ಗಾಯಗೊಂಡಿದ್ದ ವ್ಯಕ್ತಿ ಸಾವು-ಪ್ರಕರಣ ನಡೆದಿದ್ದು ಹೇಗೆ-The injured person died - how the incident happened

 SUDDILIVE ||SHIVAMOGGA

ಗಾಯಗೊಂಡಿದ್ದ ವ್ಯಕ್ತಿ ಸಾವು-ಪ್ರಕರಣ ನಡೆದಿದ್ದು ಹೇಗೆ-The injured person died - how the incident happened     

Injured, died

ಬ್ಯಾಂಕ್ ಸಾಲದ ಹಿನ್ನಲೆಯಲ್ಲಿ ಸಹೋದರನ ಮೇಲೆ ಹಲ್ಲೆಯಾಗಿದ್ದು ಗಾಯಗೊಂಡ ಸಹೋದರ ಸಾವನ್ನಪ್ಪಿರುವುದು ಪ್ರಕರಣ ತಿರುವು ಪಡೆದುಕೊಂಡಿದೆ. 

ಆನಂದಪುರ ಸಮೀಪದ ಮಾದರಸನಕೊಪ್ಪ ಗ್ರಾಮದಲ್ಲಿ ಬ್ಯಾಂಕ್ ಸಾಲದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಜಮೀನು ಅಭಿವೃದ್ಧಿಗೆ ಪಡೆದಿದ್ದ ಸಾಲ

ದೂರಿನ ಪ್ರಕಾರ, ರಾಘವೇಂದ್ರ ಎಂಬ 48 ವರ್ಷದ ವ್ಯಕ್ತಿ  ಕುಟುಂಬಕ್ಕೆ ಸುಮಾರು 2.5 ಎಕರೆ ಜಮೀನಿದ್ದು, ಅದನ್ನು ನಾಲ್ಕು ಭಾಗಗಳಾಗಿ ಹಂಚಿಕೆ ಮಾಡಲಾಗಿತ್ತು. ರಾಘವೇಂದ್ತರ ಪಾಲಿಗೆ ಬಂದಿದ್ದ ಮುಕ್ಕಾಲು ಎಕರೆ ಜಮೀನನ್ನು ತೋಟವನ್ನಾಗಿ ಅಭಿವೃದ್ಧಿಪಡಿಸಲು ಹಣದ ಅಗತ್ಯವಿದ್ದ ಕಾರಣ, ಸುಮಾರು ನಾಲ್ಕು ವರ್ಷಗಳ ಹಿಂದೆ ತಾಯಿಯ ಹೆಸರಿನಲ್ಲಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ರೂ. ಸಾಲ ಪಡೆದಿದ್ದರು. 

ಸಾಲ ಮರುಪಾವತಿ ವಿಳಂಬದಿಂದ ನೋಟಿಸ್

ಸಾಲ ಪಡೆದ ಬಳಿಕ ಬಡ್ಡಿ ಹಣವನ್ನು ಮಾತ್ರ ಪಾವತಿಸಲಾಗಿದ್ದು, ಅಸಲು ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ವತಿಯಿಂದ ರಾಘವೇಂದ್ರರ ತಾಯಿ ಹಾಗೂ ಸಾಲಕ್ಕೆ ಸಂಬಂಧಿಸಿದಂತೆ ಮಹೇಶ್ ಎಂಬುವರ ವ್ಯಕ್ತಿಗೆ ನೋಟಿಸ್ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ, ಸಾವು

ಮೇ 23, 2026ರಂದು ರಾತ್ರಿ ಸುಮಾರು 10.30 ಗಂಟೆಗೆ ನೆಂಟರ ಮನೆಯಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಆರೋಪಿ ಮಹೇಶ್ ರಾಘವೇಂದ್ರರನ್ನ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಅಲ್ಲಿದ್ದ ದೊಣ್ಣೆಯಿಂದ ಸೊಂಟ ಭಾಗಕ್ಕೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದಾನೆ. ಈ ಸೊಂಟದ ಮೇಲಿನ ಗಾಯ ಮಾಗದೆ ಇಂದು ರಾಘವೇಂದ್ರ ಸಾವನ್ನಪ್ಪಿದ್ದಾನೆ. 

ಪ್ರಕರಣ ದಾಖಲು

ಗಾಯಗೊಂಡ ವ್ಯಕ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಸಾವುಕಂಡಿದ್ದಾರೆ. 

The injured person died - how the incident happened 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close