SUDDILIVE || SHIVAMOGGA
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಮೀಸಲಾತಿ ಉಲ್ಲಂಘನೆ ಆರೋಪ: ಸಮಗ್ರ ತನಿಖೆಗೆ ಆಗ್ರಹ-Dr. A.P.J. Abdul Kalam Residential School accused of violating reservation: Demand for a comprehensive investigation
ಶಿವಮೊಗ್ಗ, ಜೂ.2: ಮೇಲಿನ ಹನಸವಾಡಿಯಲ್ಲಿರುವ ಯಲ್ಲಿ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ದಾಖಲಾತಿ ಹಾಗೂ ಅಲ್ಪಸಂಖ್ಯಾತರ ಮೀಸಲಾತಿ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
ಹಾಗೂ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ.
ದೂರಿನ ಪ್ರಕಾರ, 2023-24, 2024-25 ಹಾಗೂ 2025-26ನೇ ಶೈಕ್ಷಣಿಕ ವರ್ಷಗಳ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ದಾಖಲಾತಿ, ಸಮುದಾಯವಾರು ಸೀಟು ಹಂಚಿಕೆ, ಅಲ್ಪಸಂಖ್ಯಾತರ ಮೀಸಲಾತಿ ಅನುಷ್ಠಾನ, ಆಯ್ಕೆ ಮಾನದಂಡಗಳು ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿವೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ 2025-26ನೇ ಸಾಲಿನ ಪ್ರವೇಶ ಕೈಪಿಡಿಯಂತೆ ವಸತಿ ಶಾಲೆಗಳ ಒಟ್ಟು ಸೀಟುಗಳಲ್ಲಿ ಶೇ.75ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಶೇ.25ರಷ್ಟು ಇತರೆ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಆದರೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲಾತಿ ವಿವರಗಳ ಪ್ರಾಥಮಿಕ ಪರಿಶೀಲನೆಯಲ್ಲಿ 8ನೇ ಹಾಗೂ 10ನೇ ತರಗತಿಗಳ ದಾಖಲಾತಿ ಪಟ್ಟಿಗಳಲ್ಲಿ ಸರ್ಕಾರದ ಮೀಸಲಾತಿ ಮಾರ್ಗಸೂಚಿಗಳ ಅನುಷ್ಠಾನದ ಕುರಿತು ಪ್ರಶ್ನೆಗಳು ಮೂಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇವಲ 8 ಮತ್ತು 10ನೇ ತರಗತಿಗಳಲ್ಲದೆ 6ರಿಂದ 10ನೇ ತರಗತಿವರೆಗಿನ ಎಲ್ಲಾ ದಾಖಲಾತಿ ವಿವರಗಳು, ಪ್ರವೇಶ ಅರ್ಜಿಗಳು, ಆಯ್ಕೆಪಟ್ಟಿಗಳು, ಮೆರಿಟ್ ಪಟ್ಟಿಗಳು, ನಿರೀಕ್ಷಾ ಪಟ್ಟಿಗಳು, ದಾಖಲಾತಿ ರಿಜಿಸ್ಟರ್‌ಗಳು, ಸಮುದಾಯವಾರು ವಿವರಗಳು ಹಾಗೂ ಮೀಸಲಾತಿ ರೋಸ್ಟರ್‌ಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಮುಖ ಬೇಡಿಕೆಗಳು
- ಜಿಲ್ಲಾಧಿಕಾರಿಗಳ ಅಧೀನದಲ್ಲಿ ತ್ರಿಸದಸ್ಯ ಸ್ವತಂತ್ರ ತನಿಖಾ ಸಮಿತಿ ರಚನೆ.
- ಶಾಲೆಯ ಮೂಲ ದಾಖಲಾತಿಗಳು ಹಾಗೂ ಡಿಜಿಟಲ್ ಮಾಹಿತಿಯ ಸಂರಕ್ಷಣೆ ಮತ್ತು ಅಗತ್ಯವಿದ್ದಲ್ಲಿ ವಶಕ್ಕೆ ಪಡೆಯುವುದು.
- 2023-24ರಿಂದ 2025-26ರವರೆಗಿನ ದಾಖಲಾತಿಗಳ ವಿಶೇಷ ಪರಿಶೀಲನೆ.
- 6ರಿಂದ 10ನೇ ತರಗತಿವರೆಗಿನ ಸಮುದಾಯವಾರು, ವರ್ಗವಾರು ಹಾಗೂ ಲಿಂಗವಾರು ದಾಖಲಾತಿಗಳ ಪರಿಶೀಲನೆ.
- 30 ದಿನಗಳೊಳಗೆ ತನಿಖಾ ವರದಿ ಸಲ್ಲಿಕೆ.
- ಅಕ್ರಮ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಹಾಗೂ ಶಿಸ್ತು ಕ್ರಮ.
- ಅಗತ್ಯವಿದ್ದಲ್ಲಿ ಲೋಕಾಯುಕ್ತ, ವಿಜಿಲೆನ್ಸ್ ಅಥವಾ ಇತರೆ ತನಿಖಾ ಸಂಸ್ಥೆಗಳಿಗೆ ಪ್ರಕರಣ ಶಿಫಾರಸು.
- ತನಿಖಾ ವರದಿಯ ಸಾರಾಂಶವನ್ನು ಸಾರ್ವಜನಿಕರಿಗೆ ಪ್ರಕಟಿಸುವುದು.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ರಕ್ಷಣಾ ವೇದಿಕೆ ಹಾಗೂ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಅಧ್ಯಕ್ಷ ಅವರು, "ಸಾರ್ವಜನಿಕ ನಿಧಿಯಿಂದ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕತೆ, ಸಮಾನ ಅವಕಾಶ ಮತ್ತು ಸರ್ಕಾರದ ಮೀಸಲಾತಿ ನೀತಿಯ ಅನುಷ್ಠಾನ ಖಚಿತಪಡಿಸುವುದು ಅತ್ಯಗತ್ಯ. ಈ ಪ್ರಕರಣದ ಸತ್ಯಾಂಶ ಹೊರಬರಲು ಸ್ವತಂತ್ರ ತನಿಖೆ ಅಗತ್ಯವಾಗಿದೆ" ಎಂದು ಹೇಳಿದ್ದಾರೆ.
ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂವಿಧಾನದ ವಿಧಿ 226ರ ಅಡಿಯಲ್ಲಿ , ಸೇರಿದಂತೆ ಇತರೆ ಕಾನೂನು ಪ್ರಾಧಿಕಾರಗಳ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
Dr. A.P.J. Abdul Kalam Residential School accused of violating reservation: Demand for a comprehensive investigation

