18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ; 7 ವರ್ಷಗಳಿಂದ ನಾಪತ್ತೆಯಾಗಿದ್ದ ರೌಡಿ ಆಸಾಮಿ ದಸ್ತಗಿರಿ- Accused arrested after evading capture for 18 years; notorious figure arrested after being missing for 7 years.

 SUDDILIVE || SHIVAMOGGA

18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ; 7 ವರ್ಷಗಳಿಂದ ನಾಪತ್ತೆಯಾಗಿದ್ದ ರೌಡಿ ಆಸಾಮಿ ದಸ್ತಗಿರಿ- Accused arrested after evading capture for 18 years; notorious figure arrested after being missing for 7 years

Accused, arrest



ಶಿವಮೊಗ್ಗ: ನ್ಯಾಯಾಲಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕಾರ್ಗಲ್‌ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಂದೆಡೆ, ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಆಸಾಮಿಯನ್ನು ಶಿಕಾರಿಪುರ ಟೌನ್‌ ಪೊಲೀಸರು ಬಂಧಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ

ಜೋಗ ಪೊಲೀಸ್ ಠಾಣೆಯ ಗುನ್ನೆ ನಂ. 13/2007, ಕಲಂ 379 ಐಪಿಸಿ ಪ್ರಕರಣದ ಆರೋಪಿಯಾಗಿರುವ ಗದಗ ಜಿಲ್ಲೆಯ ನಿವಾಸಿ ಇಮ್ರಾನ್‌ ಕಳೆದ 18 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು.

ಈ ಪ್ರಕರಣವು ಸಾಗರದ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸಿಸಿ ನಂ.184/2007ರಲ್ಲಿ ವಿಚಾರಣೆಯಲ್ಲಿದ್ದು, ಆರೋಪಿಯನ್ನು ಎಲ್‌ಪಿಆರ್‌ (Long Pending Report) ಪ್ರಕರಣವೆಂದು ಘೋಷಿಸಿ ಆತನ ವಿರುದ್ಧ ಬಂಧನ ವಾರೆಂಟ್‌ ಜಾರಿಯಾಗಿತ್ತು.


ಪ್ರಸ್ತುತ ಕಾರ್ಗಲ್‌ ಪೊಲೀಸ್ ಠಾಣೆಯ ಪ್ರೋಸೆಸ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಮ್ರಾನ್‌ನನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಆಸಾಮಿ ಬಂಧನ

ಇದೇ ವೇಳೆ ಶಿಕಾರಿಪುರ ಟೌನ್‌ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿ ಇಬ್ರಾಹಿಂ ಕಳೆದ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಆತನ ಚಲನವಲನ ಹಾಗೂ ವಿಳಾಸದ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ.

ಶಿಕಾರಿಪುರ ಟೌನ್‌ ಠಾಣೆಯ ಪಿಎಸ್‌ಐ ಶ್ರೀ ಶರತ್‌ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ರಾಹಿಂನನ್ನು ದಸ್ತಗಿರಿ ಮಾಡಿದೆ. ಬಳಿಕ ಮುಂಜಾಗ್ರತಾ ಕ್ರಮವಾಗಿ ಆತನ ವಿರುದ್ಧ ಪಿಎಆರ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳು ಹಾಗೂ ರೌಡಿ ಆಸಾಮಿಗಳ ಪತ್ತೆಗೆ ಪೊಲೀಸರು ಮುಂದುವರಿಸಿರುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

Accused arrested after evading capture for 18 years; notorious figure arrested after being missing for 7 years

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close