SUDDILIVE || SHIVAMOGGA
ಉಪವಿಭಾಗಾಧಿಕಾರಿ ಕರ್ತವ್ಯದ ವಿರುದ್ಧವೇ ಹಿಂಜಾವೇ ದೂರು-The complaint is against the duty of the Sub-Divisional Officer
ಭದ್ರಾವತಿ ಮತ್ತು ಶಿವಮೊಗ್ಗ ತಾಲೂಕಿನ ವ್ಯಾಪ್ತಿಯಲ್ಲಿ ಗೋ ಹತ್ಯೆ ನಡೆದಿರುವ ಸ್ಥಳಗಳ ಮೇಲೆ ಕಾನೂನು ಕ್ರಮ ಜರುಗಿಸದೆ ಉಪ ವಿಭಾಗ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು ಅವರನ್ನ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸತತ ಎರಡು ವರ್ಷದಿಂದ ಗೋ ಹತ್ಯೆ ನಿಲ್ಲಿಸುವಂತೆ ಹಲವಾರು ಬಾರಿ ತಮಗೆ ಮತ್ತು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಗೋ ಹತ್ಯೆ ವಿಚಾರವಾಗಿ ಪೊಲೀಸರಿಗೆ ಮಾಹಿತಿಯನ್ನು ಸಹ ನೀಡುತ್ತಾ ಬಂದಿದ್ದು. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು 200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಭದ್ರಾವತಿ ನಗರದ ಬೊಮ್ಮನಕಟ್ಟೆ ಮತ್ತು ಅನ್ವರ್ ಕಾಲೋನಿಯಲ್ಲಿ ಹಾಗೂ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಲಿಮಿಟ್ ಮತ್ತು ತುಂಗಾನಗರ ಪೊಲೀಸ್ ಠಾಣೆಯ ಲಿಮಿಟ್ ನಲ್ಲಿ ಅಕ್ರಮ ಗೋವಿನ ಕಸಾಯಿ ಖಾನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣವನ್ನು ದಾಖಲಿಸಿರುವ ಸ್ಥಳಗಳಲ್ಲಿ ಮತ್ತೆ ಮತ್ತೆ ಅಕ್ರಮ ಗೋವಿನ ಕಸಾಯಿ ಖಾನೆಗಳು ನಡೆಯುತ್ತಿದ್ದು. ಆನಂತರವು ಸಹ ಪೊಲೀಸರು ಎರಡು ಬಾರಿ ಮೂರು ಬಾರಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸುಮಾರು ಎರಡು ಅಥವಾ ಮೂರು ಬಾರಿ ಪ್ರಕರಣಗಳು ದಾಖಲಾದರೂ ಸಹ ಪ್ರಕರಣಗಳು ದಾಖಲಾದ ಸ್ಥಳ (ಸ್ವತ್ತು) ಗಳ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020 ರಲ್ಲಿ ಇರುವಂತೆ.
(3) (1)ನೇ ಉಪ-ಪ್ರಕರಣದ ಅಡಿಯಲ್ಲಿ ದಾಳಿ ಮಾಡಿದ ನಂತರ, ಮುಟ್ಟುಗೋಲು ಹಾಕಲು ಉಪ-ವಿಭಾಗೀಯ ದಂಡಾಧಿಕಾರಿಗಳ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಂಘಟನೆ ಮನವಿಯಲ್ಲಿ ದೂರಿದೆ.
The complaint is against the duty of the Sub-Divisional Officer

