ಅಂಬು ಜಸ್ಟ್ ಮಿಸ್ ಮಧು ಫಿಕ್ಸ್..?Ambu just Miss Madhu fixed..?

SUDDILIVE || SHIVAMOGGA

ಅಂಬು ಜಸ್ಟ್ ಮಿಸ್ ಮಧು ಫಿಕ್ಸ್..?Ambu just Miss Madhu fixed..?     

Ambu, Madhu

ನರಸಿಂಹ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಂಬು ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಘಟನೆ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಪ್ರಕರಣದ ತನಿಖೆ ಹಾಗೂ ಆರೋಪಿಗಳ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮಗಳ ನಡುವೆ ಅಂಬುವಿನ ಆರೋಗ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯ ಊಹಾಪೋಹಗಳು ಕೇಳಿಬರುತ್ತಿವೆ.

ಮಾಹಿತಿ ಪ್ರಕಾರ, ಅಂಬುವನ್ನು ಶುಕ್ರವಾರ ಸಂಜೆ ಆರೋಗ್ಯ ತಪಾಸಣೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಮೂಲಗಳ ಪ್ರಕಾರ, ಲೋ ಬ್ಲಡ್ ಪ್ರೆಶರ್ (ಲೋ ಬಿಪಿ) ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಈ ಬೆಳವಣಿಗೆಯ ಹಿಂದೆ ಭಯ ಅಥವಾ ಮಾನಸಿಕ ಒತ್ತಡ ಕಾರಣವಾಗಿರಬಹುದೇ ಎಂಬ ಚರ್ಚೆಯೂ ಜೋರಾಗಿದೆ.

ಅಂಬು ಮತ್ತು ಆತನ ತಂಡ ಹಲವು ಅಪರಾಧ ಪ್ರಕರಣಗಳಲ್ಲಿ ಹೆಸರು ಮಾಡಿರುವ ಕಾರಣ, ಪೊಲೀಸರ ಮುಂದಿನ ಕ್ರಮಗಳ ಬಗ್ಗೆ ಆತ ಮುಂಚಿತವಾಗಿಯೇ ಅಂದಾಜು ಮಾಡಿಕೊಂಡಿರಬಹುದು ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಆತಂಕದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಅಂಬುವಿನ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಪೊಲೀಸ್ ಇಲಾಖೆ ಅಥವಾ ವೈದ್ಯಕೀಯ ವಲಯದಿಂದ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಈ ಕುರಿತು ಹರಿದಾಡುತ್ತಿರುವ ಮಾಹಿತಿಗಳು ಕೇವಲ ಊಹಾಪೋಹಗಳಾಗಿದ್ದು, ಅಧಿಕೃತ ಸ್ಪಷ್ಟನೆಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.

ಇದರ ಬೆನ್ನಲ್ಲೇ ಮಧು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲಿಗೆ ಗುಂಡು ಬಿದ್ದಿದೆ. ಆ ಗುಂಡು ಅಂಬುಗೆ ಬೀಳಬೇಕಿತ್ತಾ? ಅಥವಾ ಅಂಬುವನ್ನ ನೋಡಿ ಮಧು ಎಸ್ಕೇಪ್ ಗೆ ಯತ್ನಿಸಿದ್ನಾ ಎಂಬುದು ಅನುಮಾನ ಹೆಚ್ಚಿಸಿದೆ. 

Ambu just Miss Madhu fixed..?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close