ಶಿವಮೊಗ್ಗ: ಸರ್ಕಾರದ ವಿರುದ್ಧ ಸಿಡಿದೆದ್ದ ಅರಣ್ಯ ಇಲಾಖೆ ದಿನಗೂಲಿ ನೌಕರರು-Shivamogga: Forest Department daily wage workers protest against the government

SUDDILIVE || SHIVAMOGGA

ಶಿವಮೊಗ್ಗ: ಸರ್ಕಾರದ ವಿರುದ್ಧ ಸಿಡಿದೆದ್ದ ಅರಣ್ಯ ಇಲಾಖೆ ದಿನಗೂಲಿ ನೌಕರರು-Shivamogga: Forest Department daily wage workers protest against the government     

Shivamogga, forest

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ನೌಕರರ ಸಂಘವು ಶಿವಮೊಗ್ಗದಲ್ಲಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಇಲಾಖೆಯಲ್ಲಿ ದಶಕಗಳಿಂದ ದುಡಿಯುತ್ತಿರುವ ತಮಗೆ ಯಾವುದೇ ಸೇವಾ ಭದ್ರತೆ ಸಿಗುತ್ತಿಲ್ಲ ಹಾಗೂ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ನೌಕರರ ಅಳಲು

 ನ್ಯಾಯಾಲಯದ ಆದೇಶಕ್ಕೆ ಕದಡದ ಅಧಿಕಾರಿಗಳು:

 ಕಳೆದ 2019 ರಲ್ಲಿ 100ಕ್ಕೂ ಹೆಚ್ಚು ನೌಕರರು ಸೇವಾ ಭದ್ರತೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ಬಳಿಕ ನವೆಂಬರ್ 11, 2025 ರಂದು ನೌಕರರ ಪರವಾಗಿ ತೀರ್ಪು ಬಂದಿದೆ. ಈ ತೀರ್ಪಿನ ಪ್ರತಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (CCF) ಸಲ್ಲಿಸಿ ಮನವಿ ಮಾಡಿದರೂ, ಇಂದಿನವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೌಕರರು ದೂರಿದ್ದಾರೆ.

 ಕಲಬುರಗಿ ಮಾದರಿ ಜಾರಿಗೆ ಒತ್ತಾಯ

 ಕಲಬುರಗಿಯಲ್ಲಿ ಕಾರ್ಮಿಕ ಇಲಾಖೆಯ ನಿಯಮಾವಳಿಗಳ ಪ್ರಕಾರ ಬ್ಯಾಂಕ್ ಮುಖಾಂತರ ವೇತನ ಪಾವತಿ ಮಾಡಲಾಗುತ್ತಿದ್ದು, ಅಲ್ಲಿನ ನೌಕರರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅದೇ ಮಾದರಿಯನ್ನು ಶಿವಮೊಗ್ಗದಲ್ಲೂ ಅಳವಡಿಸಬೇಕು. ಕಾರ್ಮಿಕ ಇಲಾಖೆಯ ಸುತ್ತೋಲೆಯಂತೆ ಸಹಕಾರ ಸಂಘಗಳ ಮೂಲಕ ನೇರ ವೇತನ ನೀಡಲು ಶಿವಮೊಗ್ಗ ಸಿಸಿಎಫ್ ಅವರು ವಲಯ ಅರಣ್ಯಾಧಿಕಾರಿಗಳಿಗೆ (RFO) ಪತ್ರ ಬರೆದಿದ್ದರೂ, ಆರ್.ಎಫ್.ಒಗಳು ಇದಕ್ಕೆ ಶಿಫಾರಸು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

 ವೇತನದಲ್ಲಿ ತಾರತಮ್ಯ ಮತ್ತು ಅಕ್ರಮದ ಶಂಕೆ

 ಪ್ರಸ್ತುತ ನೌಕರರಿಗೆ ಮೂಲ ವೇತನ ₹24,000 ಸಿಗಬೇಕಾಗಿದ್ದರೂ, ಗುತ್ತಿಗೆದಾರರ ಮೂಲಕ ಕೇವಲ ₹16,500 ರಿಂದ ₹17,000 ಮಾತ್ರ ನೀಡಲಾಗುತ್ತಿದೆ. ಪಿ.ಎಫ್ ಹಾಗೂ ಇ.ಎಸ್.ಐ ಸೌಲಭ್ಯಗಳೂ ಇಲ್ಲದಂತಾಗಿದೆ. ಕೆಲವು ವಲಯಗಳಲ್ಲಿ 15 ಜನ ನೌಕರರಿದ್ದರೆ 30 ಜನರ ಹೆಸರಿನಲ್ಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಂಘ ಮಾಡಿದೆ.

 ರಾಜಕೀಯ ನಾಯಕರ ಭರವಸೆ ಹುಸಿ:

ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳಿಗೂ ಮತ್ತು ಸ್ಥಳೀಯ ಜನಪ್ರತಿನಿಧಿಗಳಾದ ಮಧು ಬಂಗಾರಪ್ಪ, ಬಿ.ವೈ. ರಾಘವೇಂದ್ರ, ಕಿಮ್ಮನೆ ರತ್ನಾಕರ್, ಶರತ್ ಬಚ್ಚೇಗೌಡ, ಮಂಜುನಾಥ್ ಭಂಡಾರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಲಾಗಿದೆ. ಭದ್ರಾವತಿ ಶಾಸಕರು ಈ ಬಗ್ಗೆ ಸಿಎಂ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.

"ನಾವು 10 ರಿಂದ 25 ವರ್ಷಗಳಿಂದ ವನ್ಯಜೀವಿ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯಗಳಲ್ಲಿ ವಾಚರ್ ಆಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ಹೈಕೋರ್ಟ್ ತೀರ್ಪು ನೀಡಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 400ಕ್ಕೂ ಹೆಚ್ಚು ನೌಕರರು ಸಂಕಷ್ಟದಲ್ಲಿದ್ದಾರೆ. ಇದು ಇಡೀ ರಾಜ್ಯದ ಸಮಸ್ಯೆಯಾಗಿದ್ದು, ಮಾಧ್ಯಮ ಮಿತ್ರರು ನಮಗೆ ನ್ಯಾಯ ಕೊಡಿಸಲು ಸಹಕರಿಸಬೇಕು."

ನೌಕರರ ಸಂಘದ ಪದಾಧಿಕಾರಿಗಳು

ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಮುಂಬರುವ ದಿನಗಳಲ್ಲಿ ನ್ಯಾಯಾಂಗ ನಿಂದನೆ (Contempt of Court) ಮೊಕದ್ದಮೆ ಹೂಡಲು ನೌಕರರ ಸಂಘ ನಿರ್ಧರಿಸಿದೆ.

Shivamogga: Forest Department daily wage workers protest against the government


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close