ವಿದ್ಯುತ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ-ಭೈರತಿ ಸುರೇಶ್-Central government responsible for electricity price hike - Bhairati Suresh

 SUDDILIVE || SHIVAMOGGA

ವಿದ್ಯುತ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ-ಭೈರತಿ ಸುರೇಶ್-Central government responsible for electricity price hike - Bhairati Suresh 

Central, government

ಯುನಿಟಿಗೆ 56 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಕೇಂದ್ರದ ಇಂಧನ ಬೆಲೆ ಏರಿಕೆಯ ಕಾರಣ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು

ಅವರು ಶಿವಮೊಗ್ಗದ ಐಬಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಗ್ಯಾಸ್ ದರ 993 ಏರಿಕೆಯಾಗಿದೆ. ಚುನಾವಣೆ ಆಗುವ ತನಕ ಬಿಜೆಪಿಯವರು ದರ ಏರಿಕೆಗೆ ಕಾಯುತ್ತಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಗ್ಯಾಸ್ ದರವನ್ನು ಏರಿಸ ಲಾಗಿದೆ ಇದನ್ನ ಯಾರು ಕೇಳುವರಿಲ್ಲ ಗ್ಯಾಸ್ ದರ ಏರಿಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಎರಡು ರೂಪಾಯಿ ದರ ಹೆಚ್ಚಿಸಿದಾಗಲೇ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು ಈಗ ಸುಮ್ಮನಿದ್ದಾರೆ. ರಾಜ್ಯ ಸರ್ಕಾರ ಒಂದು ಮನೆಗೆ 5 ಗ್ಯಾರೆಂಟಿ ರೂಪದಲ್ಲಿ 8000 ಹಣವನ್ನು ನೀಡುತ್ತಿದೆ. ಡಿಜೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನರ ಕಷ್ಟ ದೇವರಿಗೆ ಪ್ರೀತಿಯಾಗಿದೆ ಎಂದ ಅವರಿಗೆ ವಿದ್ಯುತ್ ದರ 56 ಪೈಸೆ ಏರಿಕೆಯಾಗಿದೆಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಇದಕ್ಕೂ ಕೇಂದ್ರವೇ ಕಾರಣ ಎಂದಿದ್ದಾರೆ. 

ವಿದ್ಯುತ್ ತಯಾರಿಕೆಗೆ ಇಂಧನಬೇಕಿದೆ. ಗ್ಯಾಸು, ಪೆಟ್ರೋಲ್ ಡಿಸೇಲ್ ಎಲ್ಲ ದರ ಏರಿಕೆ ಮಾಡಿದರೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹಾಗಾಗಿ ವಿದ್ಯತ್ ದರ ಏರಿಕೆಯಾಗಿದೆ ಎಂದರು. ಸಂಪುಟ ಪುನರ್ ರಚನೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಸಿಎಂ, ಡಿಸಿಎಂ ಸಚಿವರು ಶಾಸಕರು ಎಲ್ಲರೂ ಹೈಕಮಾಂಡ್ ಏನು  ಅದಕ್ಕೆ ಕಾಂಗ್ರೆಸ್ ಪಕ್ಷದವರು  ಬದ್ದರಾಗಿರುತ್ತೇವೆ ಎಂದರು. 

ಎಷ್ಟುದಿನ ಅಧಿಕಾರದಲ್ಲಿ ಇರಲು ಹೇಳುತ್ತಾರೋ ಅಲ್ಲಿಯವರೆಗೂ ನಾವು ಅಧಿಕಾರದಲ್ಲಿರುತ್ತೇವೆ. ಯಾವಾಗ ಹೈಕಮಾಂಡ್ ಹೇಳುತ್ತದೊ ಆಗ ಶಾಸಕರಾಗಿ ಉಳಿಯುತ್ತೇವೆ ಎಂದರು. ಶಾಸಕರು ದೆಹಲಿ ಪ್ರವಾಸ ವಿಚಾರ ಶಾಸಕರು ದೆಹಲಿಗೆ ಹೋದರೆ ತಪ್ಪೇನಿದೆ. ಬಿಜೆಪಿಯ ಅವಧಿಯಲ್ಲಿ ಮೂರು ಸಿಎಂಗಳು ಬದಲಾದರು. ಹಾಗಾದರೆ ಸಚಿವ ಸಂಪುಟ ಪುನರ್ ರಚನೆಯಾಗಬಾರದೆ. ಎಲ್ಲಿರಿಗೂ ಅವಕಾಶ ಸಿಗಲಿ ಬಿಡಿ ಎಂದರು. 

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ 2ನೇ ಹಂತದಲ್ಲಿ ಶಿವಮೊಗ್ಗಕ್ಕೆ 200 ಕೋಟಿ ರೂಗಳನ್ನ ನೀಡಲಾಗಿದೆ. ರಾಜ್ಯದಲ್ಲಿ 2600 ಕೋಟಿ 13  ಮಹಾನಗರ ಪಾಲಿಕೆಗೆ ನೀಡಲಾಗಿದೆ. ಅದರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ನೀಡಲಾಗಿರುವ 200 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್ ಆಗಿದೆ. ಅದರ ಶಂಕುಸ್ಥಾಪನೆಗೆ ಇಂದು ಇಲ್ಲಿಗೆ ಬಂದಿದ್ದೇನೆ. ಸರ್ವೇಜನ ಸುಖಿನೋಭವಂತು ಎಂಬ ಸಂಕಲ್ಪದೊಂದಿಗೆ 2600 ಕೋಟಿ ನೀಡಲಾಗಿದೆ ಎಂದರು. 

Central government responsible for electricity price hike - Bhairati Suresh

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close