SUDDILIVE|| SHIVAMOGGA
ಸಂತೆಕಡೂರು ಸಮೀಪ ಕಾರು ಅಪಘಾತ: ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ದಾಟಿದ ರಿಟ್ಜ್ ಕಾರು- Car accident near Santhekadur: Ritz car crosses the road after hitting the divider
ಶಿವಮೊಗ್ಗ: ಶಿವಮೊಗ್ಗ–ಲಕ್ಕಿನಕೊಪ್ಪ ರಸ್ತೆಯ ಸಂತೆಕಡೂರು ಸಮೀಪದ ಮೂರನೇ ಮೈಲು ಬಳಿ ಮಂಗಳವಾರ ರಿಟ್ಜ್ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಎದುರಿನ ರಸ್ತೆಗೆ ಹಾರಿದ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಶಿವಮೊಗ್ಗದಿಂದ ಲಕ್ಕಿನಕೊಪ್ಪ ಕಡೆಗೆ ತೆರಳುತ್ತಿದ್ದ ರಿಟ್ಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್ ದಾಟಿ ಎದುರಿನ ರಸ್ತೆಗೆ ಹೋಗಿದೆ.
ಅಪಘಾತಕ್ಕೆ ರಸ್ತೆಗೆ ಕುರಿಯೊಂದು ಅಡ್ಡ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದರೂ, ಘಟನೆ ನಡೆದ ಬಳಿಕ ಸ್ಥಳದಲ್ಲಿ ಯಾವುದೇ ಕುರಿ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಕಾರುದಲ್ಲಿ ಚಾಲಕ ಒಬ್ಬರೇ ಪ್ರಯಾಣಿಸುತ್ತಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ತುಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
