SUDDILIVE || SHIVAMOGGA|| THIRTHAHALLI
ಎರಡು ಪ್ರತ್ಯೇಕ ರಸ್ತೆ ಅಪಘಾತ-ಇಬ್ವರು ಸಾವು-Two separate road accidents - two dead
ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದ್ದು ಐದುವರ್ಷದ ಮಗುವೊಂದು ಸೇರಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಒಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಾವಳ್ಳಿಯ ಬಳಿ ಸಂಭವಿಸಿದರೆ
ಮತ್ತೊಂದು ತೀರ್ಥಹಳ್ಳಿಯ ಕೋಣಂದೂರಿನ ಬಳಿ ಸಂಭವಿಸಿದೆ.
ತೀರ್ಥಹಳ್ಳಿಯ ಹಣಗೆರೆಕಟ್ಟೆಯಿಂದ ಪಿರನ್ ಗುಡ್ಡದ ದರ್ಗಕ್ಕೆ ತೆರಳುತ್ತಿದ್ದ ಕ್ಯಾಂಟರ್ ವೊಂದು ಕೋಣಂದೂರಿನ ಹುಲ್ಲತ್ತಿ ಗ್ರಾಮದ ಬಳಿ ಲಾರಿ ಚಾಲಕನ ನಿಯಂತ್ರ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯ ಪರಿಣಾಮ ಮೊಹಮದ್ ಸಾಕಿಬ್ (5) ಮಗು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಅಪಘಾತದಲ್ಲಿ 35 ಜನ ಗಾಯಗೊಂಡಿದ್ದು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರೆಲ್ಲ ಹರಿಹರದ ನಿವಾಸಿಗಳಾಗಿದ್ದಾರೆ.
ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾವಳ್ಳಿ ಸಮೀಪ ಇಟ್ಟಿಗೆ ತುಂಬಿದ್ದ ಬೊಲೆರೋ ವಾಹನದ ಟೈರ್ ಸ್ಫೋಟಗೊಂಡು ಸಂಭವಿಸಿದ ಸರಣಿ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಮೊಗ್ಗ ನಗರದ ಬಾಲಾಜಿ ಲೇಔಟ್ ನಿವಾಸಿ ಸಂಪತ್ ಕುಮಾರ್ ಎಸ್. (33) ಮೃತ ದುರ್ದೈವಿ. ಇವರು ಶಿವಮೊಗ್ಗದ ಜೆಎನ್ ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಜಾವಳ್ಳಿ ಬಳಿ ಇಟ್ಟಿಗೆ ಲೋಡ್ ತುಂಬಿಕೊಂಡು ಚಲಿಸುತ್ತಿದ್ದ ಬೊಲೆರೋ ವಾಹನದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನವು ಮೊದಲು ಸಂಪತ್ ಕುಮಾರ್ ಅವರ ಬುಲೆಟ್ ಬೈಕ್‌ಗೆ ಡಿಕ್ಕಿಯಾಗಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸಂಪತ್ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಬೈಕ್ ಹಾಗೂ ಕಾರಿನಲ್ಲಿದ್ದ ಐದಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]() |
| ಜಾವಳ್ಳಿಯ ಬಳಿ ನಡೆದ ಅಪಘಾತ |



