SUDDILIVE || SHIVAMOGGA
ಬಜರಂಗ ದಳದ ಕರೆಗೆ ಎಸ್ ಡಿಪಿಐ ಕಿಡಿ- SDPI responds to Bajrang Dal's call
ಶಾಲಾ ಕಾಲೇಜುಗಳ ಆರಂಭದ ದಿನದಂದೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಶಾಲು ಹಾಕಿಕೊಂಡು ಬರುವಂತೆ ಕರೆ ನೀಡಿರುವ ಬಜರಂಗದಳದ ವಿರುದ್ಧ ಜಿಲ್ಲಾ ಎಸ್ ಡಿಪಿಐ ಕಿಡಿಕಾರಿದೆ. ಶಾಲಾ ಕಾಲೇಜುಗಳಲ್ಲಿ ಕೋಮು ವಿಷಬೀಜ ಹಾಕಿ ವಿದ್ಯಾರ್ಥಿಗಳ ಮಧ್ಯೆ ದ್ವೇಷ ಹುಟ್ಟಿಸುವ ಹುನ್ನಾರದ ವಿರುದ್ಧ ಪೊಲೀಸರು ಕ್ರಮ ಜರುಗಿಸುವಂತೆ ಜಿಲ್ಲಾಧ್ಯಕ್ಷ ಜಿಲಾನ್ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ ಮುಸ್ಲಿಂ ಎಂದು ದ್ವೇಷ ಹುಟ್ಟಿಸಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವ ಭಜರಂಗದಳದ ಸಂಘಟನೆಗೆ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಿ ಪಾಠಕಲಿಸಲೇ ಬೇಕಾಗಿದೆ.
ಏಕೆಂದರೆ ಕಳೆದ ಮೂರು ವರ್ಷಗಳ ಹಿಂದೆ “ಹಿಜಾಬ್” ಎಂಬ ಹೆಸರಿನಲ್ಲಿ ದ್ವೇಷ ಹುಟ್ಟಿಸಿ ಕೆಲ ಪುಂಡರನ್ನ ವಿದ್ಯಾರ್ಥಿಗಳ ವೇಶ ಹಾಕಿಸಿ ಶಾಲಾ ಕಾಲೇಜುಗಳ ಕ್ಯಾಂಪಸ್ಸಿನಲ್ಲಿ ಕಳುಹಿಸಿ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿಸಿ, ಭಯ ಹುಟ್ಟಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲೇಜ್ ಕ್ಯಾಂಪಸ್ ಒಳಗಡೆ ನುಗ್ಗಿ ದಾಂಧಲೆ ಎಬ್ಬಿಸಿದ ಕೋಮುವಾದಿ ಸಂಘಟನೆ ವಿರುದ್ಧ ಕ್ರಮ ಜರುಗಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.
ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ದೇಶದ್ರೋಹದ ಘಟನೆ ಕೂಡ ವರದಿಯಾಗಿತ್ತು.ಈ ಕೋಮುವಾದಿ ಸಂಘಟನೆಗಳು ಹಿಂದೂ ಮುಸ್ಲಿಂ ಏಕತೆ ಸೌಹಾರ್ದತೆ ಸಹಿಸುವುದಿಲ್ಲ. ಬದಲಾಗಿ ಇವರ ಮಧ್ಯೆ ಧರ್ಮದ ಹೆಸರಿನಲ್ಲಿ ದ್ವೇಷ ಹರಡಿಸಿ ಶಿವಮೊಗ್ಗದಲ್ಲಿ ಅಶಾಂತಿ ಮತ್ತು ಗಲಭೆ ಸೃಷ್ಟಿಸುವ ವ್ಯವಸ್ಥಿತ ಹುನ್ನಾರಕ್ಕೆ ಬಹಿರಂಗ ಕರೆ ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕೆಂದು SDPI ಮನವಿ ಮಾಡಿದೆ.
