ಸಕ್ಕರೆಬೈಲು ಆನೆ ಬಿಡಾರದಲ್ಲಿ ಕಾವಾಡಿಗನಿಗೆ ಶಿಕ್ಷೆ: ಆನೆಯ ಕಾಳಜಿ ವಹಿಸಿದ್ದಕ್ಕೆ ಅಮಾನತು! Punishment for a bullfighter at the Sakkarabailu elephant camp: Suspension for taking care of an elephant!

SUDDILIVE || SHIVAMOGGA

ಸಕ್ಕರೆಬೈಲು ಆನೆ ಬಿಡಾರದಲ್ಲಿ ಕಾವಾಡಿಗನಿಗೆ ಶಿಕ್ಷೆ: ಆನೆಯ ಕಾಳಜಿ ವಹಿಸಿದ್ದಕ್ಕೆ ಅಮಾನತು! Punishment for a bullfighter at the Sakkarabailu elephant camp: Suspension for taking care of an elephant!    

Punishment, bullfighter


ಮಲೆನಾಡು ಜಿಲ್ಲೆ ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ನಿಜವಾಗ್ತಾ ಇದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಆನೆಗಳು ಗಾಯಗೊಂಡು ಗುಣಮುಖವಾಗದೆ ಪರಿತಪಿಸ್ತಾ ಇದ್ದು, ಇದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಅದರಂತೆ ಇದೀಗ ಗಾಯಗೊಂಡ ವಿಕ್ರಾಂತ್ ಆನೆಗೆ ಸರಿಯಾಗಿ ನೋಡ್ಕೊಳ್ಳಿ, ಪೌಷ್ಟಿಕ ಆಹಾರವನ್ನ ನೀಡಿ ಎಂದ ಕಾವಾಡಿಗನಿಗೆ ಗೇಟ್ ಪಾಸ್ ನೀಡಲಾಗಿದೆ.

'ಅಂಗೈ ಹುಣ್ಣಿಗೆ ಕನ್ನಡಿ ಬೇಕೇ' ಅನ್ನೋ ಗಾದೆ ಮಾತಿದೆ. ಆದರೆ ಅದೇ ಹುಣ್ಣು ತೋರಿಸಿದ್ದಕ್ಕೆ ಆತನನ್ನೇ ಕೆಲಸದಿಂದ ವಜಾ ಮಾಡಿ ಶಿಕ್ಷೆ ಕೊಟ್ಟುಬಿಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅನ್ನೋದನ್ನ ಡೀಟೇಲ್ ಆಗಿ ಹೇಳ್ತೀವಿ ಕೇಳಿ. ಇದು ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರ. ಇವನ ಹೆಸರು ವಿಕ್ರಾಂತ್. ಈ ಆನೆ ಕಾಲಿಗೆ ಗಾಯವಾಗಿ ನರಳಾಡ್ತಿತ್ತು. ಆನೆಗಳನ್ನ ಮಕ್ಕಳಂತೆ ಸಾಕುವ ವಿಕ್ರಾಂತ್ ಆನೆಯ ಕಾವಾಡಿ ಶೇಖ್ ಹುಸೇನ್ ಮರುಗಿದ್ದ.


'ನನ್ನ ಪ್ರೀತಿಯ ಆನೆ ವಿಕ್ರಾಂತ್‌ಗೆ ಗಾಯವಾಗಿದೆ, ಪೌಷ್ಟಿಕ ಹಾಗೂ ಅಗತ್ಯ ಆಹಾರವಿಲ್ಲದೆ ನರಳುತ್ತಿದೆ. ತಜ್ಞ ವೈದ್ಯರಿಂದ ವಿಕ್ರಾಂತ್‌ಗೆ ಚಿಕಿತ್ಸೆ ಕೊಡಿಸಿ' ಅಂತ ಕಳೆದ ಏಪ್ರಿಲ್ ತಿಂಗಳಲ್ಲಿ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದನು. ಮೇಲಾಧಿಕಾರಿಗಳು ಈ ಪತ್ರ ನೋಡಿ ಹೆಚ್ಚೆತ್ತುಕೊಳ್ಳುವುದು ಬಿಟ್ಟು, ಪತ್ರ ಬರೆದ ಅವನಿಗೆ ಶಿಕ್ಷೆ ಕೊಟ್ಟುಬಿಟ್ಟಿದ್ದಾರೆ. ಕಾವಾಡಿ ಶೇಖ್ ಹುಸೇನ್‌ನನ್ನು ಸಸ್ಪೆಂಡ್ ಮಾಡಿದ್ದಾರೆ.

ಜೋಸೆಫ್ ಹೂವರ್ (ಪರಿಸರವಾದಿ): 

"ವಿಕ್ರಾಂತ್ ಆನೆದು ಯಾಕೋ ಕಾಂಟ್ರವರ್ಸಿ ಮುಂದಕ್ಕೆ ಹೋಗ್ತಾನೆ ಇದೆ. ಆನೆ ನೋಡ್ಕೊಳ್ಳೋಕೆ ಆಗ್ಲಿಲ್ಲ ಇವರಿಗೆ, ನಮ್ಮ ಡಿಸಿಎಫ್ ಪ್ರಸನ್ನ ಪಟಗಾರ್ ಅವರಿಗೆ. ಆದರೆ ಒಬ್ಬ ಕಾವಾಡಿ, ಅವನು ಆನೆ ಬಗ್ಗೆ ಆನೆಗೆ ಒಳ್ಳೆ ಆಹಾರ ಕೊಡಬೇಕು, ಅದನ್ನು ಚೆನ್ನಾಗಿ ನೋಡ್ಕೋಬೇಕು ಅನ್ನೋ ಒಂದು ಅರ್ಜಿ ಬರೆದಿದ್ದಕ್ಕೆ ಅವರಿಗೆ ಅಮಾನತು ಮಾಡಿದ್ದಾರೆ. ಫಸ್ಟ್ ನಾನ್ ಸರ್ಕಾರಕ್ಕೆ ಕೇಳೋದು ಅಂದ್ರೆ, ಫಸ್ಟ್ ಸೀನಿಯರ್ ಆಫೀಸರ್ಸ್‌ನ ಅಮಾನತು ಮಾಡಿ. ಅವರು ಸರಿಗಿದ್ದರೆ ಇವರೆಲ್ಲಾ ಕರೆಕ್ಟಾಗಿ ಕೆಲಸ ಮಾಡುವವರು. ಈಗ ಅವನು ಕೆಲಸ ಮಾಡಿಲ್ಲ, ಅವನು ಇದು ಮಾಡ್ತಾನೆ ಅದು ಮಾಡ್ತಾನೆ ಅಂದುಬಿಟ್ಟು ಬ್ಲೇಮ್ ಮಾಡೋಕಿನ್ನ, ಅವರು ಬರೆದಿರೋ ಕಾವಾಡಿ ಇದರೊಳಗೆ ಲೆಟರ್ ಒಳಗೆ, ಈ ತರ ಆನೆಗೆ ನಾವು ಚೆನ್ನಾಗಿ ಊಟ ಕೊಟ್ಟು, ಚೆನ್ನಾಗಿ ಬಲ ಬರಿಸಿ ಅದು ಚೆನ್ನಾಗಿ ಇರಬೇಕು ಅಂದ್ಬಿಟ್ಟು ಅವನು ಬರೆದಿರೋದು ಆಸೆಯಿಂದ ಆನೆಗೆ ಬೇರೆ ಕಡೆ ಕಳಿಸಬೇಡಿ ಅಂತ ಅವರು ಹೇಳಿರೋದು. ಅದನ್ನೇ ಇಟ್ಕೊಂಡು ಅವರಿಗೆ ಪನಿಶ್ಮೆಂಟ್ ಕೊಡೋದು ಸರಿ ಹೋಗಲ್ಲ."

ವಿಕ್ರಾಂತ್ ಆನೆಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆಗೆ ಮನವಿ ಮಾಡಿದ್ದ ಶೇಖ್ ಹುಸೇನ್‌ಗೆ ಈ ರೀತಿ ಅಮಾನತ್ತಿನ ಶಿಕ್ಷೆ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದೆ.

ದಿಲೀಪ್ ನಾಡಿಗ್ (ಟ್ರಸ್ಟಿ, ಮಲೆನಾಡು ವೈಲ್ಡ್ ಲೈಫ್ & ಕಲ್ಚರಲ್ ಫೌಂಡೇಶನ್): 


"ನೋಡಿ ಸರ್ಕಾರ ಹೇಗೆ ಇಲಾಖೆಗಳು ತಮ್ಮ ಕೈಚಳಕವನ್ನು ತೋರಿಸುತ್ತವೆ ಅಂತ ಅಂದ್ರೆ, ಪತ್ರವನ್ನು ಬರೆದು ಮನವಿ ಮಾಡಿಕೊಂಡಂತಹ ಹುಸೇನ್ ಅವರನ್ನ ಈ ತಿಂಗಳು ಅವರು ಸಸ್ಪೆಂಡ್ ಮಾಡ್ತಾರೆ. ಅಂದ್ರೆ ಯಾವ ಕಾರಣದಲ್ಲಿ ಸಸ್ಪೆಂಡ್ ಮಾಡ್ತಾರೆ ಅಂದ್ರೆ ಆ ವ್ಯಕ್ತಿ ಯಾವಾಗಲೂ ಮದ್ಯಪಾನದಲ್ಲಿ ಮುಳುಗಿರುತ್ತಾನೆ ಹಾಗಾಗಿ ನಾವು ಅವರನ್ನ ಸಸ್ಪೆಂಡ್ ಮಾಡಿದ್ದೀವಿ ಅಂತ ಕಾರಣ ಕೊಡ್ತಾರೆ. ಇಲ್ಲಿ ಒಂದು ಗಮನಿಸಬೇಕಾದ ಅಂಶ ಅಂದ್ರೆ, ಒಬ್ಬ ವ್ಯಕ್ತಿ ಯಾವಾಗಲೂ ಮದ್ಯಪಾನದಲ್ಲೇ ಮುಳುಗಿರುತ್ತಾನೆ ಅನ್ನೋದಾದ್ರೆ ಅವನು ಯಾಕೆ ಅಧಿಕಾರಿಗಳಿಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದ? ಅವನು ಯಾವಾಗಲೂ ಮದ್ಯಪಾನದಲ್ಲೇ ಮುಳುಗಿಕೊಂಡು ಆನೆಗಳ ಬಗ್ಗೆ ಕಾಳಜಿ ಇಲ್ಲದಲ್ಲೇ ಅವನು ಮದ್ಯಪಾನದಲ್ಲೇ ಇರ್ತಾ ಇದ್ದ. ಅಂದ್ರೆ ಇಲ್ಲಿ ಅರಣ್ಯ ಇಲಾಖೆಯಾಗಲಿ, ಬೇರೆ ಇಲಾಖೆಯಾಗಲಿ ಯಾವ ರೀತಿ ಕೆಲಸ ಮಾಡ್ತಾ ಇದೆ ಅನ್ನೋದರ ಬಗ್ಗೆ ನಾವು ಯೋಚನೆ ಮಾಡಬೇಕಾಗುತ್ತೆ."

ಅರಣ್ಯ ಇಲಾಖೆಯ ಹೊರಗುತ್ತಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಕಳಪೆ ನಿರ್ವಹಣೆಯೇ ಆನೆ ಸ್ಥಿತಿಗೆ ಕಾರಣ ಎನ್ನಲಾಗ್ತಿದೆ. ಏನೇ ಇರಲಿ, ತನ್ನ ಆನೆ ನೋವಿನಲ್ಲಿ ನರಳಾಡ್ತಿರೋದನ್ನ ನೋಡಲಾಗದೆ ಪತ್ರ ಬರೆದ ಕಾವಾಡಿಗೆ ಶಿಕ್ಷೆ ಕೊಟ್ಟಿದ್ದು ಮಾತ್ರ ವಿಚಿತ್ರ.

ಸಕ್ಕರೆಬೈಲು ಆನೆ ಬಿಡಾರದಲ್ಲಿ ಕಾವಾಡಿಗನಿಗೆ ಶಿಕ್ಷೆ: ಆನೆಯ ಕಾಳಜಿ ವಹಿಸಿದ್ದಕ್ಕೆ ಅಮಾನತು!

ಪ್ರಸಿದ್ಧ ಸಕ್ಕರೆಬೈಲು ಆನೆ ಬಿಡಾರದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ನಿರ್ಲಕ್ಷ್ಯದ ಮತ್ತೊಂದು ಮುಖ ಅನಾವರಣಗೊಂಡಿದೆ. ಬಿಡಾರದ 'ವಿಕ್ರಾಂತ್' ಎಂಬ ಆನೆಯ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿ, ಸೂಕ್ತ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೀಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಕಾವಾಡಿಗ ಶೇಖ್ ಹುಸೇನ್‌ನನ್ನು ಇಲಾಖೆ ಅಮಾನತು ಮಾಡಿದೆ.

ಘಟನೆಯ ಹಿನ್ನೆಲೆ

ವಿಕ್ರಾಂತ್ ಆನೆಯ ಕಾಲಿಗೆ ತೀವ್ರ ಗಾಯವಾಗಿದ್ದು, ಸೂಕ್ತ ಆಹಾರ ಮತ್ತು ಆರೈಕೆಯಿಲ್ಲದೆ ಅದು ನರಳಾಡುತ್ತಿತ್ತು. ಇದನ್ನು ಕಂಡು ಮರುಗಿದ ಕಾವಾಡಿ ಶೇಖ್ ಹುಸೇನ್, ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡಾರದ ಮೇಲಾಧಿಕಾರಿಗಳಿಗೆ ಪತ್ರ ಬರೆದು, ತಜ್ಞ ವೈದ್ಯರಿಂದ ಆನೆಗೆ ಚಿಕಿತ್ಸೆ ಕೊಡಿಸುವಂತೆ ಹಾಗೂ ಪೌಷ್ಟಿಕ ಆಹಾರ ಒದಗಿಸುವಂತೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಆನೆಯ ಸ್ಥಿತಿಯನ್ನು ಸುಧಾರಿಸುವ ಬದಲು, ತಮಗೇ ಪತ್ರ ಬರೆದ ಕಾವಾಡಿಗನನ್ನು ಕೆಲಸದಿಂದ ಅಮಾನತುಗೊಳಿಸಿ ಶಿಕ್ಷೆ ನೀಡಿದ್ದಾರೆ.

ವ್ಯಾಪಕ ಆಕ್ರೋಶ ಮತ್ತು ವಿರೋಧ:

ಅರಣ್ಯ ಇಲಾಖೆಯ ಈ ಕ್ರಮಕ್ಕೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂಸ್ಥೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಕಾವಾಡಿಗನು ಯಾವಾಗಲೂ ಮದ್ಯಪಾನದಲ್ಲಿ ಮುಳುಗಿರುತ್ತಾನೆ ಎಂಬ ಇಲ್ಲಸಲ್ಲದ ಕಾರಣ ನೀಡಿ ಅಮಾನತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 "ಒಬ್ಬ ಕಾವಾಡಿ ಆನೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅರ್ಜಿ ಬರೆದಿದ್ದಕ್ಕೆ ಅವನನ್ನು ಅಮಾನತು ಮಾಡಿರುವುದು ತಪ್ಪು. ಸರ್ಕಾರ ಮೊದಲು ತಪ್ಪು ಎಸಗಿದ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕು."

ಜೋಸೆಫ್ ಹೂವರ್, ಪರಿಸರವಾದಿ

"ಅವನು ಮದ್ಯಪಾನಿ ಆಗಿದ್ದರೆ ಆನೆಯ ಮೇಲಿನ ಕಾಳಜಿಯಿಂದ ಅಧಿಕಾರಿಗಳಿಗೆ ಪತ್ರ ಬರೆಯುವ ಅಗತ್ಯ ಏನಿತ್ತು? ಇಲಾಖೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ."

ದಿಲೀಪ್ ನಾಡಿಗ್, ಮಲೆನಾಡು ವೈಲ್ಡ್ ಲೈಫ್ ಟ್ರಸ್ಟಿ

ಅರಣ್ಯ ಇಲಾಖೆಯ ಹೊರಗುತ್ತಿಗೆ ವೈದ್ಯರ ನಿರ್ಲಕ್ಷ್ಯ ಮತ್ತು ಕಳಪೆ ನಿರ್ವಹಣೆಯೇ ಆನೆಗಳ ಈ ದುಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ದೂರಿದ್ದು, ಆನೆಗಳ ಜೀವ ರಕ್ಷಣೆಗಾಗಿ ಹೋರಾಡಿದ ಕಾವಾಡಿಗನಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಲಾಗಿದೆ.

Punishment for a bullfighter at the Sakkarabailu elephant camp: Suspension for taking care of an elephant!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close