6 ತಿಂಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಕಾರ್ಯಾಚರಣಯಲ್ಲಿ ಪತ್ತೆಯಾದ ಗಾಂಜಾ ಮತ್ತು ಜಾಗೃತಿ ಕಾರ್ಯಕ್ರಮ ಹೇಗೆ ನಡೀದಿದೆ ಗೊತ್ತಾ? Do you know how the marijuana found in the district's marijuana operations and awareness program has been going on in the past 6 months?

SUDDILIVE || SHIVAMOGGA

6 ತಿಂಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಕಾರ್ಯಾಚರಣಯಲ್ಲಿ ಪತ್ತೆಯಾದ ಗಾಂಜಾ ಮತ್ತು ಜಾಗೃತಿ ಕಾರ್ಯಕ್ರಮ ಹೇಗೆ ನಡೀದಿದೆ ಗೊತ್ತಾ?  Do you know how the marijuana found in the district's marijuana operations and awareness program has been going on in the past 6 months?   

Marijuana, police

ಶಿವಮೊಗ್ಗ ಜಿಲ್ಲಾ ಪೊಲೀಸ್  ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಿದ್ದು- 24.55 ಲಕ್ಷ ರೂ ಮೌಲ್ಯದ ಗಾಂಜಾ ಪತ್ತೆಯಾಗಿದ್ದು ಅದರ ನಾಶಕ್ಕೆ ಸಿದ್ಧತೆ ನಡೆದಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ನಿಖಿಲ್.ಬಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಾದ್ಯಂತ ಅಮಾನತ್ತುಪಡಿಸಿಕೊಂಡಿರುವ ಮಾದಕ ವಸ್ತುಗಳ ನಾಶ ಹಾಗೂ ಅರಿವು ಕಾರ್ಯಕ್ರಮಗಳು ಜೋರಾಗಿ ನಡೆದಿದೆ ಎಂದರು. 

1. ವಶಕ್ಕೆ ಪಡೆದ ಗಾಂಜಾ ನಾಶ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಮಾನತ್ತುಪಡಿಸಿಕೊಂಡಿರುವ ಒಟ್ಟು 24,55,640/- ರೂ ಮೌಲ್ಯದ 59 ಕೆಜಿ 119 ಗ್ರಾಂ ಗಾಂಜಾವನ್ನು 27-06-2026 ರಂದು M/s Shushruta Bio-Medical Waste Management Society ಯ Common Bio-Medical Waste Treatment and Disposal Facility ನಲ್ಲಿ ನಾಶ ಮಾಡಲಾಗುತ್ತದೆ. ಇನ್ನೂ 16 ಕೆಜಿ ಗಾಂಜಾ ನ್ಯಾಯಾಲಯದ ಅನುಮತಿಗಾಗಿ ಬಾಕಿ ಇದೆ.2. ಜನವರಿ 1 ರಿಂದ ಜೂನ್ 26 ರವರೆಗಿನ ಕಾರ್ಯಾಚರಣೆ ಅಂಕಿ-ಅಂಶ ಹೀಗಿದೆ ಎಂದು ವಿವರಿಸಿದರು. 

1 ಗಾಂಜಾ ಅಮಾನತ್ತು ಪ್ರಕರಣಗಳು ಜನವರಿಯಿಂದ ಜೂನ್ ವರೆಗೆ 27 ಪ್ರಕರಣಗಳು ದಾಖಲಾಗಿದ್ದು, 04 ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 

2 ಅಮಾನತ್ತು ಪ್ರಕರಣಗಳ ಆರೋಪಿಗಳು 58 ಪ್ರಕರಣಗಳು ದಾಖಲಾಗಿವೆ. 06 ವಿಸೇಷ ಕಾರ್ಯಚರಣೆಯಾಗಿದೆ. 

3 ಗಾಂಜಾ ಸೇವನೆ ಪರೀಕ್ಷೆಗೆ ಒಳಪಟ್ಟ ಅನಾಮಿಗರ ಸಂಖ್ಯೆ 1222 ಪ್ರಕರಣ ಜನವರಿಯಿಂದ ಜೂನ್ ವರೆಗೆ ನಡೆದಿದ್ದು,  204 ಪ್ರಕರಣ ದಾಖಲಾಗಿದೆ. 

4 ಗಾಂಜಾ ಸೇವನೆ ದೃಢಪಟ್ಟವರ ಸಂಖ್ಯೆ 374 ಜನವರಿಯಿಂದ ಜೂನ್ ವರೆಗೆ ದಾಖಲಾಗಿದ್ದು,  11 ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 

5. ವಾಹನಗಳ ಮೂಲಕ ಗಾಂಜಾ ಸಾಗಣೆ ಪ್ರಕರಣಗಳು 341 ಇದುವರೆಗೂ ದಾಖಲಾಗಿದ್ದು,  8 ವಿಶೇಷ ಕಾರ್ಯಾಚರಣೆ ನಡೆದಿದೆ. 

6. ಆಪ್ತ ಸಮಾಲೋಚನೆಗೆಕಳುಹಿಸಿದ ಸಂಖ್ಯೆ 141 ಪ್ರಕರಣಗಳು ದಾಖಲಗಿದ್ದು,  11 ವಿಶೇಷ ಕಾರ್ಯಾಚರಣೆ ನಡೆದಿದೆ. 

7. ಕೈಗೊಂಡ ಏರಿಯಾ ಡಾಮಿನೇಷನ್ ಕಾರ್ಯಾಚರಣೆಗಳು 660 ಪ್ರಕರಣಗಳು ದಾಖಲಾಗಿದೆ.  116 ಇದುವರೆಗೂ ದಾಖಲಾಗಿವೆ. 

8. ಕಾರ್ಯಾಚರಣೆಯಲ್ಲಿ ಪತ್ತೆಯಾದ ಗಾಂಜಾ ಸೇವನೆ ಆರೋಪಿತರು 103 ಪ್ರಕರಣಗಳು ದಾಖಲಾಗಿದ್ದರೆ  13ಜನರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 

9. ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸಿದ ಅರಿವು ಕಾರ್ಯಕ್ರಮಗಳು 310 ಕಾರ್ಯಕ್ರಮಗಳು ದಾಖಲಾಗಿತ್ತು.  86 ವಿಶೇಷ ಕಾರ್ಯಾಚರಣೆ ದಾಖಲಾಗಿವೆ. 

10. ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ 18940 ವಿಶೇಷ ಕಾರ್ಯಕ್ರಮಗಳು ಭಾಗವಹಿಸಿದ್ದರು.  6887 ಜಬರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 

11. ಕಾರ್ಯಗತಗೊಂಡ ಎನ್.ಡಿ.ಪಿ.ಎಸ್ ವಾರಂಟ್ ಗಳ ಸಂಖ್ಯೆ 85 ಪ್ರಕರಣಗಳು ದಾಖಲಾಗಿದ್ದು,  17 ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 

12 ಇತರ ಸಾರ್ವಜನಿಕ ಅರಿವು ಕಾರ್ಯಕ್ರಮಗಳು 207 ಜನರು ಭಾಗಿಯಾಗಿದ್ದು,  61 ಜನರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 

13 ಮಾದಕದ್ರವ್ಯ ವಿರೋಧಿ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರ ಸಂಖ್ಯೆ 2765 ಜನ ಭಾಗಿಯಾಗಿದ್ದರು. 1465 ವಿಶೇಷ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಎಸ್ಪಿ ನಿಖಿಲ್.ಬಿ ಅವರು ಸುದ್ದಿಗೋಷ್ಠಿಯಲ್ಲಿ  ಗಾಂಜಾ 17 ರಿಂದ 25 ವರ್ಷದ ಯುವಕರು ಹೆಚ್ಚು ಸೇವಿಸುತ್ತಾರೆ. ಕೂಲಿ ಕಾರ್ಮಿಕರು ಹೆಚ್ಚಾಗಿದೆ. ಕೋಟೆ ಸ್ಟೇಷನ್ ನಲ್ಲಿ 100 ಎಂ ಎ ಡಿಎಂಎ ದೂರಾಗಿದೆ. 

3. ಡ್ರೋನ್ ಕಣ್ಗಾವಲು: ಜಿಲ್ಲೆಯಾದ್ಯಂತ ಡ್ರೋನ್ ಕ್ಯಾಮೆರಾ ಬಳಸಿ ಕೃಷಿಭೂಮಿ, ದೂರದ ಪ್ರದೇಶಗಳು, ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ ಎಂದರು. 

ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಸೇವನೆ ಕಿಟ್ ನಿಂದ ಪರೀಕ್ಷೆ

ಯುವ ಜನತೆ ಹೆಚ್ಚಿರುವ 21 ಕಾಲೇಜುಗಳಲ್ಲಿ 484 ವಿದ್ಯಾರ್ಥಿಗಳಿಗೆ ಗಾಂಜಾ ಸೇವನೆ ಪರೀಕ್ಷೆ ನಡೆಸಲಾಯಿತು. ಅದರಲ್ಲಿ 03 ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರಿಗೆ ಕೌನ್ಸೆಲಿಂಗ್ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ತಾಂತ್ರಿಕ ಅಭಿಯಾನಗಳು:•

ಕೆಪಿಎಸ್ ಸಿ ಅಪ್ಲಿಕೇಷನ್ ನಲ್ಲಿನ Drug Free Karnataka ಬಗ್ಗೆ ಜಾಗೃತಿ ಮೂಡಿಸಿದೆ. ರಾಷ್ಟ್ರೀಯ ಮಾದಕ ವಸ್ತು ಮಾಹಿತಿಗೆ 1908 ಸಹಾಯವಾಣಿ ಬಳಲು ಜಾಗೃತಿ •ರಾಷ್ಟ್ರೀಯ ಮಾನಸ್ ಸಹಾಯವಾಣಿ ಸಂಖ್ಯೆ 1933 ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 

ಮುಕ್ತದೂರು ವ್ಯವಸ್ಥೆ

Public Eye ಆ್ಯಪ್: ಸಾರ್ವಜನಿಕರು ಮಾದಕ ವಸ್ತು ಮಾರಾಟದ ಬಗ್ಗೆ ಮಾಹಿತಿ ನೀಡಲು 8277982900 ಸಂಖ್ಯೆ ನೀಡಲಾಗಿದೆ. ಮಾಹಿತಿ ನೀಡಿದವರಿಗೆ 21 ದಿನದಲ್ಲಿ ದೂರು ನೀಡಲಾಗುತ್ತದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿರುತ್ತದೆ.

ಔಷಧಿ ಅಂಡಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಣೆ

ನಿಗದಿತ ಔಷಧಗಳ ಮಾರಾಟದ ಬಗ್ಗೆ ಪರಿಶೀಲಿಸಿ ಸರಬರಾಜು ಕಂಡು ಬಂದಲ್ಲಿ ಔಷಧ ಅಂಗಡಿಗಳ ಲೈಸೆನ್ಸ್, ರದ್ದುಪಡಿಸಲು  ಸೂಚಿಸಲಾಗಿದೆ. ಔಷಧ ಅಂಗಡಿಗಳಲ್ಲಿ ವೈದ್ಯಾಧಿಕಾರಿಗಳ ಚೀಟಿ ಇಲ್ಲದೆ ಯಾವುದೇ ತರಹದ ನಶೇಭರಿಸುವ ಔಷಧ ನೀಡದಂತೆ ನೋಡಿಕೊಳ್ಳಲು ಸೂಚಿಸಿದಲಾಗಿದೆ. ಈ ಬಗ್ಗೆ ಬೋರ್ಡ್ ನ್ನ ಅಳವಡಿಸುವಂತೆ ಸೂಚಿಸಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ. 

ಮಾದಕ ವಸ್ತು ವಿರೋಧಿ ಸಮಿತಿ ರಚಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಆಂಟಿ ಡ್ರಗ್ ಕಮಿಟಿ ರಚಿಸಲಾಗಿದೆ. ದೂರು ಪೆಟ್ಟಿಗೆ ಅಳವಡಿಕೆ, ಮಾಹಿತಿ ದಾರರಿಗೆ ಪ್ರೋತ್ಸಾಹ, ಮಾಹಿತಿದಾರರ ಗೌಪತ್ಯ ಕಾಪಾಡುವ ಬಗ್ಗೆ ಭರವಸೆ, ಮಾಹಿತಿ ಆಧಾರದ ಮೇರೆಗೆ ಕಟ್ಟುನಿಟ್ಟಿನ ಕ್ರಮ

ಅರಿವು ಕಾರ್ಯಕ್ರಮಗಳು: 

ಶಾಲಾ ಕಾಲೇಜುಗಳು, ಬಸ್ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು, ಬೀಟ್ ವ್ಯಾಪ್ತಿಯಲ್ಲಿ ಅರಿವು ಮೂಡಿಸುವುದು. ಪಾರ್ಕ್, ಬಸ್ ನಿಲ್ದಾಣ ಮತ್ತು ಇತರ ಜನಸಂದಣಿ ಇರುವ ಕಡೆಗಳಲ್ಲಿ ಪ್ರಚಾರ.

Do you know how the marijuana found in the district's marijuana operations and awareness program has been going on in the past 6 months?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close