ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿದ್ದೇನು?What was found in the Lokayukta raid?

 SUDDILIVE || SHIVAMOGGA

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿದ್ದೇನು?What was found in the Lokayukta raid?     

Lokayukta, raid




ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್ ಅವರ ಜನ್ಮ ಜಾಲಾಡಿರುವ ಲೋಕಾಯುಕ್ತ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ.

ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಕೆಹೆಚ್ ಬಿಯ ಎರಡು ಖಾಲಿ ನಿವೇಶನ, ನಾಲ್ಕು ಎಕರೆ ಅಡಿಕೆ ತೋಟ ಪತ್ತೆ ಮಾಡಿರುವ ಲೋಕಾಯುಕ್ತರು ಆಚಾಪುರದಲ್ಲಿ ನಡೆಸುತ್ತಿರುವ ಖಾಸಗಿ ಶಾಲೆ ಬೆಳಕಿಗೆ ಬಂದಿದೆ. ಒಂದರಿಂದ 10 ನೇ ತರಗತಿಯ ವರೆಗಿನ ಪ್ರೌಢಶಾಲೆಯನ್ನ ಶೋಭಾರವರ ಹೆಸರಿನ ಒಡೆತನದಲ್ಲಿರುವುದು ಪತ್ತೆಯಾಗಿದೆ. 

ಶಿಕಾರಿಪುರದಲ್ಲಿ ಸ್ವಂತ ಮನೆ ಹೊಂದಿರುವ ಶೋಭರವರ ಮನೆಯಲ್ಲಿ 750 ಗ್ರಾಂ ಬಂಗಾರ, 2½ ಕೆಜಿ ಬೆಳ್ಳಿ ಸಾಮಾಗ್ರಿ ಹಾಗೂ 60 ಸಾವಿರ ರೂ. ನಗದು ಪತ್ತೆಯಾಗಿದೆ. ಇನ್ನೂ ಬ್ಯಾಂಕ್ ಅಕಂಟ್ ಗಳಲ್ಲಿ ಎಷ್ಟೆಷ್ಟಿದೆ ಎಂಬುದರ ಬಗ್ಗೆ ಲೋಕಾಯುಕ್ತ ವಿಚಾರಣೆ ಮುಂದುವರೆದಿದೆ. 

ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರ ಸೇರಿದಂತೆ ಶೋಭಾರವರಿಗೆ ಸೇರಿದ ಒಟ್ಟು ಐದು ಸ್ಥಳಗಳಲ್ಲಿ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ಕೈಗೊಳ್ಳಲಾಗಿವೆ. ಅವರ ಆಪ್ತಸಹಾಯಕನ ಬಗ್ಗೆಯೂ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ.

What was found in the Lokayukta raid?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close