SUDDILIVE || SHIVAMOGGA
ಪೊಲೀಸರನ್ನು, ಮಹಿಳಾ ಸವಾರಿಯನ್ನು ಅಪಹಾಸ್ಯ ಮಾಡಿ ವಿಡಿಯೋ ವೈರಲ್: ಮೋಪೆಡ್ ಜಪ್ತಿ, ಸವಾರನ ವಿರುದ್ಧ ಪ್ರಕರಣ-Video mocking police, woman riding motorcycle goes viral: Moped seized, case filed against rider
ಶಿವಮೊಗ್ಗ: ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಹಾಗೂ ರಸ್ತೆ ಮೇಲೆ ಸಂಚರಿಸುತ್ತಿದ್ದ ಮಹಿಳಾ ಮೋಪೆಡ್ ಸವಾರಿಯನ್ನು ಅಪಹಾಸ್ಯ ಮಾಡಿ ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಶಿವಮೊಗ್ಗ ಸಂಚಾರ ಪೊಲೀಸರು ಮೋಪೆಡ್‌ನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಜುಲೈ 6ರಂದು KA-14-EZ-3167 ನೋಂದಣಿ ಸಂಖ್ಯೆಯ ಮೋಪೆಡ್‌ನ್ನು ಚಲಾಯಿಸುತ್ತಿದ್ದ ಚೇತನ ಎಂಬಾತ ತನ್ನ ಹಿಂಬದಿಯಲ್ಲಿ ಮತ್ತೊಬ್ಬರನ್ನು ಕೂರಿಸಿಕೊಂಡು, ತಾನು ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸದೇ ಶಿವಮೊಗ್ಗ ನಗರದ ಗೋಪಿ ಸರ್ಕಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡುವುದರ ಜೊತೆಗೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಮಹಿಳಾ ಮೋಪೆಡ್ ಸವಾರಿಯನ್ನೂ ಅಪಹಾಸ್ಯ ಮಾಡಿ ಅದರ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಜುಲೈ 7ರಂದು ಪೊಲೀಸರು KA-14-EZ-3167 ಮೋಪೆಡ್‌ನ್ನು ವಶಪಡಿಸಿಕೊಂಡು, ವಾಹನ ಸವಾರನ ವಿರುದ್ಧ ಭಾರತೀಯ ಮೋಟಾರು ವಾಹನಗಳ ಕಾಯ್ದೆ (IMV Act) ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನುಬದ್ಧ ಕ್ರಮ ಜರುಗಿಸಿದ್ದಾರೆ.
ಪ್ರಕರಣ ದಾಖಲಿಸಿದ ಮೇಲೆ ಆರೋಪ ಸ್ಥಾನದಲ್ಲಿದ್ದವರೆ ಪೊಲೀಸ್ ಠಾಣೆ ಮುಂಭಾಗ ವಿಡಿಯೋಮಾಡಿ ಕ್ಷಮೆಕೇಳಿದ್ದಾರೆ.
