ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ : 'ಅದಮ್ಯ ಭಾರತ' ಪ್ರದರ್ಶನ- Vande Mataram rang out in Shivamogga: 'Indomitable India' demonstration

SUDDILIVE || SHIVAMOGGA

ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ : 'ಅದಮ್ಯ ಭಾರತ' ಪ್ರದರ್ಶನ- Vande Mataram rang out in Shivamogga: 'Indomitable India' demonstration     

Vande, Matharam

ನಗರದ ಕುವೆಂಪು ರಂಗಮAದಿರವು ಇಂದು ಸಂಪೂರ್ಣವಾಗಿ ದೇಶಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದಿತು. `ವಂದೇ ಮಾತರಂ' ಗೀತೆಯು ೧೫೦ ವರ್ಷಗಳನ್ನು ಪೂರೈಸುತ್ತಿರುವ ಐತಿಹಾಸಿಕ ಸಂದರ್ಭದ ಅಂಗವಾಗಿ `ಅನವರತ ಫೌಂಡೇಶನ್' ಹಾಗೂ 'ಸಂಸ್ಕಾರ ಭಾರತಿ' ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಕರ್ನಲ್ ಡಾ|| ಎ.ಎಸ್. ರಘುನಾಥ್ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಗೌರವಪೂರ್ವಕವಾಗಿ ಧ್ವಜಾರೋಹಣ ನೆರವೇರಿಸಿದರು. ಪ್ರದರ್ಶಿನಿಯ ಉದ್ಘಾಟನೆಯ ಬಳಿಕ ಮಾತನಾಡಿದ ಕರ್ನಲ್ ಡಾ|| ರಘುನಾಥ್, ರಾಷ್ಟçಗೀತೆ ಮತ್ತು ರಾಷ್ಟçಭಕ್ತಿ ಗೀತೆಗಳು ನಮ್ಮ ದೇಶದ ಸೌಹಾರ್ದತೆಯ ಸಂಕೇತವಾಗಿವೆ ನಮ್ಮ ಯುವಶಕ್ತಿ ದೇಶದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಭಾಗವಹಿಸಿದವರ ಮತ್ತು ದೇಶಕ್ಕಾಗಿ ಪ್ರಾಣತೆತ್ತ ಸೈನಿಕರ ಬಗ್ಗೆ ಮಾಹಿತಿ ಪಡೆಯಬೇಕು ಅವರ ತ್ಯಾಗದ ಬಗ್ಗೆ ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಮತ್ತು ತನ್ನ ಸುಧೀರ್ಘ ಕಾಲದ ಸೈನ್ಯದ ಸೇವೆಯ ಬಗ್ಗೆ  ಮಾಹಿತಿ ನೀಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾರತದ ಚರಿತ್ರೆಯನ್ನು ಯುವಶಕ್ತಿ ಅರಿತುಕೊಳ್ಳಬೇಕಾಗಿದೆ. ದೇಶದ ಮೇಲೆ ಆದ ಅನೇಕ ಆಕ್ರಮಣಗಳು, ರಜಾಕಾರರು ನಮ್ಮ ದೇಶದ ಹೆಣ್ಣು ಮಕ್ಕಳನ್ನು ಜೀವಂತವಾಗಿ ಸುಟ್ಟಿದ್ದನ್ನು ಹೈದರಾಬಾದ್ ಜನ ನೋಡಿದ್ದಾರೆ. ಉತ್ತರ ಭಾರತದಲ್ಲಿ ಬ್ರಿಟೀಷ್ ಆಳ್ವಿಕೆ ಮತ್ತು ಅದಕ್ಕೂ ಮುನ್ನ ಈ ದೇಶದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ರಾಜರುಗಳ ದೌರ್ಜನ್ಯದ ಚರಿತ್ರೆಯನ್ನು ಕೂಡ ಜನ ತಿಳಿದುಕೊಳ್ಳಬೇಕು. ದೇವರ ಸ್ವರೂಪದಲ್ಲಿ ಇದ್ದವರು ನಮ್ಮನ್ನು ಮುಸಲರ ಆಕ್ರಮಣದಿಂದ ತಡೆದಿದ್ದಾರೆ. ಶಿವಮೊಗ್ಗದ ಜನರಿಗೆ ಜಾಸ್ತಿ ಸಮಸ್ಯೆ ಕಂಡಿಲ್ಲ. ಮೇಜರ್ ವಿವೇಕ್‌ಗುಪ್ತ ಅವರ ತಂದೆ ಮತ್ತು ಪತ್ನಿ ಮತ್ತು ಅವರು ಸೈನ್ಯದಲ್ಲಿದ್ದಾಗ ಅವರ ತಂದೆ ತನ್ನ ಮಗನನ್ನು ಯುದ್ಧದಲ್ಲಿ ಭಾಗವಹಿಸದಂತೆ ಸೈನದ ಸ್ಟೋರ್ ಕೀಪರ್ ಹುದ್ದೆಯಲ್ಲಿ ಇಡಲು ಪ್ರಯತ್ನಿಸುತ್ತಾರೆ. ಅದನ್ನು ತಿಳಿದ ವಿವೇಕ್‌ಗುಪ್ತ ನಾನು ಈ ಹುದ್ದೆಯಲ್ಲಿ ಇರುವುದಿಲ್ಲ. ಸೈನ್ಯಕ್ಕಾಗಿ ಸಾಯುತ್ತೇನೆ. ನೀನೇನಾದರೂ ನನ್ನನ್ನು ಯುದ್ಧದಿಂದ ದೂರ ಇಡಲು ಪ್ರಯತ್ನಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿ ಯುದ್ಧಕ್ಕೆ ಧುಮುಕುತ್ತಾನೆ. ಮೊದಲೇ ಯುದ್ಧದಲ್ಲೇ ವೀರತ್ವ ತೋರಿಸಿ ಶತ್ರು ಸೈನಿಕರನ್ನು ಸದೆಬಡಿದು ವೀರಮರಣವನ್ನು ಅಪ್ಪುತ್ತಾನೆ. ದುರಂತವೆAದರೆ ಆ ಮೊದಲ ವಾರ್ತೆ ಸೈನ್ಯದಲ್ಲೇ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಆತನ ಪತ್ನಿಗೆ ಮಾಹಿತಿ ಲಭ್ಯವಾಗುತ್ತದೆ. ಆಕೆ ಅದನ್ನು ಎಲ್ಲರಿಗೂ ತಿಳಿಸಿದ್ದಲ್ಲದೆ ಸ್ವತಃ ತನ್ನ ಗಂಡನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಕಣ್ಣೀರಧಾರೆಯೊಂದಿಗೆ ಪುಷ್ಪನಮನ ಸಲ್ಲಿಸಿ ಮತ್ತೆ ಅದೇ ದಿನ ಯುದ್ಧ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಇಂತಹ ತ್ಯಾಗಮಯಿ, ದೇಶಪ್ರೇಮಿಗಳ ಸಾಹಸ ಕಥೆಗಳನ್ನು ಯುವಶಕ್ತಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ದೇಶದ ಮಿಲಿಟರಿ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. ಯಾವ ಮೊಬೈಲ್ ಮತ್ತು ರೀಲ್ಸ್ಗಳು ಈ ಆತ್ಮವಿಶ್ವಾಸವನ್ನು ತುಂಬಲ್ಲ. ರೀಲ್ಸ್ ಪ್ರೇಮಿಗಳಿಗೆ ಎದ್ದುನಿಂತು ಮಾತನಾಡುವ ತಾಕತ್ತು ಇಲ್ಲ. ಕೇವಲ ೨೦ ಸೆಂಕಡ್‌ಗಳಿಗಿAತ ಜಾಸ್ತಿ ಕೂತು ಕೇಳುವ ಸಾಮರ್ಥ್ಯವೂ ಇಂದಿನ ಯುವಕರಲ್ಲಿ ಇಲ್ಲ. ನಾವು ರೀಲ್ಸ್ ನೋಡುತೇವೆ. ರೀಯಲ್ ಲೈಫ್ ನೋಡಿಲ್ಲ. ರೀಲ್‌ಗಳ ದಾಸರಾಗಬೇಡಿ. ಎಷ್ಟೋಜನ ನಮಗೋಷ್ಕರ ಪ್ರಾಣ ತೆತ್ತಿದ್ದಾರೆ. ವಂದೇ ಮಾತರಂ ಗೀತೆಗೆ ರಾಷ್ಟçಗೀತೆಯ ಸ್ಥಾನಮಾನ ನೀಡದ ಕೇಂದ್ರ ಸರ್ಕಾರಕ್ಕೆ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.

೬ವರೆ ಲಕ್ಷಕ್ಕೂ ಹೆಚ್ಚು ಕ್ರಾಂತಿಕಾರಿಗಳು ಸ್ವಾಂತAತ್ರö್ಯಕ್ಕಾಗಿ ಬಲಿದಾನ ಮಾಡಿದ್ದಾರೆ. ಇಂದು ಸಂಜೆ ಕುವೆಂಪು ರಂಗಮAದಿರದಲ್ಲಿ  ನಾನೇ ಭಾರತ ಎಂಬ ಶೀರ್ಷಿಕೆಯಡಿ ವಂದೇ ಮಾತರಂಗೆ ೧೫೦ ವರ್ಷಗಳ ಹಿನ್ನಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ. ಎಲ್ಲರೂ ಆಗಮಿಸಿ ಭಾರತ ಮಾತೆಯ ಬಗ್ಗೆ ತಿಳಿದುಕೊಳ್ಳೋಣ ಎಂದರು.

ಶಿವಮೊಗ್ಗದ ನೂರಾರು ದೇಶಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು  ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸಂಸ್ಕಾರ ಭಾರತೀಯ ಜಿಲ್ಲಾಧ್ಯಕ್ಷೆ ಸವಿತಾ ಮಾಧವ್, ರಾಜು ಫಡ್ಕರ್, ಆರ್.ಎಸ್.ಎಸ್. ಪ್ರಮುಖರಾದ ಗಿರೀಶ್‌ಕಾರಂತ್, ರಂಗನಾಥ್, ರಾಮಚಂದ್ರ, ಸೂಡಾ ಮಾಡಿ ಅಧ್ಯಕ್ಷ ನಾಗರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಜ್ಞಾನೇಶ್ವರ್, ಹಿರೇಮಠ್ ಮತ್ತಿತರರಿದ್ದರು.

Vande Mataram rang out in Shivamogga: 'Indomitable India' demonstration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close