SUDDILIVE || SHIVAMOGGA
ಆಗುಂಬೆ ಪೊಲೀಸ್ ಠಾಣೆ ಪೊಲೀಸರಿಂದ ಮೊಬೈಲ್ ಕಳ್ಳತನ ಪ್ರಕರಣ ಭೇದನ; ಇಬ್ಬರು ಆರೋಪಿಗಳ ಬಂಧನ-Agumbe Police Station police crack mobile phone theft case; two accused arrested
ಶಿವಮೊಗ್ಗ, ಜೂನ್ 5: ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲರಾಜ್ ಹಾಗೂ ಹರ್ಷ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇಗರವಳ್ಳಿ ಗ್ರಾಮದ ಅಣ್ಣುವಳ್ಳಿ ಸಮೀಪದ ಫಾರಂ ಹೌಸ್‌ನಲ್ಲಿ ಕಾರ್ಮಿಕರು ಮಲಗಿದ್ದ ವೇಳೆ ದುಷ್ಕರ್ಮಿಗಳು ಕೊಠಡಿಯ ಕಿಟಕಿಯ ಮೂಲಕ ಒಳನುಗ್ಗಿ ಮೊಬೈಲ್‌ಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗುಂಬೆ ಪೊಲೀಸರು ಆರೋಪಿಗಳಾದ ಬಾಲರಾಜ್ ಮತ್ತು ಹರ್ಷ ಅವರನ್ನು ಬಂಧಿಸಿ, ಅವರಿಂದ ಕಳುವಾಗಿದ್ದ 7 ಮೊಬೈಲ್ ಫೋನ್‌ಗಳು ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹1,71,000 ಆಗಿದೆ.
ಆಗುಂಬೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

