SUDDILIVE || HOLEHONNURU
ಜಲ್ ಜೀವನ್ ಮಿಷನ್ ಪೈಪ್ ಕಳ್ಳತನ ಪ್ರಕರಣ ಭೇದಿಸಿದ ಹೊಳೆಹೊನ್ನೂರು ಪೊಲೀಸರು: ₹7.92 ಲಕ್ಷ ಮೌಲ್ಯದ ಪೈಪ್ ವಶಕ್ಕೆ-Holehonnur Police Crack Jal Jeevan Mission Pipe Theft Case
ಶಿವಮೊಗ್ಗ: ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಜಲ್ ಜೀವನ್ ಮಿಷನ್ ಯೋಜನೆಯ ಪೈಪ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿ, ಸುಮಾರು ₹7.92 ಲಕ್ಷ ಮೌಲ್ಯದ 18 ಬಂಡಲ್ ಪೈಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 11ರಂದು ಪೈಪ್‌ಲೈನ್ ಕಾಮಗಾರಿಯ ಇಂಜಿನಿಯರ್ ಅವಿನಾಶ್ ಅವರು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಜಲ್ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ 18 ಬಂಡಲ್ ಪೈಪ್‌ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಜೂನ್ 13ರಂದು ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ನಿವಾಸಿ ರಾಕೇಶ್ (30) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಅಂದಾಜು ₹7,92,000 ಮೌಲ್ಯದ 18 ಬಂಡಲ್ ಜಲ್ ಜೀವನ್ ಮಿಷನ್ ಪೈಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ವಿ.ಜಿ. ಹಾಗೂ ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಶಿವಪ್ರಸಾದ್ ಎಂ. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
Holehonnur Police Crack Jal Jeevan Mission Pipe Theft Case

