SUDDILIVE || BHADRAVATHI
ಬಾರಂದೂರಿನಲ್ಲಿ ನಡೆದ ರೇಪ್ ಪ್ರಕರಣ-Rape case in Barandur
ಭದ್ರಾವತಿಯ ಬಾರಂದೂರಿನಲ್ಲಿ ವಕೀಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ 23 ವರ್ಷದ ವಿವಾಹಿತ ಮಹಿಳೆಯನ್ನ ಪರಿಚಯಿಸಿಕೊಂಡು ಲೈಂಗಿಕ ಕಿರುಕುಳ ಮತ್ತು ರೇಪ್ ಮಾಡಿರುವ ಘಟನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾರಂದೂರಿನಲ್ಲೇ ವಿವಾಹಿತ ಮಹಿಳೆಯೊಬ್ಬಳಿಗೆ ವಕೀಲನೆಂದುಕೊಂಡು ಅದೇ ಗ್ರಾಮದ ಹಳೇ ಬಾರಂದೂರಿನ ವ್ಯಕ್ತಿ ಪರಿಚಯವಾಗಿಕೊಂಡು ಮೆಸೇಜ್ ಗಳನ್ನ ಮಾಡುತ್ತಿದ್ದ. ಮೆಸೇಜ್ ಗೆ ಮಹಿಳೆ ನೀವು ಯಾರೆಂದೇ ನೋಡಿಲ್ಲ ಪರಿಚಯವಾಗೋದು ಹೇಗೆ ಸ್ನೇಹ ಮಾಡೋದು ಹೇಗೆ ಎಂದು ಉತ್ತರಿಸಿದ್ದಾರೆ.
ಬಾರಂದೂರಿನಲ್ಲಿ ವಿವಾಹಿತ ಮಹಿಳೆ ಮನೆಯ ಬಳಿಯಲ್ಲೇ ದಿನಸಿ ಅಂಗಡಿ ನಡೆಸುತ್ತಿದ್ದು, ನಿನ್ನ ಗಂಡನಿಗೆ ನಾನು ಪರಿಚಯ ನಾಳೆ ಅಂಗಡಿಗೆ ಬರುವುದಾಗಿ ಹೇಳಿದ್ದಾನೆ. ಮರುದಿನ 500 ರೂ. ಚಿಲ್ಲರೆ ಪಡೆಯುವ ನೆಪದಲ್ಲಿ ವಕೀಲರು ಅಂಗಡಿಗೆ ಹೋಗಿ ನಾನು ವಕೀಲ ಎಂದು ಪರಿಚಯಿಸಿಕೊಂಡು ಇನ್ ಸ್ಟಾಗ್ರಾಮ್ ಸ್ನೇಹಿತ ಎಂದು ಹೇಳಿದ್ದಾನೆ.
ಇದಾದ ನಂತರ ಇನ್ ಸ್ಟಾ ಗ್ರಾಮ್ ನಲ್ಲಿ ವಕೀಲನ ಮೆಸೇಜ್ ಮುಂದು ವರೆಸಿದ್ದು, ಪ್ರತಿಕ್ರಿಯಸದೆ ಇದ್ದಿದ್ದಕ್ಕೆ ಸ್ನೇಹ ದಿಂದ ಮೆಸೇಜ್ ಮಾಡಿದ್ದು ಎಂದು ಸಮ್ಜಾಯಿಸಿ ನೀಡಿದ್ದಾನೆ. ಮಹಿಳೆ ಕಳೆದ ತಿಂಗಳು ಏ.11 ರಂದು ಮದ್ಯಾಹ್ನ ಮನೆಯಲ್ಲಿದ್ದಾಗ ಪತಿ ಕರೆ ಮಾಡಿ ವಕೀಲ ಮನೆಗೆ ಬರುತ್ತಾನೆ 20 ಸಾವಿರ ಹಣ ಕೊಡು ಎಂದು ಹೇಳಿದ್ದಾರೆ. ಹಣ ಪಡೆಯುವ ನೆಪದಲ್ಲಿ ಮನೆಗೆ ಬಂದ ವಕೀಲ ಮಹಿಳೆಯನ್ನ ಬಲತ್ಕಾರದಿಂದ ಲೈಂಗಿಕ ಸಂಭೋಗಿಸಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಪತಿಗೆ ಹೇಳಲು ಮುಜುಗರ ಪಟ್ಟ ಮಹಿಳೆ ಅಂಗಡಿಗೆ ಬರುತ್ತಿದ್ದ ವಕೀಲರನ್ನ ದೂರ ಮಾಡಿದ್ದಕ್ಕೆ ವಕೀಲರು ಸಿಡಿಮಿಡಿಗೊಂಡಿದ್ದಾರೆ. ಯಾವಾಗ ಮಹಿಳೆಯ ಮೊಬೈಲ್ ನ್ನ ಪರಿಶೀಲಿಸುತ್ತಿದ್ದ ಪತಿ ವಕೀಲರ ಐಡಿಯನ್ನ ಬ್ಲಾಕ್ ಮಾಡಿದ್ದನ್ನ ಗಮನಿಸಿ ಪತ್ನಿಯನ್ನ ವಿಚಾರಿಸಿದ್ದಾರೆ. ಪತ್ನಿ ನಡೆದ ಘಟನೆ ವಿವರಿಸಿದ್ದಾರೆ.
ನಂತರ ವಾಟ್ಸಪ್ ನಲ್ಲಿ ವಕೀಲರಿಗೆ ಪತಿಯೇ ಮೆಸೇಜ್ ಮಾಡಿದಾಗ ವಕೀಲರ ವಾಟ್ಸ್ ಪ್ ನೋಡಿ ಬೇಸರಗೊಂಡು ಭರತ್ ಬಳಿ ಹೋಗಿ ಜಗಳವಾಡಿದ್ದಾರೆ. ನಡೆದ ಘಟನೆಯನ್ನ ಗ್ರಾಮದವರಿಗೆ ಹೇಳಿ ಮಾನಮರ್ಯಾದೆ ಕಳೆಯುವುದಾಗಿ ಹೇಳಿದ್ದರಿಂದ ಕುಟುಂಬದವರ ಜೊತೆ ಮಾತನಾಡಿ ಪೇಪರ್ ಟೌನ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
Rape case in Barandur

