ಪನಿಷ್ ಮೆಂಟ್ ವರ್ಗಾವಣೆ? Transfer of punishment?

SUDDILIVE || SHIVAMOGGA

ಪನಿಷ್ ಮೆಂಟ್ ವರ್ಗಾವಣೆ? Transfer of punishment?   

Transfer, punishment

ತಲೆದಂಡವಾಗಬೇಕಿದ್ದ ಪ್ರಕರಣ ವರ್ಗವಣೆಯಲ್ಲಿ ಅಂತ್ಯಗೊಂಡಿದೆ? ಆಡಳಿತಾತ್ಮಕ ವರ್ಗಾವಣೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಇದೊಂದು ಪನಿಷ್ ಮೆಂಟ್ ವರ್ಗವಣೆ ಎಂಬುದು ಅನುಮಾನಕ್ಕೊಳಗಾಗಿರುವ ಸತ್ಯ. ಈ ವರ್ಗಾವಣೆ ಕೇವಲ ಮೂರು ಕಾನ್ ಸ್ಟೇಬಲ್ ರಿಗೆ ಸೀಮಿತವಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಯ ನಡುವೆ ಡಿಎಸ್ ಪಿ ವರದಿ ಆಧಾರದ ಮೇರೆಗೆ ಮೂವರ ಎತ್ತಂಗಡಿಯಾಗಿದೆ.

ಜೂ.12 ರಂದು ನರಸಿಂಹನ ಕೊಲೆ ಇಸ್ಪೀಟ್ ಅಡ್ಡದಲ್ಲಿ ನಡೆದಿತ್ತು. ಅಂಬು, ಮಧು, ಕತ್ತೆ, ಶಬರೀಶ್ ಮತ್ತು ರವಿ ಅವರು ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದರು. ಸರೆಂಡರ್ ಆದ ಬೆನ್ನಲ್ಲೆ ಮಧುವಿನ ಕಾಲಿಗೆ ಗುಂಡು ಹಾರಿತ್ತು. ಹಳೆ ದ್ವೇಷದ ಹಿನ್ನಲೆಯಲ್ಲಿ ಈ ಎಲ್ಲ ಬೆಳವಣಿಗೆ ನಡೆದಿದೆ ಎಂಬುದು ಎಫ್ ಐಆರ್ ನಲ್ಲಿ ಉಲ್ಲೇಖವಾಗಿತ್ತು. 

ಇದರ ಬೆನ್ನಲ್ಲೇ ಎಎಸ್ಐ ಆಂಥೋಣಿ, ಪ್ರಕಾಶ್ ಮತ್ತು ಮಂಜೇಶ್ ಮೂವರನ್ನ ವರ್ಗಗೊಳಿಸಲಾಗಿದೆ. ಆಂಥೋಣಿಗೆ ಕಾರ್ಗಲ್ ಗೆ ವರ್ಗಗೊಂಡರೆ, ಪ್ರಕಾಶ್ ಆಗುಂಬೆಗೆ ಹಾಗೂ ಮಂಜೇಶ್ ಗೂ ಹೊರತಾಲೂಕಿಗೆ ವರ್ಗ ಮಾಡಲಾಗಿದೆ. ಇದು ಪನಿಷ್ ಮೆಂಟ್ ವರ್ಗ ಎಂಬ ಮಾತು ಕೇಳಿ ಬರುತ್ತಿದೆ. 

ಎಸ್ಪಿ ಅವರೆ ಈ ಹಿಂದೆ ಹೇಳಿದಂತೆ ನರಸಿಂಹನ ಹತ್ಯೆ ನಡೆದ ಅಡ್ಡ ಇಸ್ಪೀಟ್ ಅಡ್ಡವಾಗಿದ್ದು ನಾಲ್ಕು ಬಾರಿ ರೈಡ್ ಆಗಿತ್ತು. ನಾಲ್ಕು ಬಾರಿ ರೈಡ್ ಆದ ಮೇಲೂ ಮತ್ತೆ ಆರಂಭವಾಗಿ, ಅಲ್ಲೇ ನರಸಿಂಹನ ಮರ್ಡರ್ ಆಗಿದೆ. ಈ ಹಿನ್ನಲೆಯಲ್ಲಿ ಡಿಎಸ್ಪಿ ತನಿಖೆ ನಡೆಸಿ ಅವರ ವರದಿ ಆಧಾರದ ಮೇರೆಗೆ ಆಡಳಿತಾತ್ಮಕ ಹಿನ್ನಲೆಯಲ್ಲಿ ಮೂವರಿಗೆ ವರ್ಗ ಆಗಿದೆ. 

ಮಂಜೇಶ್ ಮತ್ತು ಆಂಥೋಣಿ ಕೋಟೆ ಬೀಟ್ ಪೊಲೀಸ್ ಆಗಿದ್ದರು. ಪ್ರಕಾಶ್ ಎಸ್ ಬಿ ಕಾನ್ ಸ್ಟೇಬಲ್ ಆಗಿದ್ದರು. ಈ ಮೂರು ಪೊಲೀಸರು ನರಸಿಂಹನ ಹತ್ಯೆ, ಇಸ್ಪೀಟ್ ಅಡ್ಡ ರೀಓಪನ್ ಹಿನ್ನಲೆಯಲ್ಲಿ ವರ್ಗ ಆಗಿರಬಹುದು ಎಂಬುದು ವರ್ಗಾವಣೆಯ ಆದೇಶದ ಹಿಂದಿನ ಸತ್ಯವಿದೆ ಎಂಬುದು ವಿಶ್ಲೇಷಿಸಲಾಗುತ್ತಿದೆ. ಆದರೆ ಆದೇಶದಲ್ಲಿ ಆಡಳಿತಾತ್ಮಕ ಹಿನ್ನಲೆಯಲ್ಲಿ ವರ್ಗವಾಗಿದೆ ಎಂಬುದು ಉಲ್ಲೇಖಗೊಂಡಿದೆ.  ಎಸ್ಪಿ ನಿಖಿಲ್ ನಿನ್ನೆ ಆದೇಶಿಸಿರುವುದು ಪೊಲೀಸ್ ವಲಯದಲ್ಲಿ ಸಂಚಲನ ಉಂಟು ಮಾಡಿದೆ. 

ಈ ವರ್ಗವಣೆ ಆಗಿರುವುದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗಲಿ. ಆದರೆ ಪೊಲೀಸ್ ಠಾಣೆಯಲ್ಲಿ ಜನರಲ್ ವರ್ಗಾವಣೆಯನ್ನ ಖುದ್ದು ಎಸ್ಪಿ ಅವರೆ ಮಾಡಿದ್ದರು. ಕೆಲವೊಂದು ಕಡೆ ಜನರಲ್ ವರ್ಗ ಆಗಿದೆ. ಕೆಲ ಸ್ಟೇಷನ್ ನಲ್ಲಿ ಆಗಿಲ್ಲ. ಕೆಲವೊಂದು ಕಡೆ 8 ವರ್ಷದಿಂದ 10 ವರ್ಷ ಒಂದೇ ಠಾಣೆಯಲ್ಲಿದ್ದಾರೆ. (ಹಾಗಂತ ಈಗ ವರ್ಗವಾಗಿರುವ ಮೂವರು ಪೊಲೀಸರು 10 ವರ್ಷದಿಂದ ಕೋಟೆಯಲ್ಲೇ ಕೆಲಸ ಮಾಡುತ್ತಿರುವವರಲ್ಲ) ನೂತನವಾಗಿ ಅಧಿಕಾರ ವಹಿಸಿಕೊಂಡ ಎಸ್ಪಿ ಅವರು ಕೆಲವು ತಿಂಗಳ ಅಂತರದಲ್ಲಿ  ವರ್ಗಾವಣೆ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಆಡಳಿತಾತ್ಮಕ ವರ್ಗಾವಣೆಯಷ್ಟು ಸಾಮಾನ್ಯ ವರ್ಗಾವಣೆ ಎಫೆಕ್ಟ್ ಆಗಿ ನಡೆಯದೆ ಇರುವುದು ಅಷ್ಟೆ ಸತ್ಯವಾಗಿದೆ. 

Transfer of punishment?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close