ಜೂನ್ ಮೊದಲನೇ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣ-ನಂಜನಯ್ಯ ಮಠ- Night landing to be completed in the first week of June - Nanjanaiah Math

SUDDILIVE || SHIVAMOGGA

ಜೂನ್ ಮೊದಲನೇ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣ-ನಂಜನಯ್ಯ ಮಠ-  Night landing to be completed in the first week of June - Nanjanaiah Math  

Night, Landing

ಜೂನ್ ತಿಂಗಳ ಮೊದಲನೇ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಇದಾದ ಮೇಲೆ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದವರು ಬಂದು ಉಳಿದ ನೈಟ್ ಲ್ಯಾಂಡಿಂಗ್ ಕಾಮಗಾರಿ ನಡೆಸಲಿದ್ದಾರೆ. 

ನೈಟ್ ಲ್ಯಾಂಡಿಂಗ್ ಕಾಮಗಾರಿಯ ಬೇಸಮೆಂಟ್ ವರ್ಕ್ ಈಗ ಆರಂಭಗೊಂಡು 1 ತಿಂಗಳು 10 ದಿನ ಮುಗಿದಿದೆ. ಇದರ ವೀಕ್ಷಣೆಗೆ  ಇಂದು ನಗರಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (KSIIDC) ಅಧ್ಯಕ್ಷರಾದ ನಂಜನಯ್ಯ ಮಠ್ ಶಿವಮೊಗ್ಗ ಏರ್ ಪೋರ್ಟ್ ಗೆ ಭೇಟಿ ನೀಡಿ ಕಾಮಗಾರಿಯ ವೀಕ್ಷಿಸಿದ್ದಾರೆ.   ಈ ತಿಂಗಳ ಮೊದಲನೇ ವಾರದಲ್ಲಿಯೇ 7 ಮತ್ತು 8 ತಾರೀಖಿನಂದು ಮತ್ತೊಮ್ಮೆ ಆಗಮಿಸಲಿದ್ದು ಅದರೊಳಗಾಗಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಸಂಪೂರ್ಣಗೊಳಿಸಬೇಕೆಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ. 

ಆದರೆ ಅಧಿಕಾರಿಗಳು ಜೂನ್ ತಿಂಗಳ ಮೊದಲನೇ ವಾರದಲ್ಲಿ ನೈಟ್ ಲೈಟಿಂಗ್ ಬೇಸ್ ಮೆಂಟ್  ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದರು. ನಿನ್ನೆಯಿಂದ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿದೆ. ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಮತ್ತು ಇಂಡಿಗೋ ಹಾರಾಟ ಸ್ಥಗಿತಕ್ಲೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. 

ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಸಂಪೂರ್ಣ ರಾಜ್ಯ ಸರ್ಕಾರವೇ ಹಣವನ್ನು ನೀಡಿದ್ದು, ಇಂಡಿಗೋ ವಿಮಾನವು ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್ ಗಳ ಕೊರತೆಯಿಂದ ಹಾರಾಟವನ್ನ ನಿಲ್ಲಿಸಿರುತ್ತದೆ ಎಂದು ನಂಜನಯ್ಯ ಮಠ ಸ್ಪಷ್ಟಪಡಿಸಿದರು. 

ಶಿವಮೊಗ್ಗ ನಗರದಲ್ಲಿ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೆಚ್ ಸಿ ಯೋಗೇಶ್ ಅವರು ಹಲವು ಬಾರಿ ಮನವಿಯನ್ನು ನೀಡಿದ್ದರು. ಇದರ ಸಂಬಂಧ ನೈಟ್ ಲ್ಯಾಂಡಿಂಗ್ ಚಾಲನೆಗೆ ಇಂಡಿಗೋ ವಿಮಾನ ಸಂಸ್ಥೆ ಹಾಗೂ ಇನ್ನುಳಿದ ಅನೇಕ ವಿಮಾನ ಸಂಸ್ಥೆಗಳೊಂದಿಗೆ ಚರ್ಚಿಸಿ ಶಿವಮೊಗ್ಗ ನಗರಕ್ಕೆ ವಿಮಾನದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದಾಗಿ ನಂಜನಯ್ಯ ಮಠ್ ರವರು ತಿಳಿಸಿದರು.

Night landing to be completed in the first week of June - Nanjanaiah Math 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close