫೈಜಲ್ ಅಪರಾಧಿಗಳೆಂದು ಸಾಬೀತಾಗಿದ್ದು. ಇಬ್ಬರಿಗೂ 6 ವರ್ಷ ಶಿಕ್ಷೆ ವಿಧಿಸಿ ಎನ್ಐಎ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಇದೇ ಕೇಸಿನ ಮತ್ತೊಬ್ಬ ಅಪರಾಧಿಗೆ ಜೈಲು ಶಿಕ್ಷೆಯಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆಯಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್‌ನ 3ನೇ ಆರೋಪಿ ಅರಾಫತ್ ಅಲಿ ಆರೋಪ ಸಾಬೀತಾಗಿದ್ದು, ಈ ಸಂಬಂಧ ಇಂದು ಏಪ್ರಿಲ್ 21) ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದರೊಂದಿಗೆ ಪ್ರಕರಣ ಸಂಬಂಧ 12 ಜನ ಆರೋಪಿಗಳ ಪೈಕಿ ಮೂವರಿಗೆ ಶಿಕ್ಷೆಯಾಗಿದ್ದು, ಇನ್ನುಳಿದ 9 ಜನ ಆರೋಪಿಗಳ ವಿಚಾರಣೆ ಮುಂದುವರೆದಿದೆ.
Trial blast case: Sentence announced for third accused
