ಸಿದ್ದು-ಡಿಕೆಶಿ ಬಣದ ಪೈಪೋಟಿಯಿಂದ ಆಡಳಿತ ಕುಂಟಿತ: ರೈತರ ಸಮಸ್ಯೆ ಕಡೆಗಣನೆ – ಈಶ್ವರಪ್ಪ ಆರೋಪ- The administration is crippled by the rivalry between Sidhu-DKshi faction: Farmers' problems are being ignored - Eshwarappa alleges

 SUDDILIVE || SHIVAMOGGA

ಸಿದ್ದು-ಡಿಕೆಶಿ ಬಣದ ಪೈಪೋಟಿಯಿಂದ ಆಡಳಿತ ಕುಂಟಿತ: ರೈತರ ಸಮಸ್ಯೆ ಕಡೆಗಣನೆ – ಈಶ್ವರಪ್ಪ ಆರೋಪ- The administration is crippled by the rivalry between Sidhu-DKshi faction: Farmers' problems are being ignored - Eshwarappa alleges  
Administration, crippled

ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಪೈಪೋಟಿಯಿಂದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದ್ದು, ಅದರ ಪರಿಣಾಮವಾಗಿ ಆಡಳಿತ ಸಂಪೂರ್ಣ ಕುಂಟಿತಗೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರದ್ದೇ ಒಂದು ಸಚಿವರ ಪಟ್ಟಿ, ಡಿ.ಕೆ. ಶಿವಕುಮಾರ್ ಅವರದ್ದೇ ಮತ್ತೊಂದು ಪಟ್ಟಿ. ಇಬ್ಬರೂ ತಮ್ಮ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿರುವುದರಿಂದ ಸಂಪುಟ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಇದೇ ಗೊಂದಲ ಮುಂದುವರಿದಿದೆ. ಈ ರಾಜಕೀಯ ಪೈಪೋಟಿಯಿಂದ ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ಟೀಕಿಸಿದರು.

ರೈತರ ಬೆಳೆ ಹಾನಿ, ಮಳೆ ಕೊರತೆ ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸರ್ಕಾರ ಸಮರ್ಪಕ ಸಮೀಕ್ಷೆಯನ್ನೇ ನಡೆಸಿಲ್ಲ ಎಂದು ಆರೋಪಿಸಿದ ಈಶ್ವರಪ್ಪ, ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ನೆರವು ಕೇಳುವ ಮುನ್ನ ಬೆಳೆ ನಷ್ಟದ ನಿಖರ ವರದಿ ಸಿದ್ಧಪಡಿಸಬೇಕಿತ್ತು ಎಂದರು.

"ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದೆ. ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ ಸರ್ಕಾರದ ಗಮನ ಸಂಪುಟ ವಿಸ್ತರಣೆ ಮತ್ತು ಆಂತರಿಕ ರಾಜಕೀಯದ ಮೇಲೆಯೇ ಇದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಡಿಆರ್‌ಎಫ್‌ನ ಪ್ರಸ್ತುತ ಬೆಳೆ ಹಾನಿ ಪರಿಹಾರ ಮಾನದಂಡಗಳು ಹಳೆಯದಾಗಿದ್ದು, ರೈತರಿಗೆ ನೀಡುವ ಪರಿಹಾರವನ್ನು ಕನಿಷ್ಠ ಹತ್ತು ಪಟ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಇದೇ ವೇಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು "ನನಗೆ ಮಾಹಿತಿ ಇಲ್ಲ" ಎಂದು ಹೇಳಿರುವುದನ್ನೂ ಈಶ್ವರಪ್ಪ ಟೀಕಿಸಿ, ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.

The administration is crippled by the rivalry between Sidhu-DKshi faction: Farmers' problems are being ignored - Eshwarappa alleges  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close