SUDDILIVE || SHIVAMOGGA
ಬೆಂಗಳೂರು–ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಶಾಕ್: ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ- Shock for Bengaluru–Shivamogga Train Passengers: Services of Several Trains Altered
ಬೆಂಗಳೂರು ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಘೋಷಿಸಿದೆ. ಇದರಿಂದ ಶಿವಮೊಗ್ಗ–ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಮೇಲೂ ಪರಿಣಾಮ ಬೀರಿದೆ.
ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ (16582) ಹಾಗೂ ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16581) ರೈಲುಗಳು ಆಗಸ್ಟ್ 4ರಂದು ಸಂಪೂರ್ಣ ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದಲ್ಲದೆ, ಜನಪ್ರಿಯ ಜನಶತಾಬ್ದಿ ರೈಲುಗಳಾದ ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (12089) ಮತ್ತು ಶಿವಮೊಗ್ಗ ಟೌನ್–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12090) ರೈಲುಗಳ ಸಂಚಾರ ಆಗಸ್ಟ್ 1ರಿಂದ 3ರವರೆಗೆ ಭಾಗಶಃ ರದ್ದಾಗಿದ್ದು, ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವಿನ ಸಂಚಾರ ಸ್ಥಗಿತಗೊಳ್ಳಲಿದೆ.
ರೈಲ್ವೆ ಇಲಾಖೆಯ ಈ ಕಾಮಗಾರಿಗಳಿಂದ ಬೆಂಗಳೂರು ಮಾರ್ಗದ ಹಲವು ರೈಲುಗಳ ವೇಳಾಪಟ್ಟಿ, ಮಾರ್ಗ ಮತ್ತು ಸಂಚಾರದಲ್ಲಿ ಬದಲಾವಣೆಗಳಾಗಿರುವುದರಿಂದ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ರೈಲುಗಳ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

