ನೇಪಾಳ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕರವೇ ಸ್ವಾಭಿಮಾನಿ ಬಣದಿಂದ ₹10 ಸಾವಿರ ನೆರವು-₹10,000 aid from the KaRaVe Swabhimani faction for Nepal natural disaster victims

SUDDILIVE || SHIVAMOGGA

ನೇಪಾಳ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕರವೇ ಸ್ವಾಭಿಮಾನಿ ಬಣದಿಂದ ₹10 ಸಾವಿರ ನೆರವು-₹10,000 aid from the KaRaVe Swabhimani faction for Nepal natural disaster victims   

Karave, donation

ಶಿವಮೊಗ್ಗ: ನೆರೆಯ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರಕೃತಿ ವಿಕೋಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಘಟಕವು ಸಂತಾಪ ಸೂಚಿಸಿ, ಸಂತ್ರಸ್ತರ ನೆರವಿಗೆ ಮಾನವೀಯತೆಯ ನೆಲೆಯಲ್ಲಿ ಸಹಾಯ ಹಸ್ತ ಚಾಚಿದೆ.

ನೇಪಾಳದಲ್ಲಿ ಹಠಾತ್ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಭೋಟೆ ಕೋಶಿ ನದಿಯ ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸೇರಿದಂತೆ ಹಲವರು ಜೀವ ಕಳೆದುಕೊಂಡಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ವಿಪತ್ತಿನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಕರವೇ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಘಟಕವು, ಸಂಕಷ್ಟಕ್ಕೆ ಸಿಲುಕಿರುವ ನೇಪಾಳದ ಜನರಿಗೆ ನೆರವಾಗುವ ಉದ್ದೇಶದಿಂದ ₹10 ಸಾವಿರವನ್ನು ಡಿಡಿ ಮೂಲಕ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿತು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಕಿರಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಜಿಬುಲ್ಲಾ, ವಿಜಯ್ ಕುಮಾರ್, ಗಂಗಾಧರ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಕರವೇ ಸಾದಿಕ್, ಸಹ ಕಾರ್ಯದರ್ಶಿ ನೂರುಲ್ಲಾಖಾನ್, ಅನ್ಸರ್ ಅಹಮ್ಮದ್, ಮಹಿಳಾ ಅಧ್ಯಕ್ಷೆ ಕವಿತಾ ಸಿ., ಉಪಾಧ್ಯಕ್ಷೆ ಪದ್ಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿವಾರಿ, ಗೌರವಾಧ್ಯಕ್ಷೆ ಪದ್ಮಮ್ಮ ಟಿ.ಎಸ್., ನಗರಾಧ್ಯಕ್ಷೆ ಗೀತ ಎಂ., ಅನುಪಮ ರೋಜಲಿನ್, ಶೋಭಾ ಬಿ.ಹೆಚ್., ಸರಿತಾ ಕೆ.ಬಿ. ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ವಿಪತ್ತಿನ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗಿದ್ದು, ಸಂಕಷ್ಟದಲ್ಲಿರುವ ಜನರ ನೆರವಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ಸಂಘಟನೆ ಮನವಿ ಮಾಡಿದೆ.

₹10,000 aid from the KaRaVe Swabhimani faction for Nepal natural disaster victims   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close