ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಭೀಕರ ಹತ್ಯೆ: ಎಫ್ಐಆರ್ ನಲ್ಲಿ ಏನಿದೆ?Rowdy-Sheeter Narasimha Brutally Murdered in Shivamogga: What Does the FIR Say?

 SUDDILIVE || SHIVAMOGGA

ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಭೀಕರ ಹತ್ಯೆ: ಎಫ್ಐಆರ್ ನಲ್ಲಿ ಏನಿದೆ?Rowdy-Sheeter Narasimha Brutally Murdered in Shivamogga: What Does the FIR Say?   

Rowdy, sheeter

 

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತನ ಪತ್ನಿ ಸ್ನೇಹಾ ನರಸಿಂಹ ನೀಡಿದ ದೂರಿನ ಮೇರೆಗೆ ಸೀಗೆಹಟ್ಟಿಯ ಅನಿಲ್ ಅಲಿಯಾಸ್ ಅಂಬು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ನರಸಿಂಹ ಅವರು ಡ್ರೈವರ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಈ ಹಿಂದೆ ಅಂಬು ಹಾಗೂ ‘ಬಾಕ್ ಬಾಲು’ ಎಂಬಾತನ ನಡುವಿನ ವೈಷಮ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಪರಿಚಯ ಹೊಂದಿದ್ದರು. ಈ ಕಾರಣದಿಂದ ಅಂಬು ನರಸಿಂಹ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 12ರಂದು ಸಂಜೆ ಸುಮಾರು 4.30 ರಿಂದ 4.45ರ ನಡುವೆ ಲಷ್ಕರ್ ಮೊಹಲ್ಲಾದ ಕರಿದೇವರಕೇರಿ ಕ್ರಾಸ್ ಸಮೀಪದ ಜ್ಯೋತಿ ಕ್ಲಿನಿಕ್ ಎದುರು ಘಟನೆ ನಡೆದಿದೆ. ಅಂಬು ತನ್ನ ಸಹಚರರೊಂದಿಗೆ ಸೇರಿಕೊಂಡು ಮಾರಕಾಸ್ತ್ರಗಳಾದ ಮಚ್ಚು ಸೇರಿದಂತೆ ಇತರ ಆಯುಧಗಳಿಂದ ನರಸಿಂಹ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

42 ವರ್ಷದ ನರಸಿಂಹ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಹಾಗೂ 3(5) ಅಡಿಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಘಟನೆ ನಗರದಲ್ಲಿ ಸಂಚಲನ ಮೂಡಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Rowdy-Sheeter Narasimha Brutally Murdered in Shivamogga: What Does the FIR Say?  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close